ಸಾರಾಂಶ
Farewell to Sachin Chalawadi, who was promoted to DySP
-ಹುಣಸಗಿ ಪಟ್ಟಣದಲ್ಲಿ ಬೀಳ್ಕೊಡುಗೆ ಸಮಾರಂಭ
-----ಕನ್ನಡಪ್ರಭ ವಾರ್ತೆ ಹುಣಸಗಿ
ಹುಣಸಗಿ ಪಟ್ಟಣದ ಪೊಲೀಸ್ ವೃತ್ತ ಕಚೇರಿಯ ಸಿಪಿಐ ಆಗಿ ಸೇವೆ ಸಲ್ಲಿಸಿ, ಇದೀಗ ಡಿವೈಎಸ್ಪಿಯಾಗಿ ಪದೋನ್ನತಿ ಹೊಂದಿರುವ ಸಚಿನ್ ಚಲವಾದಿ ಅವರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.ಸಚಿನ್ ಚಲವಾದಿ ಅವರ ಸೇವೆ ಹಾಗೂ ಸಾರ್ವಜನಿಕರೊಂದಿಗೆ ಸರಳವಾಗಿ ತಿಳಿವಳಿಕೆ ನೀಡಿದ್ದು ಹಾಗೂ ಅಪರಾಧ ಹಿನ್ನೆಲೆ ಇರುವವರಿಗೆ ಖಡಕ್ ಎಚ್ಚರಿಕೆಯ ಮೂಲಕ ಸದಾ ಪಟ್ಟಣದ ಶಾಂತಿ ಸುವ್ಯವಸ್ಥೆಗೆ ಆದ್ಯತೆ ನೀಡಿರುವುದು ಮರೆಯುವಂತಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.
ಸನ್ಮಾನ ಸ್ವೀಕರಿಸಿ ಸಚಿನ್ ಚಲವಾದಿ ಮಾತನಾಡಿ, ಜನರ ಸರಳ ಸ್ವಭಾವ ಅಧಿಕಾರಿಗಳೊಂದಿಗೆ ಸೌಜನ್ಯತೆಯಿಂದ ಇರುವದು ಇಷ್ಟವಾಯಿತು ಎಂದರು. ಸುರಪುರ ಡಿವೈಎಸ್ಪಿ ಜಾವೇದ್ ಇನಾಮದಾರ್ ಮಾತನಾಡಿದರು. ನಾರಾಯಣಪುರ ಪಿಎಸ್ಐ ರಾಜಶೇಖರ, ಹಿರಿಯರಾದ ಸಿದ್ದನಗೌಡ ಕರಿಬಾವಿ, ಡೇವಿಡ್ ಮುದನೂರ, ತಾರಾನಾಥ ಚವ್ಹಾಣ್ ಸೇರಿದಂತೆ ಇತರರು ಮಾತನಾಡಿದರು.ಡಾ. ಎಸ್. ಬಿ. ಪಾಟೀಲ, ಶಹಾಪುರ ಪಿಐ ಶರಣಗೌಡ, ಪಿಎಸ್ಐ ಗಳಾದ ಚಂದ್ರಶೇಖರ ನಾರಾಯಣಪುರ, ಅಯ್ಯಪ್ಪ, ಅಮೋಜ ಕಾಂಬಳೆ, ಅಯ್ಯಪ್ಪ ಕೊಡೇಕಲ್ಲ ಪಿಎಸ್ಐ ವೇದಿಕೆ ಮೇಲೆ ಇದ್ದರು. ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೃತ್ತದ ವ್ಯಾಪ್ತಿಯ ಹಳ್ಳಿಗಳ ಪ್ರಮುಖರು ಇದ್ದರು. ರವಿಕುಮಾರ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ನಾಗಲಿಕ ನಿರೂಪಿಸಿ, ವಂದಿಸಿದರು.
------11ವೈಡಿಆರ್5: ಹುಣಸಗಿ ಪಟ್ಟಣದ ಪೊಲೀಸ್ ವೃತ್ತ ಕಚೇರಿಯ ಸಿಪಿಐ ಆಗಿ ಸೇವೆ ಸಲ್ಲಿಸಿ, ಇದೀಗ ಡಿವೈಎಸ್ಪಿಯಾಗಿ ಪದೋನ್ನತಿ ಹೊಂದಿರುವ ಸಚಿನ್ ಚಲವಾದಿ ಅವರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.