ಅಭಿಮಾನಿಗಳಿಂದ ಶಾಸಕ ಸುರೇಶ್‌ ಹುಟ್ಟುಹಬ್ಬ

| Published : Sep 04 2025, 01:00 AM IST

ಸಾರಾಂಶ

ವಿಧಾನಸಭಾ ಶಾಸಕರಾದ ಎಚ್.ಕೆ.ಸುರೇಶ್‌ರವರ ಜನ್ಮ ದಿನದ ಅಂಗವಾಗಿ ಬಿಜೆಪಿ ಮಂಡಲ ಮತ್ತು ಅಭಿಮಾನಿಗಳಿಂದ ವಿವಿಧ ಸೇವಾ ಚಟುವಟಿಕೆಗಳ ಜೊತೆಗೆ ರಕ್ತದಾನ ಮಾಡುವ ಮೂಲಕ ಜನ್ಮದಿನವನ್ನು ಆಚರಣೆ ಮಾಡಲಾಯಿತು. ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ತಮ್ಮ ತಮ್ಮ ಶಾಲೆಗಳಿಗೆ ಉಚಿತ ಲೇಖನಿ ಸಾಮಗ್ರಿಗಳನ್ನು ನೀಡಿದ್ದಾರೆ. ಅಲ್ಲದೆ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂಬ ನಿಟ್ಟಿನಲ್ಲಿ ವೈಡಿಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಪಟ್ಟಣದ ಪಂಚಾಯಿತಿ ಮುಂದೆ ನೂರಾರು ಅಭಿಮಾನಿಗಳು ರಕ್ತದಾನ ಮಾಡಿದ್ದಾರೆ. ಅಲ್ಲದೆ ಪರಿಸರ ಪೂರಕವಾಗಿ ಹತ್ತಾರು ಚಟುವಟಿಕೆಗಳನ್ನು ನಡೆಸಲಾಗಿದೆ. ಮುಂದಿನ ರಾಜಕೀಯ ಭವಿಷ್ಯ ಉತ್ತಮವಾಗಲಿ ಎಂದು ಚನ್ನಕೇಶವಸ್ವಾಮಿಯಲ್ಲಿ ವಿಶೇಷಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುವಿಧಾನಸಭಾ ಶಾಸಕರಾದ ಎಚ್.ಕೆ.ಸುರೇಶ್‌ರವರ ಜನ್ಮ ದಿನದ ಅಂಗವಾಗಿ ಬಿಜೆಪಿ ಮಂಡಲ ಮತ್ತು ಅಭಿಮಾನಿಗಳಿಂದ ವಿವಿಧ ಸೇವಾ ಚಟುವಟಿಕೆಗಳ ಜೊತೆಗೆ ರಕ್ತದಾನ ಮಾಡುವ ಮೂಲಕ ಜನ್ಮದಿನವನ್ನು ಆಚರಣೆ ಮಾಡಲಾಯಿತು.ಶಾಸಕರಾದ ಎಚ್.ಕೆ.ಸುರೇಶ್ ಜನ್ಮದಿನವನ್ನು ಸರಳವಾಗಿ ಆಚರಿಸಬೇಕು ಎಂಬ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಶಾಲೆಗಳ ಮಕ್ಕಳಿಗೆ ಲೇಖನಿ ಸಾಮಗ್ರಿಗಳು ಮತ್ತು ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ಬಳಿಕ ಜನ್ಮದಿನದ ಅಂಗವಾಗಿ ವೈಡಿಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ರಕ್ತದಾನ ನಡೆಸಿ ಜನ್ಮದಿನಕ್ಕೆ ಶುಭಾಶಯಗಳನ್ನು ಕೋರಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಕೌರಿ ಸಂಜಯ್ ಮಾತನಾಡಿ ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಬಾರದು ಎಂದು ಸ್ವತಃ ಶಾಸಕರು ತಿಳಿಸಿದ ಕಾರಣದಿಂದ ಕೇಕ್ ಕತ್ತರಿಸುವುದು ಮತ್ತು ದುಂದುವೆಚ್ಚಕ್ಕೆ ಒತ್ತು ನೀಡದೆ ಬಿಜೆಪಿ ಮಂಡಲದ ವತಿಯಿಂದ ಕ್ಷೇತ್ರದಲ್ಲಿನ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ತಮ್ಮ ತಮ್ಮ ಶಾಲೆಗಳಿಗೆ ಉಚಿತ ಲೇಖನಿ ಸಾಮಗ್ರಿಗಳನ್ನು ನೀಡಿದ್ದಾರೆ. ಅಲ್ಲದೆ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂಬ ನಿಟ್ಟಿನಲ್ಲಿ ವೈಡಿಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಪಟ್ಟಣದ ಪಂಚಾಯಿತಿ ಮುಂದೆ ನೂರಾರು ಅಭಿಮಾನಿಗಳು ರಕ್ತದಾನ ಮಾಡಿದ್ದಾರೆ. ಅಲ್ಲದೆ ಪರಿಸರ ಪೂರಕವಾಗಿ ಹತ್ತಾರು ಚಟುವಟಿಕೆಗಳನ್ನು ನಡೆಸಲಾಗಿದೆ. ಮುಂದಿನ ರಾಜಕೀಯ ಭವಿಷ್ಯ ಉತ್ತಮವಾಗಲಿ ಎಂದು ಚನ್ನಕೇಶವಸ್ವಾಮಿಯಲ್ಲಿ ವಿಶೇಷಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಬೇಲೂರು ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಎ.ಎಸ್.ಬಸವರಾಜು, ಯುವ ಘಟಕದ ಅಧ್ಯಕ್ಷ ಹಳೇಬೀಡು ಚೇತನ್, ಬಿಜೆಪಿ ನಗರಾಧ್ಯಕ್ಷ ವಿಜಯ್, ಶಾಸಕರ ಆಪ್ತ ಕಾರ್ಯದರ್ಶಿ ನಿಖಿಲ್, ಅಭಿಮಾನಿಗಳಾದ ಪ್ರಸನ್ನ ಮತ್ತು ವಿನಯ್ ಗೋಣಿಸೋಮನಹಳ್ಳಿ, ಆಶೋಕ್, ಪ್ರಣೀತ್, ಯತೀಶ್ ಇತರರು ಹಾಜರಿದ್ದರು.