ಸಾರಾಂಶ
ಬಾಳೆಹೊನ್ನೂರು: ಹೋಬಳಿಯ ವಿವಿಧೆಡೆ ಸುರಿಯುತ್ತಿರುವ ಮಳೆಗೆ ಪ್ರತ್ಯೇಕ ಎರಡು ಕಡೆಗಳಲ್ಲಿ ಮರಬಿದ್ದು ವಿದ್ಯುತ್ ಲೈನ್ ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿದೆ
ಬಾಳೆಹೊನ್ನೂರು: ಹೋಬಳಿಯ ವಿವಿಧೆಡೆ ಸುರಿಯುತ್ತಿರುವ ಮಳೆಗೆ ಪ್ರತ್ಯೇಕ ಎರಡು ಕಡೆಗಳಲ್ಲಿ ಮರಬಿದ್ದು ವಿದ್ಯುತ್ ಲೈನ್ ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿದೆ.
ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದಲ್ಲಿ ಬುಧವಾರ ಸಂಜೆ ಮಳೆಗೆ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಮೆಣಸುಕೊಡಿಗೆ ಸಮೀಪದ ಕುಂಬತ್ತಿ ಗ್ರಾಮದ ಸುಶೀಲಮ್ಮ ಎಂಬುವರ ಮನೆಯ ದನದ ಕೊಟ್ಟಿಗೆಗೆ ಹೊನ್ನೆ ಮರವೊಂದು ಬಿದ್ದು ಕೊಟ್ಟಿಗೆಗೆ ಹಾನಿಯಾಗಿದೆ. ಕೊಟ್ಟಿಗೆಯಲ್ಲಿದ್ದ ಹಸುಗಳಿಗೆ ಯಾವುದೇ ತೊಂದರೆ ಯಾಗಿಲ್ಲ.ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂಗಾರು ಮಳೆ ಸಾಧಾರಣ ಪ್ರಮಾಣದಲ್ಲಿ ಮುಂದುವರೆದಿದ್ದು, ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ. ಭದ್ರಾನದಿಯಲ್ಲಿ ನಿಧಾನಗತಿಯಲ್ಲಿ ನೀರಿನ ಹರಿವು ಏರಿಕೆಯಾಗುತ್ತಿದೆ. ೧೩ಬಿಹೆಚ್‌ಆರ್ ೪:ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿರುವುದು.--೧೩ಬಿಹೆಚ್‌ಆರ್ ೫:
ಬಾಳೆಹೊನ್ನೂರು ಸಮೀಪದ ಮೆಣಸುಕೊಡಿಗೆ ಕುಂಬತ್ತಿ ಗ್ರಾಮದ ಸುಶೀಲಮ್ಮ ಎಂಬುವರ ಮನೆಯ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿರುವುದು.