ಕಳೆದ ಕೆಲವು ದಿನಗಳಿಂದ ಮಾಧ್ಯಮ ಹಾಗೂ ಸೊಸಿಯಲ್‌ ಮಿಡಿಯಾಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಕರ್ನಾಟಕ ಸರ್ಕಾರದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮದ್ಯದಂಗಡಿ ಪರವಾಣಿಗೆ ನೀಡಲು ಹಣ ಕೇಳಿದ್ದಾರೆಂದು ಆರೋಪ ಮಾಡುತ್ತಿರುವುದು ಖಂಡನೀಯ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಡಾ.ಎ.ಆರ್.ಬೆಳಗಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸ್ಥಳೀಯ ತಮ್ಮದೇ ಕಚೇರಿಯಲ್ಲಿ ಮಾತನಾಡಿದ ಅವರು, ಈಗ ಅಮಾನತ್ತಾಗಿರುವ ಅಧಿಕಾರಿ ಜೊತೆಗೆ ಸಚಿವ ಆರ್.ಬಿ.ತಿಮ್ಮಾಪುರ ಆಗಲಿ ಅಥವಾ ಅವರಿಗೆ ಸಂಬಂಧಪಟ್ಟ ಯಾರೊಬ್ಬರು ಮಾತನಾಡಿರುವುದಿಲ್ಲ. ಇದು ಸಚಿವರ ತೇಜೋವಧೆಗಾಗಿ ನಡೆಯುತ್ತಿರುವ ವ್ಯರ್ಥ ಪ್ರಯತ್ನವಾಗಿದೆ. ಇದೇ ವಿಷಯದ ಕುರಿತು ವಿರೋಧ ಪಕ್ಷದ ಕೆಲ ಮುಖಂಡರು ಸಚಿವರ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ವಿರೋಧ ಪಕ್ಷದ ಮುಖಂಡರಾದ ಆರ್.ಅಶೋಕ ಮತ್ತು ಚಲವಾದಿ ನಾರಾಯಣ ಸ್ವಾಮಿಯಾಗಿರಲಿ ಅವರ ಹತ್ತಿರ ಏನಾದರೂ ದಾಖಲೆಗಳಿದ್ದರೇ ಬಿಡುಗೊಡೆಗೊಳಿಸಿ, ಇಲ್ಲವೇ ಸತ್ಯಾಂಶಕ್ಕಾಗಿ ಅಮಾನತ್ತುಗೊಂಡ ಅಧಿಕಾರಿಯನ್ನು ಬೇಕಾದರೇ ಮರು ಪರೀಕ್ಷೆಗೆ ಒಳಪಡಿಸಲಿ. ಅದು ಬಿಟ್ಟು ಸಚಿವರ ಮೇಲೆ ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಬೇಕು. ಇಲ್ಲವಾದಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ಧ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಸೇವಾದಳ ಯುವ ಅಧ್ಯಕ್ಷ ಪ್ರಕಾಶ ಉತ್ತೂರ ಮಾತನಾಡಿ, ಬಾಗಲಕೋಟೆ ಜಿಲ್ಲಾ ಹಿರಿಯ ರಾಜಕಾರಣಿ ಸರಳ ಸಜ್ಜನಿಕೆಯ ಸಚಿವರಾದ ಆರ್.ಬಿ.ತಿಮ್ಮಾಪುರ ಮೇಲೆ ಸುಳ್ಳು ಆರೋಪದ ತೇಜೋವಧೆ ಮಾಡುವುದನ್ನು ವಿರೋಧ ಪಕ್ಷದ ನಾಯಕರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.