ಸಾರಾಂಶ
ತಾಲೂಕಿನ ಬಸವನಾಳ ಗ್ರಾಮದ ಲಲಿತಾ ಕೋಂ ರುದ್ರಪ್ಪ ಒಡಟ್ಟಿ ಎಂಬವರು ಜೂ. ೩೦ರಂದು ಹುಲಗೂರ ಗ್ರಾಮದಲ್ಲಿ ಸುಮಾರು ₹೨,೫೦,೦೦೦ ಮೌಲ್ಯದ ೨೫ ಗ್ರಾಂ ತೂಕದ ಬಂಗಾರದ ಚೈನನ್ನು ಕಳೆದುಕೊಂಡಿದ್ದರು.
ಶಿಗ್ಗಾಂವಿ: ತಾಲೂಕಿನ ಹುಲಗೂರ ಗ್ರಾಮದ ದಾರಿಯಲ್ಲಿ ಸಿಕ್ಕಿದ್ದ ಸುಮಾರು ೨೫ ಗ್ರಾಂ ತೂಕದ ಚಿನ್ನದ ಚೈನನ್ನು ವ್ಯಕ್ತಿಯೊಬ್ಬರು ಬುಧವಾರ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ವ್ಯಕ್ತಿಯ ಪ್ರಾಮಾಣಿಕತೆ ಮೆಚ್ಚಿ ಪೊಲೀಸರು ಆತನನ್ನು ಸನ್ಮಾನಿಸಿದ್ದು, ಅಲ್ಲದೇ ಚಿನ್ನದ ಸರವನ್ನು ಕಳೆದುಕೊಂಡಿದ್ದ ಮಹಿಳೆಗೆ ವಾಪಸ್ ಹಸ್ತಾಂತರಿಸಲಾಯಿತು.
ತಾಲೂಕಿನ ಬಸವನಾಳ ಗ್ರಾಮದ ಲಲಿತಾ ಕೋಂ ರುದ್ರಪ್ಪ ಒಡಟ್ಟಿ ಎಂಬವರು ಜೂ. ೩೦ರಂದು ಹುಲಗೂರ ಗ್ರಾಮದಲ್ಲಿ ಸುಮಾರು ₹೨,೫೦,೦೦೦ ಮೌಲ್ಯದ ೨೫ ಗ್ರಾಂ ತೂಕದ ಬಂಗಾರದ ಚೈನನ್ನು ಕಳೆದುಕೊಂಡಿದ್ದರು.ಈ ಬಂಗಾರದ ಚೈನು ಹುಲಗೂರ ಗ್ರಾಮದ ರೈತ ಪ್ರಭು ಬಸವಣ್ಣೆಪ್ಪ ಬೀಳಗಿ ಅವರಿಗೆ ಗ್ರಾಮದ ನಂ. ೧ ಎಟಿಎಂ ಎದುರು ಸಿಕ್ಕಿತ್ತು. ಅವರು ಚೈನನ್ನು ಪ್ರಾಮಾಣಿಕತೆಯಿಂದ ಹುಲಗೂರ ಪೊಲೀಸ್ ಠಾಣೆಗೆ ತಂದು ಮುಟ್ಟಿಸಿದ್ದಾರೆ. ಅದನ್ನು ಅಂದೆ ಹುಲಗೂರ ಪೊಲೀಸ್ ಠಾಣೆಯ ಪಿಎಸ್‌ಐ ಪರಶುರಾಮ ಕಟ್ಟಿಮನಿ ಅವರ ಸಮ್ಮುಖದಲ್ಲಿ ಕಳೆದುಕೊಂಡವರಿಗೆ ಮರಳಿಸಲಾಯಿತು.
ಪ್ರಾಮಾಣಿಕತೆ ತೋರಿದ ಪ್ರಭು ಬಸವಣ್ಣೆಪ್ಪ ಬೀಳಗಿ ಹಾಗೂ ಅವರ ತಾಯಿ ರತ್ನಮ್ಮ ಬಸವಣ್ಣೆಪ್ಪ ಬೀಳಗಿ ಅವರನ್ನು ಪೊಲೀಸರು ಸನ್ಮಾನಿಸಿದರು.ರಸ್ತೆ ಮಧ್ಯೆ ತುಂಡಾಗಿ ಬಿದ್ದ ವಿದ್ಯುತ್ ವೈರ್: ತಪ್ಪಿದ ಅವಘಡರಟ್ಟೀಹಳ್ಳಿ: ಪಟ್ಟಣದ ಭಗತ್‌ಸಿಂಗ್ ವೃತ್ತದಲ್ಲಿ ಗುರುವಾರ ಎಲ್‌ಟಿ(ಲೋ ಟೆನ್ಷನ್) ವೈರ್ ತುಂಡಾಗಿ ರಸ್ತೆ ಮಧ್ಯೆ ಬಿದ್ದು ಕೆಲಕಾಲ ಆತಂಕ ಸೃಷ್ಟಿಸಿತ್ತು. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.
ಕಳೆದ ವಾರವಷ್ಟೇ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಮೃತ್ಯುಂಜಯ ವಿದ್ಯಾಪೀಠದ ಶಿವಯೋಗಿಶ್ವರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ವಿದ್ಯುತ್ ಅವಘಡದಿಂದ 6ನೇ ತರಗತಿಯ ಓರ್ವ ವಿದ್ಯಾರ್ಥಿ ಮೃತಪಟ್ಟು, ಇಬ್ಬರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು. ಈ ಘಟನೆ ಮಾಸುವ ಮುನ್ನವೇ ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಮಧ್ಯಾಹ್ನ 1.30ರ ಸಮಯದಲ್ಲಿ ಅಳಿಲು ಸ್ಪರ್ಶದಿಂದ ಎಲ್‌ಟಿ ವೈರ್ ತುಂಡಾಗಿ ರಸ್ತೆ ಮಧ್ಯದಲ್ಲೇ ಬಿದ್ದಿದೆ. ಕೆಲಕಾಲ ನೆರೆದ ಜನ ಆತಂಕಗೊಂಡಿದ್ದರು. ಸದಾಕಾಲ ಸಂಚಾರ ದಟ್ಟಣೆ ಹೆಚ್ಚಿರುವ ಹಾಗೂ ನೂರಾರು ಶಾಲಾ ಮಕ್ಕಳು ಇದೇ ಮಾರ್ಗದಲ್ಲಿ ಓಡಾಡುವ ಜನನಿಬಿಡ ಪ್ರದೇಶವಾಗಿದ್ದು, ಯಾವುದೇ ಹಾನಿಯಾಗಿಲ್ಲ.ಕಂಬದ ಕೆಳಗೆ ಕೆಲ ಮಹಿಳಾ ಪ್ರಯಾಣಿಕರು, ಮಕ್ಕಳು ಹಾಗೂ ಆಟೋಗಳು ನಿಂತಿದ್ದವು. ವೈರ್ ಶಾರ್ಟ್ ಆಗಿ ತುಂಡಾದ ಸಮಯದಲ್ಲಿ ದೊಡ್ಡ ಶಬ್ದ ಕೇಳಿದ್ದರಿಂದ ಕಂಬದ ಸುತ್ತಮುತ್ತಲಿನ ಸಾರ್ವಜನಿಕರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದರು. ನಂತರ ಹೆಸ್ಕಾಂ ನೌಕರರು ಸ್ಥಳಕ್ಕೆ ದೌಡಾಯಿಸಿ ಸರಿಪಡಿಸಿದರು.