ಸಾರಾಂಶ
ನಿವೃತ್ತಿ ಹೊಂದಿದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಚ್. ಭಾಸ್ಕರ ಶೆಟ್ಟಿ ಮತ್ತು ನಾಗರಾಜ ಶೆಟ್ಟಿ ಅವರನ್ನು ಬೀಳ್ಕೊಡಲಾಯಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕರಾಗಿ ಒಟ್ಟಾರೆ 34 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಎಚ್. ಭಾಸ್ಕರ ಶೆಟ್ಟಿ ಮತ್ತು ನಿವೃತ್ತಿಯ ಬಳಿಕ ಎರಡು ವರ್ಷ ದೈಹಿಕ ಶಿಕ್ಷಣ ಉಪನ್ಯಾಸಕರಾಗಿ ವಿಶೇಷ ಕರ್ತವ್ಯ ಸಲ್ಲಿಸಿದ ನಾಗರಾಜ ಶೆಟ್ಟಿ ಅವರ ಬೀಳ್ಕೊಡುಗೆ ಸಮಾರಂಭವು ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.ಜಿಎಸ್‌ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ, ಕಾರ್ಯದರ್ಶಿ ಎಚ್. ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳ ಸಂಚಾಲಕ ಎನ್. ಸದಾಶಿವ ನಾಯಕ್, ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ, ಹಿಂದಿ ಭಾಷಾ ಉಪನ್ಯಾಸಕ ನಾರಾಯಣ ನಾಯ್ಕ್, ನಿವೃತ್ತ ಉಪನ್ಯಾಸಕರನ್ನು ಅಭಿನಂದಿಸಿ ಮಾತನಾಡಿದರು.
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಲವೀನ ಸಾವಿಯಾ ಸಿಕ್ವೇರಾ ಉಪಸ್ಥಿತರಿದ್ದರು.ಹೈಸ್ಕೂಲ್ ವಿಭಾಗದ ಕಚೇರಿ ಮುಖ್ಯಸ್ಥ ಶ್ರೀಧರ್ ಗಾಣಿಗ ಪ್ರಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಕಚೇರಿ ಪ್ರಬಂಧಕ ಪ್ರಮೋದ ಪೈ ಎಂ.ಜಿ. ವಂದಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ನಿರ್ವಹಿಸಿದರು. ಆಂಗ್ಲ ಭಾಷೆ ಉಪನ್ಯಾಸಕಿ ಸುಪ್ರೀತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.