ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ 66 ರಲ್ಲಿ ಸಾಗುತ್ತಿದ್ದ ಖಾಸಗಿ ಎಕ್ಸ್‌ ಪ್ರೆಸ್‌ ಬಸ್ಸಿಗೆ ಹಳೆಯಂಗಡಿ ಬಳಿ ಗುಡುಗ ಬಡಿದು ಮುಂಭಾಗದ ಗಾಜು ಪುಡಿಯಾದ ಅಪರೂಪದ ಘಟನೆ ನಡೆದಿದೆ. ಘಟನೆಯಲ್ಲಿ ಬಸ್‌ ಎದುರುಭಾಗದಲ್ಲಿ ಕುಳಿತಿದ್ದ ಪ್ರಯಾಣಿಕ ಮಹಿಳೆ, ಬಸ್‌ ಚಾಲಕ ಗಾಯಗೊಂಡಿದ್ದಾರೆ.

ಮೂಲ್ಕಿ: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ 66 ರಲ್ಲಿ ಸಾಗುತ್ತಿದ್ದ ಖಾಸಗಿ ಎಕ್ಸ್‌ ಪ್ರೆಸ್‌ ಬಸ್ಸಿಗೆ ಹಳೆಯಂಗಡಿ ಬಳಿ ಗುಡುಗ ಬಡಿದು ಮುಂಭಾಗದ ಗಾಜು ಪುಡಿಯಾದ ಅಪರೂಪದ ಘಟನೆ ನಡೆದಿದೆ. ಘಟನೆಯಲ್ಲಿ ಬಸ್‌ ಎದುರುಭಾಗದಲ್ಲಿ ಕುಳಿತಿದ್ದ ಪ್ರಯಾಣಿಕ ಮಹಿಳೆ, ಬಸ್‌ ಚಾಲಕ ಗಾಯಗೊಂಡಿದ್ದಾರೆ.ಗಿಡುಗ ಡಿಕ್ಕಿಯಾಗಿ ಬಸ್ಸಿನ ಮುಂಭಾಗದ ಗಾಜು ಪುಡಿಯಾಗಿ ಗಾಜಿನ ಚೂರುಗಳು ತನ್ನ ಮೇಲೆ ಬಿದ್ದು ಗಾಯವಾಗಿ ರಕ್ತಸೋರುತ್ತಿದ್ದರೂ ವಿಚಲಿತನಾಗದ ಲಕ್ಷ್ಮಿ ಗಣೇಶ್ ಬಸ್ಸಿನ ಚಾಲಕ ಹರೀಶ್ ಪೂಜಾರಿ ಕೂಡಲೇ ಬಸ್‌ ನಿಲ್ಲಿಸಿದ್ದಾರೆ. ಬಳಿಕ ಬಸ್ಸಿನ ಎದುರಿನ ಭಾಗದಲ್ಲಿ ಕುಳಿತಿದ್ದ ಮಹಿಳೆಗೆ ಪೆಟ್ಟಾಗಿರುವುದನ್ನು ಗಮನಿಸಿ, ಕೂಡಲೇ ಅವರ ಆರೈಕೆಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.

ಬಸ್ಸಿನೊಳಕ್ಕೆ ಬಿದ್ದ ಗಿಡುಗ ಬಿದ್ದು ಮೃತಪಟ್ಟಿದೆ. ಈ ದೃಶ್ಯ ಬಸ್ಸಿನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಬಸ್ಸಿನ ಚಾಲಕನ ಕರ್ತವ್ಯ ಪ್ರಜ್ಞೆಗೆ ಎಲ್ಲರ ಪ್ರಶಂಸೆ ವ್ಯಕ್ತವಾಗಿದೆ. ಆಕಾಶದಲ್ಲಿ ವಿಮಾನಕ್ಕೆ ಹಕ್ಕಿಗಳು ಬಡಿದು ಅವಘಡ ಸಂಭವಿಸುವುದು ಸಾಮಾನ್ಯವಾಗಿದ್ದು ಆದರೆ ರಸ್ತೆಯಲ್ಲಿ ಬಸ್ಸಿಗೆ ಹಕ್ಕಿ ಡಿಕ್ಕಿ ಹೊಡೆದು ಸಂಭವಿಸಿದ ಅವಘಡ ವಿಶೇಷವಾಗಿದೆ.