ಸಾರಾಂಶ
ಈ ಮುಂಚೆ ಶ್ರಾವಣದಲ್ಲಿ ಧಾರ್ಮಿಕ ಕಾರ್ಯಗಳು ಸಿದ್ದರಾಮೇಶ್ವರ ಮಠದಲ್ಲಿ ನೆರವೇರುತ್ತಿದ್ದವು. ಕಳೆದ ವರ್ಷದಿಂದ ಮಠದ ಆಸ್ತಿಯ ವಿಚಾರವಾಗಿ ಈಗಿರುವ ಪೀಠಾಧಿಪತಿ ಶ್ರೀಸಿದ್ದರಾಮೇಶ್ವರ ಶ್ರೀ ಮತ್ತು ಭಕ್ತರ ನಡುವೆ ನ್ಯಾಯ ನಡೆದಿದ್ದು, ಚೌಕಿಮಠದ ದೇವರಿಗೆ ರುದ್ರಾಭಿಷೇಕ ಮಾಡಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಯಲಬುರ್ಗಾ:
ಪಟ್ಟಣದ ಸಿದ್ದರಾಮೇಶ್ವರ ಸಂಸ್ಥಾನದ ಹಿರೇಮಠಕ್ಕೆ ಸೇರಿದ ಮೂಲಮಠವಾಗಿರುವ ಚೌಕಿಮಠದಲ್ಲಿ ಭಕ್ತರು ಶ್ರಾವಣ ಮಾಸದ ಕೊನೆಯ ಸೋಮವಾರ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮ ಪೊಲೀಸರ ಬಂದೋಬಸ್ತ್‌ನಲ್ಲಿ ನಡೆಯಿತು.ಮುಖಂಡರಾದ ದಾನನಗೌಡ ತೊಂಡಿಹಾಳ, ಸುರೇಶಗೌಡ ಶಿವನಗೌಡ್ರ ಮಾತನಾಡಿ, ಈ ಮುಂಚೆ ಶ್ರಾವಣದಲ್ಲಿ ಧಾರ್ಮಿಕ ಕಾರ್ಯಗಳು ಸಿದ್ದರಾಮೇಶ್ವರ ಮಠದಲ್ಲಿ ನೆರವೇರುತ್ತಿದ್ದವು. ಕಳೆದ ವರ್ಷದಿಂದ ಮಠದ ಆಸ್ತಿಯ ವಿಚಾರವಾಗಿ ಈಗಿರುವ ಪೀಠಾಧಿಪತಿ ಶ್ರೀಸಿದ್ದರಾಮೇಶ್ವರ ಶ್ರೀ ಮತ್ತು ಭಕ್ತರ ನಡುವೆ ನ್ಯಾಯ ನಡೆದಿದ್ದು, ಚೌಕಿಮಠದ ದೇವರಿಗೆ ರುದ್ರಾಭಿಷೇಕ ಮಾಡಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಯೂ ಕೂಡ ಶ್ರೀಗಳು ತಮ್ಮ ಪರವಾಗಿರುವ ಕೆಲ ಭಕ್ತರನ್ನು ಇಲ್ಲಿಗೆ ಕಳುಹಿಸಿ ಗೊಂದಲ ಸೃಷ್ಟಿಸಿದ್ದಾರೆಂದು ಆರೋಪಿಸಿದರು.
ಸಿದ್ದರಾಮೇಶ್ವರ ಸ್ವಾಮೀಜಿಗಳು ಮಠದ ಪೀಠಾಧಿಪತಿಯಾಗಿ ೨೫ ವರ್ಷ ಕಳೆದರೂ ಮಠಕ್ಕೆ ಸಂಬಂಧಿಸಿದ ಆಸ್ತಿ ಮತ್ತು ಕೆಲ ವ್ಯವಹಾರಗಳ ಕುರಿತು ಲೆಕ್ಕಪತ್ರ ನೀಡುತ್ತಿಲ್ಲ. ಮಠದ ಆಸ್ತಿಯನ್ನು ತಮ್ಮ ಕುಟುಂಬಸ್ಥರಿಗೆ ಪರಭಾರೆ ಮಾಡಿದ್ದಾರೆ. ಅಲ್ಲದೆ ಮಠದಲ್ಲಿ ಕುಟುಂಬಸ್ಥರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಮಠದ ಆಸ್ತಿ ಮಠಕ್ಕೆ ಸೇರ್ಪಡೆಯಾಗಬೇಕು. ಯಾವುದೋ ವ್ಯಕ್ತಿಗೆ ಸೇರಬಾರದು ಎಂದರು.ಇದೇ ವೇಳೆ ಪೂಜೆಯ ವಿಚಾರವಾಗಿ ಭಕ್ತರಿಂದ ವಾಗ್ವಾದ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಈ ವೇಳೆ ಮುಖಂಡರಾದ ವೀರನಗೌಡ ಬನ್ನಪ್ಪಗೌಡ್ರ, ಬಸವರಾಜ ಅಧಿಕಾರಿ, ಅಶೋಕ ಬೇಲೇರಿ, ಮುದಕಪ್ಪ ಮಾಸ್ತಾರ ನರೆಗಲ್, ಸಿದ್ರಾಮೇಶ ಬೇಲೇರಿ, ಅಂದಪ್ಪ ಬೇಲೇರಿ, ಶರಣಪ್ಪ ಬೇಲೇರಿ, ಸಂಗಪ್ಪ ಹಳ್ಳಿ, ಸಿದ್ದಪ್ಪ ದಂಡಿನ, ಶರಣಪ್ಪ ಹಳ್ಳಿ, ಮಲ್ಲಿಕಾರ್ಜುನ ಉಳ್ಳಾಗಡ್ಡಿ ಸೇರಿದಂತೆ ಮತ್ತಿತರರು ಇದ್ದರು.