ಸಾರಾಂಶ
ಬಂದರು ಮತ್ತು ಮೀನುಗಾರಿಕಾ ಉಡುಪಿ ಉಪವಿಭಾಗದಲ್ಲಿ ಎಂಜಿನಿಯರ್ ಆಗಿ ಸುಮಾರು 29 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಕ್ಸೇವಿಯರ್ ಪಿ. ಡಯಾಸ್ ಅವರನ್ನು ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ನಗರದ ಅಂಬಲಪಾಡಿ ಕಾರ್ತಿಕ ಹೋಟೆಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಬಂದರು ಮತ್ತು ಮೀನುಗಾರಿಕಾ ಉಡುಪಿ ಉಪವಿಭಾಗದಲ್ಲಿ ಎಂಜಿನಿಯರ್ ಆಗಿ ಸುಮಾರು 29 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಕ್ಸೇವಿಯರ್ ಪಿ. ಡಯಾಸ್ ಅವರನ್ನು ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ನಗರದ ಅಂಬಲಪಾಡಿ ಕಾರ್ತಿಕ ಹೋಟೆಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಡಲಾಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನ ಶೇಟ್, ಗೌರವಿಸಿದರು.ನಂತರ ಕ್ಸೇವಿಯರ್ ಅವರು ಇಲಾಖೆಯಲ್ಲಿ ಪ್ರಾಮಾಣಿಕ, ನಿಷ್ಠೆ, ಸಮಯ ಪಾಲನೆಯೊಂದಿಗೆ, ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿ ಉತ್ತಮ ಅಧಿಕಾರಿಯಾಗಿ ಜನಪ್ರಿಯತೆ ಹೊಂದಿದ್ದಾರೆ. ಅವರ ಸಲಹೆ ಸೂಚನೆ ಇಲಾಖೆಗೆ ಬೇಕು, ಇವರ ಮುಂದಿನ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು.ಸಮಾರಂಭದಲ್ಲಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಂ. ರಾಥೋಡ್, ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಉದಯಕುಮಾರ್, ಗುತ್ತಿಗೆದಾರದ ಸಂಘದ ಸತೀಶ್ ಶೇಟ್ ಉಡುಪಿ, ಮೀನುಗಾರಿಕಾ ಇಲಾಖೆಯ ಸಹಾಯಕ ಎಂಜಿಯರ್ ಭಾನುಪ್ರಕಾಶ್ ಅತ್ತಾವರ್, ಪ್ರೆಸಿಲ್ಲ ಡಯಾಸ್, ಸಹಾಯಕ ಎಂಜಿಯರ್ ಪ್ರಶಾಂತ್ ಹಾಗೂ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು, ಸಿಬ್ಬಂದಿ ಉಪಸ್ಥಿತರಿದ್ದರು. ನಿಧಿ ಪೈ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.