ಸಾರಾಂಶ
ಬಸವನಬಾಗೇವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಪವರ್ ಸ್ಟಾರ್ ದಿ.ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಿದರು. ಮಂಗಳವಾರ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿ ಗುರು ಪತ್ತಾರ ಮಾತನಾಡಿ, ಅಪ್ಪು ನಮ್ಮನ್ನಗಲಿ ಇಂದಿಗೆ ಮೂರು ವರ್ಷವಾಯಿತು. ಆದರೆ ಅವರ ಆದರ್ಶ ಜೀವನ ಸಾಕಷ್ಟು ಯುವಕರಿಗೆ ಮಾದರಿಯಾಗಿದೆ. ಅನಾಥಾಶ್ರಮ ಸೇರಿದಂತೆ ಸಾಕಷ್ಟು ಬಡ ಕುಟುಂಬಗಳಿಗೆ ಸಹಾಯ ಮಾಡಿದ ಪುನಿತ್ ರಾಜಕುಮಾರ ಅವರು ಯಾವುದೇ ಪ್ರಚಾರ ಪಡೆದುಕೊಳ್ಳದೇ ನಿಜ ಜೀವನದಲ್ಲಿಯೂ ನಾಯಕನಾಗಿದ್ದರು. ಅಂತಹ ನಾಯಕನ ಅಭಿಮಾನಿ ಎಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆ. ಪುನಿತ್ ರಾಜಕುಮಾರ ಇಂದು ನಮ್ಮ ಜೊತೆಗಿಲ್ಲ .ಅವರ ಆದರ್ಶ ಜೀವನ ನಮಗೆಲ್ಲ ದಾರಿ ದೀಪವಾಗಿದೆ. ಪ್ರತಿಯೊಬ್ಬರೂ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುವ ಮೂಲಕ ಆದರ್ಶ ಜೀವನ ನಡೆಸುವಲ್ಲಿ ಹೆಜ್ಜೆ ಹಾಕೋಣ ಎಂದರು. ಈ ವೇಳೆ ಮುತ್ತು ಬಾಗೇವಾಡಿ, ಶಿವು ಅಂಗಡಿ, ಅಜಿತ್ ಶೆಟ್ಟಿ. ಮಂಜು ಕಲಾಲ, ಗುರು ಗಂಜಾಳ ಇದ್ದರು.