ಸಾರಾಂಶ
ಫ್ಯಾಕ್ಟರಿ, ಗೋದಾಮಿನ ಮೇಲೆ ಸಿಸಿಬಿ ದಾಳಿ ಮಾಡಿ ₹95 ಲಕ್ಷ ಮೌಲ್ಯದ ಬ್ರಾಂಡೆಡ್ ಕಂಪನಿಗಳ ನಕಲಿ ಉತ್ಪನ್ನ ಜಪ್ತಿ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿಷ್ಠಿತ ಕಂಪನಿಗಳ ಸೋಪು, ಹ್ಯಾಂಡ್ ವಾಶ್, ಟೀ ಪುಡಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ನಕಲಿಯಾಗಿ ತಯಾರಿಸಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಫ್ಯಾಕ್ಟರಿ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ದಾಳಿ ಮಾಡಿ ₹95 ಲಕ್ಷ ಮೌಲ್ಯದ ನಕಲಿ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ.ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕನಗದ ಗೋದಾಮುವೊಂದರಲ್ಲಿ ಹಿಂದೂಸ್ಥಾನ್ ಯುನಿಲಿವರ್, ರೆಕಿಟ್ ಬೆಂಕಿಸರ್ ಇಂಡಿಯಾ ಕಂಪನಿಯ ಉತ್ಪನ್ನಗಳಾದ ಸರ್ಫ್ ಎಕ್ಸೆಲ್, ವಿಮ್ ಲಿಕ್ವಿಡ್, ಲೈಫ್ ಬಾಯ್ ಹ್ಯಾಂಡ್ ವಾಶ್, ರಿನ್, ವ್ಹೀಲ್ ಡಿಟರ್ಜೆಂಟ್ ಪುಡಿ, ಬ್ರೂಕ್ ಬಾಂಡ್ ರೆಡ್ ಲೇಬಲ್ ಟೀ ಪುಡಿ, ತ್ರಿ ರೋಸಸ್ ಟೀ ಪುಡಿ, ಲೈಜೋಲ್, ಹಾರ್ಪಿಕ್ ಉತ್ಪನ್ನಗಳನ್ನು ನಕಲಿಯಾಗಿ ತಯಾರಿಸಿ ದಾಸ್ತಾನು ಮಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಸಿಕ್ಕಿದೆ. ಗೋದಾಮಿನ ಮೇಲೆ ದಾಳಿ ಮಾಡಿ ನಕಲಿ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.
ನಂತರ ತನಿಖೆಗೆ ಇಳಿದ ಸಿಸಿಬಿ ಅಧಿಕಾರಿಗಳು ಈ ನಕಲಿ ಉತ್ನನ್ನಗಳನ್ನು ತಯಾರಿಸುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಪುರ ಮತ್ತು ಬಿದರಹಳ್ಳಿಯ ಫ್ಯಾಕ್ಟರಿ ಮತ್ತು ಗೋದಾಮಿನ ಮೇಲೆ ದಾಳಿ ನಕಲಿ ಉತ್ಪನ್ನಗಳು ಹಾಗೂ ತಯಾರಿಕೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.