ಸಾರಾಂಶ
ಬ್ಯಾಡಗಿ: ಎಲ್ಲಿ ನೋಡಿದರಲ್ಲಿಯೂ ಜನವೋ ಜನ. ಹಾಡಿಗೆ ಹುಚ್ಚೆದ್ದು ಕುಣಿದ ಯುವಕರು. ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು...
ಇವೆಲ್ಲ ದೃಶ್ಯಗಳು ಬಿಗ್‌ಬಾಸ್ ಸೀಸನ್- 14ರ ವಿಜೇತ ಹನುಮಂತ ಅವರ ಗ್ರಾಮದೇವತೆ ಜಾತ್ರಾ ಮಹೋತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳು.ಯಾವುದೇ ಸೆಲೆಬ್ರಿಟಿಗಳಿಗಿಂತ ಕಡಿಮೆ ಇಲ್ಲದಂತೆ ಉತ್ತರ ಕರ್ನಾಟಕದ ಜಿಲ್ಲೆಯ ಜನಪದ ಗಾಯಕ ಹನುಮಂತನಿಗೆ ಮುಗಿಬಿದ್ದಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 6 ದಿನಗಳಿಂದ ಸತತವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಖಾಸಿಂ ಅಲಿ ಇವೆಂಟ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಹನುಮಂತ ಲಮಾಣಿ ಅವರ ಸಂಗೀತ ಸಂಜೆ ಕಾರ‍್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು.
ಹುಚ್ಚೆದ್ದು ಕುಣಿದ ಜನತೆ: ಜನಪದ ಶೈಲಿಯ ಹಾಡು ಹಾಗೂ ಉತ್ತರ ಕರ್ನಾಟಕದ ಭಾಷೆಯಿಂದ ಎಲ್ಲಡೆ ಖ್ಯಾತಿ ಗಳಿಸಿರುವ ಹನುಮಂತ ಅವರು ಇತ್ತೀಚೆಗೆ ಖಾಸಗಿ ವಾಹಿನಿ ನಡೆಸಿಕೊಟ್ಟ ಬಿಗ್ ಬಾಸ್ ವಿನ್ನರ್ ಸಹ ಆಗಿ ಉತ್ತರ ಕರ್ನಾಟಕಕ್ಕೆ ಕೀರ್ತಿ ತಂದಿದ್ದರು. ಅವರ ಮಾತು ಹಾಗೂ ಗಾಯನ ಕೇಳಲು ಚಾವಡಿ ಆವರಣದಲ್ಲಿ ತುಸು ಹೆಚ್ಚೆ ಎಂಬಂತೆ ಜನರು ಸೇರಿದ್ದು, ಕಾಲಿಡಲು ಸಹ ಜಾಗವಿಲ್ಲದಂತಾಗಿತ್ತು. ಇದರಿಂದ ಮನೆ ಹಾಗೂ ಗಿಡಗಳ ಮೇಲೆ ನಿಂತು ಹನುಮಂತು ಅವರ ಗಾಯನ ಕೇಳಲು ಜನರು ಮುಂದಾದ ದೃಶ್ಯಗಳು ಕಂಡುಬಂದವು.ಭಾರತೀಯ ಸಂಗೀತಕ್ಕಿದೆ ವಿಶ್ವಮನ್ನಣೆ: ಕಾರ‍್ಯಕ್ರಮ ಉದ್ಘಾಟಿಸಿದ ಮಾತನಾಡಿದ ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರು, ಭಾರತೀಯ ಸಂಗೀತ ಜಗತ್ತಿನಲ್ಲಿ ಶ್ರೇಷ್ಠತೆ ಪಡೆದಿದೆ. ಹಲವು ಸಂಗೀತ ಪ್ರಕಾರಗಳಿಗೆ ರಾಜ್ಯವೇ ಮೂಲವಾಗಿದ್ದು, ತನ್ಮೂಲಕ ಹಲವು ಸಂಗೀತ ರತ್ನಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ ಎಂದರು.ಜಾತ್ರೆಗಳಿಂದ ಧನಾತ್ಮಕತೆ: ವರ್ತಕ ಪ್ರಕಾಶ ಪಟ್ಟಣಶೆಟ್ಟಿ ಮಾತನಾಡಿ, ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮ ಹಾಗೂ ಪಟ್ಟಣದಲ್ಲಿ ಭಕ್ತಿಯ ಕುರಿತು ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಜೀವನದಲ್ಲಿ ನೆಮ್ಮದಿ ಜತೆಗೆ ಹಲವು ಬದಲಾವಣೆ ಉಂಟಾಗಲಿದೆ. ಇದೇ ಕಾರಣದಿಂದ ಭಾರತದಲ್ಲಿ ಜಾತ್ರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ ಎಂದರು.ವರ್ತಕ ರಾಜು ಮೋರಗೇರಿ ಮಾತನಾಡಿ, ಹನುಮಂತ ಲಮಾಣಿ ಸಂಗೀತ ಕಲೆಗೆ ಇರುವ ಶಕ್ತಿಯನ್ನು ತೋರಿಸಿದ್ದಾರೆ. ಹಾವೇರಿ ಹೆಸರು ಹನುಮಂತ ಲಮಾಣಿ ಅವರ ಕಂಠಸಿರಿ ಮೂಲಕ ದೇಶದ ಉದ್ದಗಲಕ್ಕೂ ಹಬ್ಬಿದೆ. ಸಂಗೀತ ಯಾರಪ್ಪನ ಸೊತ್ತಲ್ಲ. ಆದರೆ ಉತ್ತಮ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಲು ವೇದಿಕೆಗಳು ರೂಪಿಸಬೇಕಾಗಿದೆ ಎಂದರು.ಮಲ್ಲಿಕಾರ್ಜುನ ಶೆಟ್ಟರ, ಕೃಷ್ಣ ನವಲೆ, ರುದ್ರೇಶ ಎಲಿ, ಪ್ರಕಾಶ ಛತ್ರದ, ಅಂಬಾಲಾಲ್ ಜೈನ್, ಸಂತೋಷ ಕಬ್ಬೂರ, ವೀರೇಶ ಮಾಗನೂರ, ಗಂಗಣ್ಣ ಎಲಿ, ಚಂದ್ರಶೇಖರ ಗಾಣಿಗೇರ, ರಾಘವೇಂದ್ರ ಮಳ್ಳಪ್ಪನವರ, ವಿನಯ ಮಾಳೇನ ಹಳ್ಳಿ, ಪ್ರವೀಣ ಆಲದಗೇರಿ, ಪ್ರಶಾಂತ ಹಾಲನಗೌಡ್ರ, ಶಂಭು ಮಠದ, ಮೌನೇಶ ಕಮ್ಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು. ಎ.ಟಿ. ಪೀಠದ ಕಾರ್ಯಕ್ರಮ ನಿರ್ವಹಿಸಿದರು.ಮುತೈದೆಯಾದ ದೇವಿ: ಜಾತ್ರಾ ಮಹೋತ್ಸವದ ಅಂತಿಮ ದಿನವಾದ ಶುಕ್ರವಾರ ಬೆಳಗ್ಗೆ ದೇವಿಯ ಮೂರ್ತಿಯನ್ನು ಮರಳಿ ದೇವಸ್ಥಾನಕ್ಕೆ ತರಲಾಯಿತು.(ಮುತ್ತೈದೆ ಮಾಡಲಾಯಿತು) ಬಳಿಕ ಅನ್ನಸಂತರ್ಪಣೆ ನೆರವೇರಿತು.ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ರಾಣಿಬೆನ್ನೂರು: ದೆಹಲಿ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ, ಜಿಲ್ಲಾ, ತಾಲೂಕು ಘಟಕ, ಸ್ಥಳೀಯ ಪಿಕೆಕೆ ಇನಿಷಿಯೇಟಿವ್ಸ್, ನಗರಸಭೆ, ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದ ಆಶ್ರಯದಲ್ಲಿ ಮಾ. 8ರಂದು ಬೆಳಗ್ಗೆ 11ಕ್ಕೆ ನಗರದ ಶಿಕ್ಷಕರ ಪತ್ತಿನ ಸಹಕಾರಿ ಸಂಘದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು.ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಅವರು ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ. ಲತಾ ಮಳ್ಳೂರ ಅತಿಥಿಗಳಾಗಿ ಆಗಮಿಸುವರು. ಸ್ಥಳೀಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ರೇಣುಕಾ ಬಸೆನಾಯಕರ ಅಧ್ಯಕ್ಷತೆ ವಹಿಸುವರು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಕೆಂಚರೆಡ್ಡಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ರಾಜಶ್ರೀ ಸಜ್ಜನರ ವಿಶೇಷ ಆಹ್ವಾನಿತರಾಗಿ ಆಗಮಿಸುವರು.
ಸ್ಥಳೀಯ ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ. ಕಾವೇರಿ ಕೆಂಚರೆಡ್ಡಿ ಇನ್ನಿತರರು ಮುಖ್ಯ ಅತಿಥಿಳಾಗಿ ಆಗಮಿಸುವರು.ಮಹಿಳಾ ಸಬಲೀಕರಣ ಕುರಿತು ಹಾವೇರಿಯ ಕೃಷಿ ಹಾಗೂ ಗ್ರಾಮೀಣ ಯುವಜನ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಪರಿಮಳಾ ಜೈನ್ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.