ಸಾರಾಂಶ
ನರಸಿಂಹರಾಜಪುರ: ತಾಲೂಕಿನ ಬಾಳೆ ಗ್ರಾಮ ಪಂಚಾಯಿತಿ ವಗ್ಗಡೆ ಗ್ರಾಮದ ಮುಳುವಳ್ಳಿ ವಾಸಿ ವೆಂಕಟೇಶ್ (50) ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವೆಂಕಟೇಶ್ ಅವರು ಮೇ 24 ರ ಶುಕ್ರವಾರ ಮನೆಯಲ್ಲಿ ಕಳೆ ನಾಶಕ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ತಕ್ಷಣ ಅವರನ್ನು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.ಮೃತ ರೈತನ ಪುತ್ರ ಲತೇಶ್ ಮೇ 25 ರ ಶನಿವಾರ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ನನ್ನ ತಂದೆಯವರಾದ ವೆಂಕಟೇಶ್, ವಗ್ಗಡೆ ಗ್ರಾಮದಲ್ಲಿ ಸ್ವಲ್ಪ ಜಮೀನಿದ್ದು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಜಮೀನಿನ ನಿರ್ವಹಣೆಗೆ ಎನ್.ಆರ್.ಪುರ ಯೂನಿಯನ್ ಬ್ಯಾಂಕ್‌ನಲ್ಲಿ 3 ಲಕ್ಷ, ಕೆನರಾ ಬ್ಯಾಂಕಿ ನಲ್ಲಿ 1.50 ಲಕ್ಷ , ಕಾನೂರು ಸೊಸೈಟಿಯಲ್ಲಿ 45 ಸಾವಿರ, ಧರ್ಮಸ್ಥಳ ಸಂಘದಲ್ಲಿ 3.50 ಲಕ್ಷ, ಕೊಪ್ಪ ಸಮಸ್ತ ಸಂಘದಲ್ಲಿ 50 ಸಾವಿರ, ಮುತ್ತೋಟ್ ಫೈನಾನ್ಸ್ ನಲ್ಲಿ ಗೋಲ್ಡ್ ಲೋನ್ 1 ಲಕ್ಷ ಮತ್ತು ಖಾಸಗಿಯಾಗಿ ಕೆಲವರ ಹತ್ತಿರ ಕೈಸಾಲ ಪಡೆದು ಕೊಂಡಿದ್ದು ಜಮೀನಿನಲ್ಲಿ ಸರಿಯಾಗಿ ಬೆಳೆ ಬಾರದೆ ಮಾಡಿದ ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದರು. ಸಾಲ ತೀರಿಸಲಾಗಿದೆ ನನ್ನ ತಂದೆ ವೆಂಕಟೇಶ್ ಆತ್ನಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.