ನಿವೃತ್ತ ನೇತ್ರತಜ್ಞ ಶೇಖರ್‌ಗೆ ಬೀಳ್ಕೊಡುಗೆ

| Published : Dec 29 2024, 01:17 AM IST

ಸಾರಾಂಶ

ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಪರಿವೀಕ್ಷಕರಾಗಿ ಜನಮನ್ನಣೆ ಪಡೆದ ಆರ್‌.ಶೇಖರ್ ಅವರು ವಯೋನಿವೃತ್ತಿಯಾಗಿದ್ದು, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಅವರ ಸೇವೆಯನ್ನ ಸ್ಮರಿಸಿ ಪರಿಷತ್‌ನ ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ಗೌರವಿಸಿದರು. ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸಹಕಾರದಲ್ಲಿ ಹಲವಾರು ಆರೋಗ್ಯ ಶಿಬಿರಗಳು, ನೇತ್ರ ಪರೀಕ್ಷೆ ಶಸ್ತ್ರಚಿಕಿತ್ಸೆ ಆಯೋಜಿಸಿ ಬಡವರ ಪಾಲಿಗೆ ಸಹಕಾರ ನೀಡಿದ್ದಾರೆ ಎಂದರು.

ಚನ್ನರಾಯಪಟ್ಟಣ: ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಪರಿವೀಕ್ಷಕರಾಗಿ ಜನಮನ್ನಣೆ ಪಡೆದ ಆರ್‌.ಶೇಖರ್ ಅವರು ವಯೋನಿವೃತ್ತಿಯಾಗಿದ್ದು, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಅವರ ಸೇವೆಯನ್ನ ಸ್ಮರಿಸಿ ಪರಿಷತ್‌ನ ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ಗೌರವಿಸಿದರು.

ಸಿ.ಎನ್. ಅಶೋಕ್ ಮಾತನಾಡಿ ಶೇಖರ್ ಅವರು ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸಹಕಾರದಲ್ಲಿ ಹಲವಾರು ಆರೋಗ್ಯ ಶಿಬಿರಗಳು, ನೇತ್ರ ಪರೀಕ್ಷೆ ಶಸ್ತ್ರಚಿಕಿತ್ಸೆ ಮಾರ್ಗದರ್ಶನ ಶಿಬಿರಗಳನ್ನ ಆಯೋಜಿಸಿ ಬಡವರ ಪಾಲಿಗೆ ಸಹಕಾರ ನೀಡಿದ್ದಾರೆ ಎಂದರು.

ಶೇಖರ್ ಹಾಗೂ ಶ್ರೀಮತಿ ಶೇಖರ್ ಅವರನ್ನ ಅಭಿನಂದಿಸಿದರು. ಈ ಸಂದರ್ಭದಲ್ಲಿ ರವಿ, ಗುರುಮೂರ್ತಿ, ಪು?ಲತಾ, ಪುರಸಭೆ ಮಾಜಿ ಮುಖ್ಯ ಅಧಿಕಾರಿ ನಂಜುಂಡಯ್ಯ, ಹಿರಿಯ ಶಿಕ್ಷಕಿ ನಾಗರತ್ನಮ್ಮ, ಕೃಷ್ಣಮೂರ್ತಿ, ಕಾವ್ಯ, ಪರಿಷತ್ ಪದಾಧಿಕಾರಿಗಳಾದ ಎ. ಎಲ್ ನಾಗೇಶ್, ಜಯರಾಮ್ ಇದ್ದರು.