ಧರ್ಮಸ್ಥಳ ಬಗ್ಗೆ ಅಪಪ್ರಚಾರ: ಜಗಳೂರಲ್ಲೂ ಪ್ರತಿಭಟನೆ

| Published : Aug 26 2025, 01:03 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಸೋಮವಾರ ಭಾರತೀಯ ಜನತಾ ಪಾರ್ಟಿಯ ಜಗಳೂರು ಮಂಡಲ ಮುಖಂಡರು, ಕಾರ್ಯಕರ್ತರು ಜಗಳೂರಿನ ಪ್ರವಾಸಿ ಮಂದಿರದಿಂದ ಹಳೇ ಗಾಂಧಿ ವೃತ್ತ , ಹೊಸ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಜಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಸೋಮವಾರ ಭಾರತೀಯ ಜನತಾ ಪಾರ್ಟಿಯ ಜಗಳೂರು ಮಂಡಲ ಮುಖಂಡರು, ಕಾರ್ಯಕರ್ತರು ಜಗಳೂರಿನ ಪ್ರವಾಸಿ ಮಂದಿರದಿಂದ ಹಳೇ ಗಾಂಧಿ ವೃತ್ತ , ಹೊಸ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಹಿಂದುಗಳಿಗೆ ಪ್ರಮುಖ ಹಾಗೂ ಪವಿತ್ರ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅವಲ ಕರ್ನಾಟಕವಲ್ಲದೆ ದೇಶದ ಅತ್ಯಂತ ಕೋಟ್ಯಂತರ ಭಕ್ತಸಮೂಹವಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರಿಗೆ ಅನ್ನ ದಾಸೋಹ ನಡೆಯುತ್ತದೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆತರುವ ಹುನ್ನಾರದಿಂದ ಕೆಲ ಕಿಡಿಗೇಡಿಗಳು ಹಾಗೂ ಎಡಚರರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ನವೀನ್ ಕುಮಾರ್, ಜಿಪಂ ಮಾಜಿ ಸದಸ್ಯ ಎಸ್. .ಕೆ. ಮಂಜುನಾಥ್, ಶಿವಕುಮಾರ್ ಸ್ವಾಮಿ, ಬಿಸ್ತುವಳ್ಳಿ ಬಾಬು, ಬಿಜೆಪಿ ಮುಖಂಡ ತುಪ್ಪದಳ್ಳಿ ಪೂಜಾರ್ ಸಿದ್ದಪ್ಪ, ಬಿದರಕೆರೆ ರವಿ, ಆರಾಧ್ಯ ಕ್ಯಾಂಪ್ ಓಬಳೇಶ್, ತಿರುಕಪ್ಪರ ರಾಜಣ್ಣ, ಸೂರಲಿಂಗಪ್ಪ, ಕುಬೇಂದ್ರಪ್ಪ, ಮದಕರಿ, ತಮಲೇಹಳ್ಳಿ ಶ್ರೀನಿವಾಸ್, ಸಿದ್ದಪ್ಪ, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ, ಮಹಿಳೆಯರು ಮತ್ತಿತರರು ಪಾಲ್ಗೊಂಡಿದ್ದರು.

- - -

-25ಜೆ.ಜಿ.ಎಲ್.2.ಜೆಪಿಜಿ:

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಖಂಡಿಸಿ ಜಗಳೂರಲ್ಲಿ ಬಿಜೆಪಿ ಮಂಡಲದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಲಾಯಿತು.