ಸಾರಾಂಶ
ಮೂಗನೂರ, ಬನಹಟ್ಟಿ, ಕುರ್ಲಗೇರಿ, ಸುರಕೋಡ, ಹದಲಿ, ಗಂಗಾಪೂರ, ಖಾನಾಪೂರ, ರಡ್ಡೇರನಾಗನೂರ ಗ್ರಾಮಗಳ ರೈತರು ಬಿತ್ತನೆ ಮಾಡಿದ ಬೆಳೆಗಳು ಹಳ್ಳದ ನೀರಿನ ಪ್ರವಾಹಕ್ಕೆ ಜಲಾವೃತ
ನರಗುಂದ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ, ಬೆಣ್ಣೆಹಳ್ಳಕ್ಕೆ ಪ್ರವಾಹ ನೀರು ಬಂದು ಕಳೆದ 2 ದಿನಗಳಿಂದ ನರಗುಂದ-ರೋಣ, ನರಗುಂದ-ಗದಗ ಒಳ ರಸ್ತೆಯ ಸೇತುವೆಗಳ ಮೇಲೆ ಪ್ರವಾಹ ನೀರು ಹರಿಯುತ್ತಿರುವುದರಿಂದ ಬಸ್ ಸಂಚಾರ ಬಂದ್ ಆಗಿ ವಿವಿಧ ಗ್ರಾಮಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಪರದಾಡುವಂತಾಗಿದೆ.
ಬೆಣ್ಣಿ ಹಳ್ಳಕ್ಕೆ ಹೊಂದಿಕೊಂಡಿರುವ ಮೂಗನೂರ, ಬನಹಟ್ಟಿ, ಕುರ್ಲಗೇರಿ, ಸುರಕೋಡ, ಹದಲಿ, ಗಂಗಾಪೂರ, ಖಾನಾಪೂರ, ರಡ್ಡೇರನಾಗನೂರ ಗ್ರಾಮಗಳ ರೈತರು ಬಿತ್ತನೆ ಮಾಡಿದ ಬೆಳೆಗಳು ಹಳ್ಳದ ನೀರಿನ ಪ್ರವಾಹಕ್ಕೆ ಜಲಾವೃತವಾಗಿವೆ.ಮಲಪ್ರಭಾ ನದಿ ಮೇಲ್ಬಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆ ಆಗುತ್ತಿರುವದರಿಂದ ನದಿ ಮೂಲಕ ಜಲಾಶಯಕ್ಕೆ ಹೆಚ್ಚುವರಿ 8000 ಕ್ಯೂಸೆಕ್ ನೀರನ್ನು ಬಿಟ್ಟಿದ್ದರಿಂದ ಅಕ್ಕಪಕ್ಕದ ಗ್ರಾಮಗಳ ರೈತ ಜಮೀನುಗಳಿಗೆ ನೀರು ನುಗ್ಗಿ ನೂರಾರು ಹೇಕ್ಟರ್ ಪ್ರದೇಶ ಬೆಳೆ ಹಾನಿ ಮಾಡಿದೆ.
ಕೆಸರಮವಾದ ರಸ್ತೆಗಳು: ನಿರಂತರ ಮಳೆ ಆಗುತ್ತಿರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ಕೆಸರಮಯವಾಗಿವೆ. ಈ ರಸ್ತೆಗಳಲ್ಲಿ ಜನರು ಓಡಾಡಲು ಭಯಪಡುತ್ತಿದ್ದಾರೆ.ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಬಂದಿದ್ದರಿಂದ ರೈತರ ಜಮೀನುಗಳಿಗೆ ನೀರು ನುಗ್ಗಿ ಒಡ್ಡು ಒಡೆದು ಹೋಗಿವೆ. (12ಎನ್.ಆರ್.ಡಿ4
ಬೆಣ್ಣೆ ಹಳ್ಳಕ್ಕೆ ಪ್ರವಾಹ ಬಂದ ಹಿನ್ನೆಲೆ ನರಗುಂದ-ಗದಗ ಸಂರ್ಪಕ ಕಲ್ಪಿಸುವ ಕುರ್ಲಗೇರಿ ಒಳ ರಸ್ತೆ ಸೇತುವೆ ಮೇಲೆ ಪ್ರವಾಹ ನೀರಿನ ಅಬ್ಬರ