ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಕುಟುಂಬಗಳ ಕೊಡವ ನಡುವಿನ ಹಾಕಿ ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಗುರುವಾರದ ಪಂದ್ಯಗಳಲ್ಲಿ ನಾಪಂಡ, ಚೇಂದಂಡ, ಚೆಟ್ಟೋಳಂಡ, ಸೋಮಯಂಡ, ಮಚ್ಚಾರಂಡ, ಕಂಗಂಡ, ಮಾತ್ರಂಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.
ದಿನದ ಪಂದ್ಯದಲ್ಲಿ ಕಂಗಂಡ ಮತ್ತು ಮಾಚಮಾಡ ತಂಡಗಳು ಸಮಬಲ ಸಾಧಿಸಿದವು. ಬಳಿಕ ಟೈಬ್ರೇಕರ್ ನಲ್ಲಿ ಕಂಗಡ ತಂಡವು ನಾಲ್ಕು ಗೋಲು ಗಳಿಸಿದರೆ ಮಾಚಮಾಡ ತಂಡ ಎರಡು ಗೋಲು ಗಳಿಸಿತು. ಕಂಗಂಡ ಮಾಚಮಾಡ ವಿರುದ್ಧ ಗೆಲವು ಸಾಧಿಸಿತು.ಮತ್ತೊಂದು ಟೈ ಬ್ರೇಕರ್ ಪಂದ್ಯದಲ್ಲಿ ಪೊಂಜಂಡ ತಂಡವು ಕಾಲಚಂಡ ವಿರುದ್ಧ 4-3 ಅಂತರದ ಗೆಲವು ಸಾಧಿಸಿತು. ಕೊಟ್ಟಂಗಡ ಮತ್ತು ಅಚ್ಚಪಂಡ ತಂಡಗಳ ನಡುವೆಯೂ ಸಮಬಲದ ಸೆಣಸಾಟ ನಡೆಯಿತು. ಬಳಿಕ ನಡೆದ ಟೈ ಬ್ರೇಕರ್ ನಲ್ಲಿ ಕೊಟ್ಟಂಗಡ ತಂಡದ ಆಟಗಾರರು ಐದು ಗೋಲು ಗಳಿಸಿದರು. ಅಚ್ಚಪಂಡ ತಂಡದ ಆಟಗಾರರು 3 ಗೋಲು ಗಳಿಸಿದರು. ಈ ಪಂದ್ಯದಲ್ಲಿ ಕೊಟ್ಟಂಗಡ ತಂಡ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಇನ್ನುಳಿದ ಪಂದ್ಯಗಳಲ್ಲಿ ನಾಪಂಡ ಐದಂಡ ವಿರುದ್ಧ ಭರ್ಜರಿ ಜಯ ಸಾಧಿಸಿತು. ನಾಪಂಡ ಐದು ಗೋಲು ಗಳಿಸಿದರೆ ಐದಂಡ ಕೇವಲ ಒಂದು ಗಳಿಸಲಷ್ಟೇ ಶಕ್ತವಾಯಿತು. ಚೆಂದಂಡ ತಂಡಕ್ಕೆ ಮಂಡೆಯಂಡ ವಿರುದ್ಧ 4-0, ಶಿವಚಾಳಿಯಂಡ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪಚೆಟ್ಟೋಳಂಡ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.ಸೋಮಯಂಡ ಮತ್ತು ನಿಡುಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸೋಮಯಂಡ 3- 0 ಅಂತರದಿಂದ ಗೆಲವು ಸಾಧಿಸಿದರೆ ಶಾಂತೇಯಂಡ ಮತ್ತು ಮಚ್ಚಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಚ್ಚಾರಂಡ 2- 1 ಅಂತರದಿಂದ ಶಾಂತೆಯಂಡ ವಿರುದ್ಧ ಜಯ ಗಳಿಸಿತು. ಮಾತ್ರ ತಂಡಕ್ಕೆ ಅಜ್ಜಟ್ಟಿರ ವಿರುದ್ಧ 4 0 ಅಂತರದ ಗೆಲವು ಲಭಿಸಿತು.
ಉಳಿದಂತೆ ಪಾಂಡಂಡ ಕಲ್ಲಂಗಡ ವಿರುದ್ಧ 2-1 ಅಂತರದಿಂದ, ಚಟ್ಟಂಗಡ ಕಾರೇರ ವಿರುದ್ಧ 4-0 ಅಂತರದಲ್ಲಿ ಮಲ್ಲಜಿರ ಬಟ್ಟಿರ ವಿರುದ್ಧ 3-0 ಅಂತರದಲ್ಲಿ, ಅಲ್ಲಪಂಡ ಚಂಗುಲಂಡ ವಿರುದ್ಧ 3-1 ಅಂತರದಲ್ಲಿ, ಅಲ್ಲಾರಂಡ ಪಟ್ಟ ಚರುವಂಡ ವಿರುದ್ಧ 2-1 ಅಂತರದಲ್ಲಿ, ಪೆಮ್ಮಂಡ ಮುಕ್ಕಾಟಿರ (ಕುಂಜಿಲಗೇರಿ) ವಿರುದ್ಧ 3- 0 ಅಂತರದಲ್ಲಿ, ಕೊಂಗೆಟಿರ ಮಲ್ಲಂಡ ವಿರುದ್ಧ 4-0 ಅಂತರದಲ್ಲಿ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು............
ಇಂದಿನ ಪಂದ್ಯಗಳು.........ಮೈದಾನ ಒಂದು9 ಗಂಟೆಗೆ: ಮೇರಿಯಂಡ-ಅಜ್ಜಿನಂಡ10 ಗಂಟೆಗೆ: ಮೇಚಂಡ-ನಂಬುಡಮಾಡ1 ಗಂಟೆಗೆ: ಬೊಪ್ಪಂಡ-ಕೋಡಿರ
.............ಮೈದಾನ ಎರಡು
9 ಗಂಟೆಗೆ: ಕರವಂಡ-ಬಲ್ಲಚಂಡ10 ಗಂಟೆಗೆ: ಬಾಚಿನಡಂಡ-ಕಳ್ಳಿಚಂಡ
11 ಗಂಟೆಗೆ: ಜಮ್ಮಡ-ಚೀಯಕಪೂವಂಡ1 ಗಂಟೆಗೆ: ಮುಕ್ಕಾಟಿರ(ಕಡಗದಾಳು)-ಚೆರುಮಮದಂಡ
2 ಗಂಟೆಗೆ: ಪಟ್ಟಡ-ಪಟ್ಟಮಾಡ.............ಮೈದಾನ 3
9 ಗಂಟೆಗೆ: ಕೂತಂಡ-ಮೀದೇರಿರ10 ಗಂಟೆಗೆ: ಬೇಪಾಡಿಯಂಡ-ಅಲ್ಲಂಡ
11 ಗಂಟೆಗೆ: ಮುಂಡಂಡ-ಚಿಂದಮಾಡ1 ಗಂಟೆಗೆ: ಮಾಪಣಮಾಡ-ಮಾಲೇಟಿರ(ಕುಂದ)
2 ಗಂಟೆಗೆ: ಮೂಕಂಡ-ಕುಪ್ಪಂಡ (ನಾಂಗಾಲ)