ಸಾರಾಂಶ
ಖಾನಾಪುರ: ಪಟ್ಟಣದ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಶನಿವಾರ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯ ಕೆ.ವಿ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಮಾರಂಭ ಉದ್ಘಾಟಿಸಿದ ಎಸ್.ಜಿ ಆರ್ಮಿ ಕೋಚಿಂಗ್ ಸೆಂಟರ್ ಸಂಸ್ಥಾಪಕ ಪ್ರಶಾಂತ ಶಹಾಪೂರಕರ ಮಾತನಾಡಿದರು.ಶಾಲೆಯ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಘಟಿಸಿದ್ದರು.
ಖಾನಾಪುರ: ಪಟ್ಟಣದ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಶನಿವಾರ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಶಾಲೆಯ ಮುಖ್ಯೋಪಾಧ್ಯಾಯ ಕೆ.ವಿ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಮಾರಂಭ ಉದ್ಘಾಟಿಸಿದ ಎಸ್.ಜಿ ಆರ್ಮಿ ಕೋಚಿಂಗ್ ಸೆಂಟರ್ ಸಂಸ್ಥಾಪಕ ಪ್ರಶಾಂತ ಶಹಾಪೂರಕರ ಮಾತನಾಡಿದರು.ಶಾಲೆಯ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಘಟಿಸಿದ್ದರು. ಶಿಕ್ಷಕರಾದ ಟಿ.ಆರ್ ಪತ್ರಿ, ಜೆ.ಡಿ ಬಿರ್ಜೆ, ಎಸ್.ಎಂ ಮುತಗಿ, ಎಸ್.ಬಿ ಭಾತ ಕಾಂಡೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಶಾಂತ ಶಹಾಪುರಕರ ಅವರನ್ನು ಸತ್ಕರಿಸಲಾಯಿತು. ಆರ್.ಎಲ್ ಲಕ್ಕೆಬೈಲಕರ ಸ್ವಾಗತಿಸಿದರು. ಆರ್.ಟಿ ಟಕ್ಕೇಕರ ನಿರೂಪಿಸಿದರು.