ಸಾರಾಂಶ
ತಂದೆಯ ಶ್ರಮ ಹಾಗೂ ಶಾಲೆಯ ಗುರುಗಳ ಮಾರ್ಗದರ್ಶನದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ
ಧಾರವಾಡ: ರೈತನ ಮಗಳು ಶ್ರೀರಕ್ಷಾ ಹಾವೇರಿ 625ಕ್ಕೆ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ತೃತೀಯ ಹಾಗೂ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ನಗರದ ಕೆ.ಇ.ಬೋರ್ಡ್ ಸಂಸ್ಥೆಯ ಕೆ.ಎನ್.ಕೆ.ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಗಣಿತ, ಇಂಗ್ಲಿಷ್ ವಿಷಯಗಳಿಗೆ ತಲಾ 99 ಅಂಕ ಹಾಗೂ ಉಳಿದ ವಿಷಯಗಳಿಗೆ 100ಕ್ಕೆ 100 ಅಂಕ ಪಡೆದಿದ್ದಾಳೆ. ವಿಶೇಷ ಎಂದರೆ ಈ ವಿದ್ಯಾರ್ಥಿನಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಮೊದಲ ಸ್ಥಾನದಲ್ಲಿದ್ದು ಇದೀಗ ಎಸ್ಸೆಸ್ಸೆಲ್ಸಿಯಲ್ಲೂ ಜಿಲ್ಲೆಗೆ ಪ್ರಥಮ ಸ್ಥಾನಗಳಿದ್ದಾಳೆ.ಈ ವಿದ್ಯಾರ್ಥಿನಿ ಸಾಧನೆಗೆ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಯು ಉಚಿತ ಶಿಕ್ಷಣ ನೀಡಲು ಮುಂದೆ ಬಂದಿದೆ. ತಂದೆಯ ಶ್ರಮ ಹಾಗೂ ಶಾಲೆಯ ಗುರುಗಳ ಮಾರ್ಗದರ್ಶನದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಇನ್ನೆರಡು ಅಂಕ ಬಂದಿದ್ದರೆ ನಾನೂ ಸಹ ರಾಜ್ಯಕ್ಕೆ ಪ್ರಥಮ ಬರುತ್ತಿದ್ದೆ ಎಂದು ಶ್ರೀರಕ್ಷಾ ಪ್ರತಿಕ್ರಿಯಿಸಿದರು.