ನಮ್ಮಲ್ಲಿರುವ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳಬೇಕು: ನಾಗರಾಜು ಬೀಜಗನಹಳ್ಳಿ

| Published : Feb 28 2024, 02:33 AM IST

ನಮ್ಮಲ್ಲಿರುವ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳಬೇಕು: ನಾಗರಾಜು ಬೀಜಗನಹಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡವರಿಗೆ ಹಣದ ಸಮಸ್ಯೆ ಇರುತ್ತದೆ, ಮಕ್ಕಳಿಗೆ ಓದಿನ ಬಗೆಗಿನ ಸಮಸ್ಯೆಗಳಿರುತ್ತವೆ, ರೈತರಿಗೆ ಬೇಸಾಯದ ಕುರಿತು ಸಮಸ್ಯೆಗಳಿರುತ್ತವೆ, ಇಂತಹ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಂಡಾಗ ಮಾತ್ರ ನಾವು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ

- ಉಪನ್ಯಾಸಕ ನಾಗರಾಜು

ಫೋಟೋ- 27ಎಂವೈಎಸ್‌ 63

--------

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ನಮ್ಮಲ್ಲಿರುವ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳಬೇಕು ಎಂದು ಸಾಲಿಗ್ರಾಮ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜು ಬೀಜಗನಹಳ್ಳಿ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶ್ರೀ ಆದಚುಂಚನಗಿರಿ ವಿದ್ಯಾಸಂಸ್ಥೆಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೊಡ್ಡವರಿಗೆ ಹಣದ ಸಮಸ್ಯೆ ಇರುತ್ತದೆ, ಮಕ್ಕಳಿಗೆ ಓದಿನ ಬಗೆಗಿನ ಸಮಸ್ಯೆಗಳಿರುತ್ತವೆ, ರೈತರಿಗೆ ಬೇಸಾಯದ ಕುರಿತು ಸಮಸ್ಯೆಗಳಿರುತ್ತವೆ, ಇಂತಹ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಂಡಾಗ ಮಾತ್ರ ನಾವು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ನಾವು ಈ ಹಿಂದೆ ಸಮಾಜಕ್ಕೆ ಏನು ನೀಡಿದ್ದೇವೆ ಮತ್ತು ಮುಂದೆ ಸಮಾಜಕ್ಕೆ ಏನು ನೀಡುತ್ತೇವೆ ಎಂದು ಯೋಚಿಸಿದಾಗ ನಾವು ಬೆಳೆಯಲು ಸಾಧ್ಯ, ಜಗತ್ತು ನಮ್ಮ ವೈಫಲ್ಯವನ್ನು ಗುರುತಿಸುತ್ತದಯೋ ಹೊರತು, ನಮ್ಮ ಬೆಳವಣಿಗೆಯನ್ನಲ್ಲ, ನಾವು ಸಾಧಿಸಿದಾಗ ಇಡೀ ಜಗತ್ತು ಆಶ್ಚರ್ಯದಿಂದ ನೋಡುತ್ತದೆ ಎಂದರು.

ಚಿಕ್ಕ ಚಿಕ್ಕ ಕನಸುಗಳು ಚಿಕ್ಕ ವ್ಯಕ್ತಿಯನ್ನ ರೂಪಿಸುತ್ತವೆ, ದೊಡ್ಡ ದೊಡ್ಡ ಕನಸುಗಳು ದೊಡ್ಡ ವ್ಯಕ್ತಿಯನ್ನಾಗಿ ರೂಪಿಸುತ್ತದೆ, ಆದ್ದರಿಂದ ನೀವು ದೊಡ್ಡ ದೊಡ್ಡ ಕನಸುಗಳನ್ನು ಕಾಣಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪದವಿ ಕಾಲೇಜಿನ 2002 ರಲ್ಲಿ ಆರಂಭವಾದಾಗ 22 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದರು. ಪ್ರಸ್ತುತ 550 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ, ಇದುವರೆಗೂ 8,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ ಎಂದರು.

2022 -23 ನೇ ಸಾಲಿನಲ್ಲಿ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಎಂ.ಎನ್‌. ಪೂರ್ಣಿಮಾ ಅವರನ್ನು ಸನ್ಮಾನಿಸಿತು.

ಸಂಸ್ಥೆಯ ಗೌರವ ಆಡಳಿತಾಧಿಕಾರಿ ಪ್ರೊ.ಕೆ.ಪಿ. ಬಸವೇಗೌಡ, ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಚಂದ್ರೇಗೌಡ, ಪ್ರಾಂಶುಪಾಲರಾದ ಡಾ.ಜೆ.ಎನ್. ವೆಂಕಟೇಶ್, ಭೈರಪ್ಪ, ಭೈರೇಗೌಡ, ಮುಖ್ಯೋಪಾಧ್ಯಾಯಿನಿ ನಂದಿನಿ ಇದ್ದರು.