ಸಾರಾಂಶ
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಪುಟ್ಟಸ್ವಾಮಿಗೌಡ ಹಾಗೂ ಧರ್ಮಪತ್ನಿ ಡಿ.ಬಿ.ಮಂಜುಳಾ ಅವರಿಗೆ ಭಾರತೀ ಎಜುಕೇಷನ್ ಟ್ರಸ್ಟ್‌ನ ಆಡಳಿತ ಮಂಡಳಿ, ಕಾಲೇಜು ಅಧ್ಯಾಪಕರ ಸಂಘ, ಮಾನವಿಕ ವೇದಿಕೆ, ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಮತ್ತು ಎಲ್ಲಾ ಅಂಗಸಂಸ್ಥೆಯ ಅಧ್ಯಾಪಕರು-ಅಧ್ಯಾಪಕೇತರರು, ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭಾರತೀನಗರ: ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಪುಟ್ಟಸ್ವಾಮಿಗೌಡರಿಗೆ ಬೀಳ್ಕೊಡುಗೆ ನೀಡಲಾಯಿತು.
ಬಿಇಟಿ ಕಾರ್ಯದರ್ಶಿ ಗುರುದೇವರಹಳ್ಳಿ ಸಿದ್ದೇಗೌಡ ಮಾತನಾಡಿ, ಪುಟ್ಟಸ್ವಾಮಿಗೌಡರು ಭಾರತೀ ವಿದ್ಯಾಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರು ನಿವೃತ್ತಿಗೊಳ್ಳುತ್ತಿರುವುದು ಅಧ್ಯಾಪಕರು, ಸಂಸ್ಥೆಗೆ ಬೇಸರ ತರುತ್ತಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.ಪ್ರಾಂಶುಪಾಲ ಮಹದೇವಸ್ವಾಮಿ ಮಾತನಾಡಿ, ಎಂ.ಪುಟ್ಟಸ್ವಾಮಿಗೌಡ ಅವರಿಗೆ ಯಾವುದೇ ಜವಾಬ್ದಾರಿ ವಹಿಸಿದರೂ ನಿಭಾಯಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಶಿಸ್ತುಬದ್ಧವಾಗಿ ಪಾಠ- ಪ್ರವಚನ ಬೋಧಿಸುತ್ತಿದ್ದರು. ಇವರು ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿ ಕಾಲೇಜಿಗೆ ಕೀರ್ತಿ ತರುವ ಜೊತೆಗೆ ಪ್ರಶಂಸೆಗೆ ಒಳಗಾಗಿದ್ದಾರೆ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಪುಟ್ಟಸ್ವಾಮಿಗೌಡರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮಗೆ ಉದ್ಯೋಗ ನೀಡಿ, ಆರ್ಥಿಕವಾಗಿ ಬಲಿಷ್ಠಗೊಳ್ಳಲು ಸಹಕಾರ ನೀಡಿದ ಜಿ.ಮಾದೇಗೌಡರನ್ನು ನನ್ನ ಜೀವನದುದ್ದಕ್ಕೂ ಮರೆಯುವಂತಿಲ್ಲ. ನನ್ನ ವೃತ್ತಿ ಜೀವನದ ಏಳು- ಬೀಳುಗಳಲ್ಲಿ ನನ್ನ ಸ್ನೇಹಿತರು, ಪ್ರಾಧ್ಯಾಪಕರು ನನ್ನೊಂದಿಗೆ ಕೈಜೋಡಿಸಿದ್ದಾರೆ. ಅವರನ್ನು ಪ್ರೀತಿಯಿಂದ ನೆನೆಯುತ್ತೇನೆಂದು ದುಃಖಿತರಾದರು.ಇದೇ ವೇಳೆ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಪುಟ್ಟಸ್ವಾಮಿಗೌಡ ಹಾಗೂ ಧರ್ಮಪತ್ನಿ ಡಿ.ಬಿ.ಮಂಜುಳಾ ಅವರಿಗೆ ಭಾರತೀ ಎಜುಕೇಷನ್ ಟ್ರಸ್ಟ್‌ನ ಆಡಳಿತ ಮಂಡಳಿ, ಕಾಲೇಜು ಅಧ್ಯಾಪಕರ ಸಂಘ, ಮಾನವಿಕ ವೇದಿಕೆ, ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಮತ್ತು ಎಲ್ಲಾ ಅಂಗಸಂಸ್ಥೆಯ ಅಧ್ಯಾಪಕರು-ಅಧ್ಯಾಪಕೇತರರು, ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ, ಉಪನ್ಯಾಸಕರಾದ ಬಿ.ಕೆ.ಕೃಷ್ಣ, ಟ್ರಸ್ಟಿಗಳಾದ ಕಾರ್ಕಹಳ್ಳಿ ಬಸವೇಗೌಡ, ಮುದ್ದಯ್ಯ, ಜಯರಾಮು, ಸ್ನಾತ್ತಕೋತ್ತರ ವಿಭಾಗದ ನಿರ್ದೇಶಕ ಎಸ್.ನಾಗರಾಜು, ಗ್ರಂಥಪಾಲಕ ಎ.ಎಸ್.ಸಂಜೀವ್, ಪ್ರಾಂಶುಪಾಲ ಮಲ್ಲಿಕಾರ್ಜುನ್ ಸೇರಿದಂತೆ ಹಲವರಿದ್ದರು.