ನಾನು ಈ ಶಾಲೆಗೆ ಕರ್ತವ್ಯಕ್ಕೆ ಬಂದಾಗ 22 ಮಕ್ಕಳು ಹಾಜರಾತಿ ಇತ್ತು. ಜಾಗೃತಿ ಮೂಡಿಸಿ ಪೋಷಕರಿಗೆ ಮನವಿ ಮಾಡಿದ ಮೇರೆಗೆ ಇಂದು 80 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಕೆಂಪಯ್ಯನ ದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಿಂಗಪಟ್ಟಣ ಸುಂದ್ರಪ್ಪ ಮತ್ತು ಧರ್ಮಪತ್ನಿ ಲೀಲಾವತಿ ಅವರನ್ನು ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ಮತ್ತು ಶಾಲಾ ಅಭಿವೃದ್ಧಿ ಮಂಡಳಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.ನೆನಪಿನ ಕಾಣಿಕೆ, ಫಲ ತಾಂಬೂಲದೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಂದ್ರಪ್ಪ ಅವರು, ನಾನು ಈ ಶಾಲೆಗೆ ಕರ್ತವ್ಯಕ್ಕೆ ಬಂದಾಗ 22 ಮಕ್ಕಳು ಹಾಜರಾತಿ ಇತ್ತು. ಜಾಗೃತಿ ಮೂಡಿಸಿ ಪೋಷಕರಿಗೆ ಮನವಿ ಮಾಡಿದ ಮೇರೆಗೆ ಇಂದು 80 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಬರುವ ಶಿಕ್ಷಕರು ಮಕ್ಕಳ ಸಂಖ್ಯೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗೂ ಎಸ್ ಡಿಎಂಸಿ ಸದಸ್ಯರ ಸಹಕಾರದೊಡನೆ ಕಾರ್ಯನಿರ್ವಹಿಸುವಂತೆ ಕಿವಿಮಾತು ಹೇಳಿದರು.ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಬಸವರಾಜ, ಮಾರಗೌಡನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬೋರೇಗೌಡ ಸುಂದ್ರಪ್ಪ ಅವರ ಸೇವೆಯನ್ನು ಶ್ಲಾಘಿಸಿದರು.
ಸುಂದರಪ್ಪನವರ ಜೊತೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಸ್ವಾಮಿಗೌಡ, ಸಿದ್ದಪ್ಪ, ಮಹೇಶ, ಕೃಷ್ಣ, ಪುಟ್ಟರಾಜು ಮತ್ತು ಇತರ ಶಿಕ್ಷಕರು ಹಾಗೂ ಅವರ ಅಭಿಮಾನಿಗಳು ಸುಂದರಪ್ಪರನ್ನು ಅಭಿನಂದಿಸಿದರು.ಗಿರೀಶ್ ಪಾಸ್ ಫೋಡ್ ಹೋಟೆಲ್ ಮಾಲೀಕ ಗಿರೀಶ್ , ಎಸ್ ಡಿಎಂಸಿ ಅಧ್ಯಕ್ಷ ಜಯಶಂಕರ್, ಮಾಜಿ ಅಧ್ಯಕ್ಷ ಬಸವರಾಜು, ದಯಾನಂದ್, ಕುಮಾರಸ್ವಾಮಿ, ಕೃಷ್ಣ, ಮೋಹನ್ ಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಇದ್ದರು.
ಲೋಕಪ್ರಕಾಶ್ ನಾರಾಯಣ್‌ಗೆ ಡಾಕ್ಟರ್ ಆಫ್ ಎಜುಕೇಷನ್ ಪದವಿ ಪ್ರದಾನಮಂಡ್ಯ: ಗುಜರಾತ್‌ನ ಗಾಂಧಿನಗರ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಎಜುಕೇಷನ್ ಪದವಿ ನೀಡಿ ಅಭಿನಂದಿಸಿದೆ.
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಲೋಕಪ್ರಕಾಶ್ ನಾರಾಯಣ್ ಪದವಿ ಸ್ವೀಕರಿಸಿದ್ದಾರೆ.ವಿಜ್ಞಾನವನ್ನು ಆಧ್ಯಾತ್ಮಿಕತೆಯೊಂದಿಗೆ, ಬುದ್ಧಿಶಕ್ತಿಯನ್ನು ಸಮಗ್ರತೆಯೊಂದಿಗೆ ಮತ್ತು ಶಿಸ್ತನ್ನು ಸಹಾನುಭೂತಿಯೊಂದಿಗೆ ಬೆರೆಸಲು ಅವಿಶ್ರಾಂತವಾಗಿ ಶ್ರಮಿಸುತ್ತ ಬಂದ ಲೋಕಪ್ರಕಾಶ್ ನಾರಾಯಣ ಅವರು ಭೌತಶಾಸ್ತ್ರಜ್ಞ, ಶಿಕ್ಷಣ ತಜ್ಞ ಮತ್ತು ಮಾರ್ಗದರ್ಶಕರೂ ಆಗಿ 35 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಪರಿವರ್ತನೆಯ ಸೇವೆಗೆ ಅರ್ಪಿಸಿಕೊಂಡವರು.
ಮೈಸೂರು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಜವಾಹರ್ ನವೋದಯ ವಿದ್ಯಾಲಯದಿಂದ ತಮ್ಮ ಬೋಧನಾ ಪ್ರಯಾಣ ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಶಿಸ್ತಿನ ಮನಸ್ಸನ್ನು ಬೆಳೆಸಲು ಶ್ರಮಿಸಿದ್ದಾರೆ.ಮಂಡ್ಯದ ಪ್ರತಿಷ್ಠಿತ ವಿಶ್ವಮಾನವ ಪೂರ್ವ ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತ, ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರೊಂದಿಗಿನ ಒಡನಾಟ ಹೊಂದಿದ್ದರು. ಇವರ ಸೇವೆಗಾಗಿ ಅಂತರರಾಷ್ಟ್ರೀಯ ಲಯನ್ಸ್ ಕ್ಲಬ್‌ಗಳ ಸಂಘ (ಜಿಲ್ಲೆ3170 ಮತ್ತು ಮಂಡ್ಯದ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ (2019) ಮತ್ತು ರಾಜ್ಯ ಖಾಸಗಿ ಶಾಲೆಗಳ ಸಂಘ, ಮಂಡ್ಯ ಜಿಲ್ಲಾ ಘಟಕದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿವೆ. ಪ್ರಸ್ತುತ ಲೋಕಪ್ರಕಾಶ್ ನಾರಾಯಣ ಅವರು ಬೆಂಗಳೂರಿನ ಐಕೆವಿ (ಇಂದಿರಾ ಕೃಷ್ಣ ವಿದ್ಯಾಲಯ) ಅಂಡ್ ರೇಸ್ ಸಮೂಹ ಸಂಸ್ಥೆಯಲ್ಲಿ ಅಕಾಡೆಮಿಕ್ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.