ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ಬಿಜಿಮೋಳೆ ಗ್ರಾಮದಲ್ಲಿ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಧ್ಯಮದ ಜವಾಬ್ದಾರಿ ಇಲ್ಲದ ವ್ಯಕ್ತಿ ಅನಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಾಯಿಗೆ ಬಂದಂತೆ ಮಾತನಾಡಿರುವುದು ತನ್ನ ಗಮನಕ್ಕೆ ಬಂದಿದೆ. ದೇಶದ ಕಾನೂನು ಎನ್ನುವುದನ್ನು ತೋರಿಸಬೇಕಾಗುತ್ತದೆ. ಉದ್ಧಟನಕ್ಕೆ ಶೀಘ್ರದಲ್ಲಿ ಇತಿಶ್ರೀ ಹಾಡಲಾಗುವುದು ಎಂದರು.

ಬಿಜಿಪುರ ಹೋಬಳಿಯ ಸುಮಾರು 32 ಗ್ರಾಮಗಳಲ್ಲಿ 4.90 ಕೋಟಿ ರು. ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಜೊತೆಗೆ 1.25 ಕೋಟಿ ಅನುದಾನದಲ್ಲಿ 35 ಗ್ರಾಮಗಳಲ್ಲಿ ಇರುವ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಜನರಿಗೆ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.


ತಾಲೂಕಿನ ಮಲ್ಲಿನಾಥಪುರ, ಕ್ಯಾತನಹಳ್ಳಿ,ರಾವಣಿ, ಕುಂದೂರು, ತೆಂಕಹಳ್ಳಿ, ತಿಗಡಹಳ್ಳಿ, ಕೋಣನಕೊಪ್ಪಲು, ಕಂಚುಗಹಳ್ಳಿ, ದಾಸನದೊಡ್ಡಿ, ಪಂಡಿತಹಳ್ಳಿ, ಬಾಚನಹಳ್ಳಿ, ಚೊಟ್ಟನಹಳ್ಳಿ, ಚಂದಹಳ್ಳಿ, ನೆಟ್ಕಲ್, ಮಂಚನಹಳ್ಳಿ, ಹೊಸಹಳ್ಳಿ, ಬಿಟಿಕೊಪ್ಪಲ್ಲು, ಬೆಳಕವಾಡಿ, ಜವನಗಹಳ್ಳಿ, ಕಿರಗಸೂರು, ಕಗ್ಗಲೀಪುರ, ಹೊನಗಹಳ್ಳಿ, ಒಕ್ಕರಹಳ್ಳಿ, ವಾಸುವಳ್ಳಿ, ಬಿಜಿಪುರ, ಉತ್ತೂರು, ಐನೋರಹುಂಡಿ, ಕಣಿಕಳ್ಳಿ, ಕಲ್ಯಾಣಿಕೊಪ್ಪಲು, ಹಾಲಗಟ್ಟಿಕೊಪ್ಪಲು, ಸೋಮನಹಳ್ಳಿ ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ದೇವಸ್ಥಾನ ಜೀರ್ಣೋದ್ದಾರಕ್ಕೆ ಶಾಸಕರು ಚಾಲನೆ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿರಾಜು, ಮನ್ಮುಲ್‌ ನಿರ್ದೇಶಕರಾದ ಆರ್.ಎನ್ ವಿಶ್ವಾಸ್, ಕೃಷ್ಣೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು, ಮುಖಂಡರಾದ ಅಂಬರೀಷ್, ಪುಟ್ಟಸ್ವಾಮಿ, ರವೀಂದ್ರಕುಮಾರ್, ಮಹೇಶ್, ಚಂದ್ರಹಾಸ್, ಕುಮಾರ್, ನಾಗರಾಜು, ಸುಷ್ಮಾರಾಜು, ವೇದಮೂರ್ತಿ, ಕುಮಾರಸ್ವಾಮಿ, ಎಚ್.ಕೆ ಕೃಷ್ಣಮೂರ್ತಿ, ಎಂ.ಪಿ ಶಿವಕುಮಾರ್, ಶಶಿರಾಜ್ ಸೇರಿದಂತೆ ಇತರರು ಇದ್ದರು.