ನಿವೃತ್ತ ಆರೋಗ್ಯ ಸುರಕ್ಷಣಾಧಿಕಾರಿಗಳಿಗೆ ಬೀಳ್ಕೊಡುಗೆ

| Published : Jul 14 2024, 01:30 AM IST

ನಿವೃತ್ತ ಆರೋಗ್ಯ ಸುರಕ್ಷಣಾಧಿಕಾರಿಗಳಿಗೆ ಬೀಳ್ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಯೋ ನಿವೃತ್ತಿ ಹೊಂದಿದ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಗೌರಮ್ಮ, ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿ ವೇದಾರ ಬೀಳ್ಕೊಡುಗೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಆರೋಗ್ಯ ಸೇವೆ ಕ್ಷೇತ್ರದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿಗಳ ಸೇವೆ ಅನನ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯ ಆರೋಗ್ಯ ಕೇಂದ್ರದ ಇಬ್ಬರು ಆರೋಗ್ಯ ಸುರಕ್ಷಣಾಧಿಕಾರಿಗಳ ಉತ್ತಮ ಸೇವೆ ನೀಡಿ ಇಂದು ವಯೋ ನಿವೃತ್ತಿ ಆಗುತ್ತಿದ್ದು ಅವರ ನಿವೃತ್ತಿ ಜೀವನ ನೆಮ್ಮದಿಯಾಗಿರಲಿ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಜಿ.ಆರ್.ತಿಮ್ಮೇಗೌಡ ಶುಭ ಹಾರೈಸಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಯೋ ನಿವೃತ್ತಿ ಹೊಂದಿದ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಗೌರಮ್ಮ, ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿ ವೇದಾರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ, ಅವರೂ ಕೂಡ ನಿಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತಾರೆ. ಅದೇ ರೀತಿ ಗೌರಮ್ಮ ಮತ್ತು ವೇದಾವರು ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಉತ್ತಮ ಸೇವೆ ನೀಡಿದ್ದಾರೆ. ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಾಮಾನ್ಯ. ಅವರು ಇಂದು ನಿವೃತ್ತಿ ಅಗುತ್ತಿರುವುದು ಒಂದೆಡೆ ಬೇಸರ, ಇನ್ನೊಂದೆಡೆ ಖುಷಿಯಾಗುತ್ತದೆ. ಜಂಜಾಟಗಳಿಂದ ಮುಕ್ತಿ ಹೊಂದಿ ನೆಮ್ಮದಿ ನಿವೃತ್ತಿ ಜೀವನದ ಕಡೆ ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅವರಿಬ್ಬರ ನಿವೃತ್ತಿ ಜೀವನ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಫಾರ್ಮಸಿಸ್ಟ್ ಮೋಹನ್ ಕುಮಾರ್ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾನು ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇಬ್ಬರು ವಯೋ ನಿವೃತ್ತಿ ಹೊಂದುತ್ತಿರುವ ಆರೋಗ್ಯ ಸುರಕ್ಷಣಾಧಿಕಾರಿಗಳು ತುಂಬ ವರ್ಷಗಳಿಂದ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರು ಶಿಸ್ತಿನ ಸಿಪ್ಪಾಯಿಗಳಂತೆ ರೋಗಿಗಳಿಗೆ ಉತ್ತಮ ಸೇವೆ ನೀಡಿದ್ದಾರೆ. ಇವರ ನಿವೃತ್ತಿ ಜೀವನ ಬಂಗಾರವಾಗಿರಲಿ ಎಂದು ಶುಭ ಹಾರೈಸಿದರು.

ನಿವೃತ್ತಿ ಹೊಂದಿದ ಗೌರಮ್ಮ ಮತ್ತು ವೇದಾ ಮಾತನಾಡಿ, ತುಂಬ ವರ್ಷಗಳಿಂದ ಇಲ್ಲಿನ ಆಸ್ಪತ್ರೆಯಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಆರೋಗ್ಯ ಸೇವೆ ಸಲ್ಲಿಸಿ, ಇಂದು ನಿವೃತ್ತಿಯಾಗುತ್ತಿದ್ದೇವೆ. ಇಲ್ಲಿಂದ ಎಲ್ಲರನ್ನು ಬಿಟ್ಟು ಮನೆಗೆ ಹೋಗುತ್ತಿರುವುದಕ್ಕೆ ಹೃದಯ ಭಾರವಾಗುತ್ತಿದೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷರಾದ ಹಾಲಮ್ಮ ಭೈರಪ್ಪ, ವೈದ್ಯರಾದ ಡಾ.ಪವಿತ್ರಾ, ಡಾ.ಬಿಂದ್ಯಾ, ಆರ್‌ಐಒ ಕೆ.ಪ್ರದೀಪ್, ಪ್ರಥಮ ದರ್ಜೆ ಸಹಾಯಕರಾದ ಮಂಜುಳಾ, ದ್ವಿತೀಯ ದರ್ಜೆ ಸಹಾಯಕಿ ಗೀತಾ, ಕಂಪ್ಯೂಟರ್ ಆಪರೇಟರ್ ಮಧು, ಸಿಬ್ಬಂದಿ ಬಸಮ್ಮ ಇನ್ನಿತರರಿದ್ದರು.