ಅಭಿಮಾನಿಗಳಿಂದ ಸಿ.ಪಿ.ಉಮೇಶ್ ಹುಟ್ಟುಹಬ್ಬ ಆಚರಣೆ

| Published : Mar 16 2025, 01:47 AM IST

ಅಭಿಮಾನಿಗಳಿಂದ ಸಿ.ಪಿ.ಉಮೇಶ್ ಹುಟ್ಟುಹಬ್ಬ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿ.ಪಿ. ಉಮೇಶ್ ಅವರುಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಬೆಳೆಯಲು ಪ್ರಮುಖ ಪಾತ್ರ ವಹಿಸಿದ್ದರು. ಅವರ ಅವಧಿಯಲ್ಲಿ ಬಿಜೆಪಿ ಕಟ್ಟುವಲ್ಲಿ ಅವರ ಶ್ರಮ ಮರೆಯುವಂತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್ ಮಾತನಾಡಿ, ಸಿ.ಪಿ. ಉಮೇಶ್ ಅವರು ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಬೆಳೆಯಲು ಪ್ರಮುಖ ಪಾತ್ರ ವಹಿಸಿದ್ದರು. ಅವರ ಅವಧಿಯಲ್ಲಿ ಬಿಜೆಪಿ ಕಟ್ಟುವಲ್ಲಿ ಅವರ ಶ್ರಮ ಮರೆಯುವಂತಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಅಭಿಮಾನಿಗಳಿಂದ ಪುಳಿಯೋಗರೆ ಮತ್ತು ಸಿಹಿ ವಿತರಣೆ ಮಾಡಲಾಯಿತು. ಮುಖಂಡರಾದ ಎಚ್.ಆರ್.ಅರವಿಂದ್, ರಾಶಿ ಸಿದ್ದರಾಜುಗೌಡ, ಪ್ರಸನ್ನ, ನರಸಿಂಹಮೂರ್ತಿ, ಶಿವಕುಮಾರ್ ಇತರರು ಭಾಗವಹಿಸಿದ್ದರು.

ಪ್ರೇರಣಾ ಟ್ರಸ್ಟ್‌ನಲ್ಲಿ ಹುಟ್ಟುಹಬ್ಬ ಆಚರಣೆ:

ನಗರದ ಪ್ರೇರಣಾ ಟ್ರಸ್ಟ್‌ನಲ್ಲಿ ಬಿಜೆಪಿ ಮುಖಂಡರು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಅವರ ಜನ್ಮದಿನಾಚರಣೆ ಅಂಗವಾಗಿ ಪ್ರೇರಣಾ ಸಂಸ್ಥೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮಾತನಾಡಿ, ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ಅವರ ಜನ್ಮದಿನದ ಅಂಗವಾಗಿ ಪ್ರೇರಣಾ ಅಂಧ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿ ಸರಳವಾಗಿ ಆಚರಿಸಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಅವರ ಅಧ್ಯಕ್ಷ ಅವಧಿಯಲ್ಲಿ ಅಭೂತಪೂರ್ವ ಬದಲಾವಣೆ ಮಾಡಿ ಹೊಸ ಅಲೆಯನ್ನು ಸೃಷ್ಟಿಸಿದರು. ದೇವರು ಅವರಿಗೆ ಇನ್ನೂ ಉನ್ನತ ಹುದ್ದೆ ಅಲಂಕರಿಸುವಂತೆ ಶುಭ ಹಾರೈಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸತೀಶ್, ನಗರ ಘಟಕದ ಅಧ್ಯಕ್ಷ ವಸಂತ್, ಮುಖಂಡರಾದ ಜವರೇಗೌಡ, ಪ್ರಸನ್ನ, ಪುಟ್ಟಸ್ವಾಮಿ, ಮನು, ಸತೀಶ್, ಕೃಷ್ಣ, ರಾಜೇಶ್ ಭಾಗವಹಿಸಿದ್ದರು.

ಇಂದು ಭಾವತರಂಗ ಕನ್ನಡ ಹಳೆಯ ಸುಮಧುರ ಗೀತೆಗಳ ಕಾರ್ಯಕ್ರಮ

ಮಂಡ್ಯ:

ಭಾವಂತರಂಗ ಕಲಾವೃಂದ ವತಿಯಿಂದ ರಂಗ ಕಲಾವಿದ, ವಿಕಲಚೇತನ ಜಿ.ಕೆ.ಶಂಕರ್ ಇವರ ವೈದ್ಯಕೀಯ ಚಿಕಿತ್ಸಾ ನೆರವಿಗಾಗಿ ಮಾ.16ರಂದು ಸಂಜೆ 5.30ಕ್ಕೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಭಾವತರಂಗ ಕನ್ನಡ ಹಳೆಯ ಸುಮಧುರ ಗೀತೆಗಳ ನೀನಾದ ಸ್ವಯಂ ನುಡಿಸುವಿಕೆಯಲ್ಲಿ (ಲೈವ್) ಕಾರ್ಯಕ್ರಮ ನಡೆಯಲಿದೆ.

ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು ಕಾರ್ಯಕ್ರಮ ಉದ್ಘಾಟಿಸುವರು. ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಎಸ್.ಬಿ.ಎಜುಕೇಷನ್ ಟ್ರಸ್ಟ್‌ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಭಾಗವಹಿಸುವರು.

ಸಹ ಪ್ರಾಧ್ಯಾಪಕ ಡಾ.ಎಂ.ಬಿ.ಪ್ರಮೀಳಾ ಶಂಕರೇಗೌಡ, ಕಸಾಪ ನಗರಾಧ್ಯಕ್ಷೆ ಸುಜಾತ ಕೃಷ್ಣ, ಪೊಲೀಸ್ ಉಪಾಧೀಕ್ಷಕರಾದ ಪಿ.ಎಂ.ಯೋಗೇಂದ್ರಕುಮಾರ್, ಬಿ.ಚಲುವರಾಜು, ಸಿಪಿಐ ಎಂ.ರಮೇಶ್, ಪಿಡಿಓ ಕೆ.ಆರ್. ಕೃಷ್ಣಪ್ಪಗೌಡ, ಗುತ್ತಿಗೆದಾರ ಕೆ.ಬಿ.ಸದಾನಂದ, ಸಾರಿಗೆ ಸಂಚಾರಿ ನಿರೀಕ್ಷಕ ಡಿ.ಜಿ. ಪುಟ್ಟರಾಜು, ಕಿರಣ್‌ಕುಮಾರ್, ಮನ್ಮುಲ್ ನಿರ್ದೇಶಕರಾದ ಬಿ.ಆರ್. ರಾಮಚಂದ್ರು, ಯು.ಸಿ. ಶಿವಕುಮಾರ್, ಎಂ.ಎಸ್. ರಘುನಂದನ್, ಪತ್ರಕರ್ತ ಮೋಹನ್‌ಕುಮಾರ್ ರಾಗಿಮುದ್ದನಹಳ್ಳಿ ಇತರರು ಅತಿಥಿಗಳಾಗಿ ಭಾಗವಹಿಸುವರು.