ಸಚಿವರ ಈ ಐತಿಹಾಸಿಕ ಮತ್ತು ಮಾನವೀಯ ಕಾರ್ಯವನ್ನು ಶ್ಲಾಘಿಸಿ ಇಂದು ಅವರಿಗೆ ಈ ಮೂಲಕ ಅಭಿನಂದನಾ ಸಲ್ಲಿಸುತ್ತೇವೆ
ಹೊಸಪೇಟೆ: ನಗರದ ಅಂಜುಮನ್ ಶಾದಿ ಮಹಲ್‌ನಲ್ಲಿ ಶನಿವಾರ ಅಂಜುಮನ್ ಕಮಿಟಿ ನೇತೃತ್ವದಲ್ಲಿ ಜರುಗಿದ ಸಮಾರಂಭದಲ್ಲಿ ಜಿಲ್ಲೆಯಿಂದ ಉಮ್ರಾ ಯಾತ್ರೆ ಕೈಗೊಂಡಿರುವ 15 ಯಾತ್ರಾರ್ಥಿಗಳಿಗೆ ಸನ್ಮಾನಿಸಿ, ಬೀಳ್ಕೊಡಲಾಯಿತು.ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ಕಮಿಟಿ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ರಾಜಕೀಯದಲ್ಲಿ ಸದಾ ಸಕ್ರಿಯರಾಗಿರುವ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಈ ಬಾರಿ ರಾಜ್ಯಾದ್ಯಂತ 470 ಆರ್ಥಿಕವಾಗಿ ಹಿಂದುಳಿದ ಯಾತ್ರಿಗಳನ್ನು ಮತ್ತು ಹಜ್ ಯಾತ್ರಿಕರ ಸೇವೆ ಸಲ್ಲಿಸಿದ ಸ್ವಯಂ ಸೇವಕರನ್ನು ಗುರುತಿಸಿ ತಮ್ಮ ಸ್ವಂತ ಹಣದಿಂದ ಉಚಿತವಾಗಿ ಉಮ್ರಾ ಯಾತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.
ಸಚಿವರ ಈ ಐತಿಹಾಸಿಕ ಮತ್ತು ಮಾನವೀಯ ಕಾರ್ಯವನ್ನು ಶ್ಲಾಘಿಸಿ ಇಂದು ಅವರಿಗೆ ಈ ಮೂಲಕ ಅಭಿನಂದನಾ ಸಲ್ಲಿಸುತ್ತೇವೆ. ಇದರಲ್ಲಿ ಜಿಲ್ಲೆಯ 15 ಯಾತ್ರಿಗಳು ಸೇರಿದ್ದಾರೆ. ಉಮ್ರಾ ಯಾತ್ರೆಗೆ ತೆರಳುವ ಯಾತ್ರಿಗಳ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದರು.ಜಿಲ್ಲೆಯಿಂದ ಉಮ್ರಾ ಯಾತ್ರೆಗೆ ಆಯ್ಕೆಯಾದ ಯಾತ್ರಿಗಳು ಮಾತನಾಡಿ, ಸಚಿವರು ನಮಗೆ ಮಗನಂತೆ ನಿಂತು ಈ ಪುಣ್ಯ ಕಾರ್ಯಕ್ಕೆ ನೆರವಾಗಿದ್ದಾರೆ. ನಾವು ಪವಿತ್ರ ಮೆಕ್ಕಾದಲ್ಲಿ ಸಚಿವರ ಆರೋಗ್ಯ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಬಾಷಾ, ಫೈರೋಜ್ ಖಾನ್, ಎಂ.ಡಿ. ಅಬೂಬಕರ್, ಡಾ.ದರ್ವೇಶ್, ಎಂ.ಡಿ. ಮೋಸಿನ್ ಕೊತ್ವಲ್, ಸದ್ದಾಂ ಹುಸೇನ್, ಸಮುದಾಯದ ಮುಖಂಡರಾದ ಅಹಮದ್, ಗಫೂರಸಾಬ್, ಶೇಖ್ ಅಹಮ್ಮದ್ ಹಾಗೂ ಯಾತ್ರಿಗಳು ಮತ್ತು ಕುಟುಂಬವರು ಉಪಸ್ಥಿತರಿದ್ದರು.ಹೊಸಪೇಟೆ ಜಿಲ್ಲೆಯಿಂದ ಉಮ್ರಾ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಿಗೆ ಅಂಜುಮನ್ ಶಾದಿ ಮಹಲ್ ನಲ್ಲಿ ಶನಿವಾರ ಅಂಜುಮನ್ ಕಮಿಟಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.