ಕೃಷಿಕರು, ಕಾರ್ಮಿಕರು ಆರೋಗ್ಯದ ಕಡೆ ಗಮನವಹಿಸಲಿ: ಡಿವೈಎಸ್‍ಪಿ

| Published : Oct 01 2024, 01:36 AM IST

ಕೃಷಿಕರು, ಕಾರ್ಮಿಕರು ಆರೋಗ್ಯದ ಕಡೆ ಗಮನವಹಿಸಲಿ: ಡಿವೈಎಸ್‍ಪಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷವಾಗಿ ಉತ್ತಮ ಆಹಾರ ಮತ್ತು ಸ್ವಚ್ಚತೆಗೆ ಗಮನ ಕೊಡುವಂತೆ ವೈದ್ಯರು ಜನರಲ್ಲಿ ಅರಿವು ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಗಂಗಾವತಿ

ನಿತ್ಯ ದುಡಿದು ಬದುಕುವ ಗ್ರಾಮೀಣ ಭಾಗದ ಕೃಷಿಕರು, ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಲಕ್ಷ ವಹಿಸುವುದಿಲ್ಲ. ಹೀಗಾಗಿ ಅವರ ಆರೋಗ್ಯ ರಕ್ಷಣೆಗೆ ಸದ್ಭಾವನಾ ಸಂಸ್ಥೆಯವರು ಕಾಳಜಿ ವಹಿಸಿರುವುದು ಶ್ಲಾಘನೀಯವಾಗಿದೆ. ಇಂತಹ ಶಿಬಿರಗಳನ್ನು ಗ್ರಾಪಂ ಮಟ್ಟದಲ್ಲಿ ಪ್ರತಿ ತಿಂಗಳು ಆಯೋಜಿಸುವಂತಾಗಬೇಕು ಎಂದು ಡಿವೈಎಸ್‍ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್ ಹೇಳಿದರು.

ಸದ್ಭಾವನಾ ಸೇವಾ ಸಂಸ್ಥೆ ಗಂಗಾವತಿ, ಯಶೋದಾ ಫೌಂಡೇಷನ್, ಗ್ರಾಪಂ ಚಿಕ್ಕಬೆಣಕಲ್ ಸಹಯೋಗದಲ್ಲಿ ದಿ. ರಾಮರಾವ್ ರಾಯ್ಕರ್ ಸ್ಮರಣಾರ್ಥ ತಾಲೂಕಿನ ಹೊಸ ಬೆಣಕಲ್ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ಉತ್ತಮ ಆಹಾರ ಮತ್ತು ಸ್ವಚ್ಚತೆಗೆ ಗಮನ ಕೊಡುವಂತೆ ವೈದ್ಯರು ಜನರಲ್ಲಿ ಅರಿವು ಮೂಡಿಸಬೇಕು. ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಕೆಲಸ ಸಂಘ-ಸಂಸ್ಥೆಗಳು ಮಾಡಬೇಕು. ಸದ್ಭಾವನಾ ಸಂಸ್ಥೆಯ ಮುಖ್ಯಸ್ಥರು ಗ್ರಾಮೀಣ ಪ್ರದೇಶಕ್ಕೆ ಆಗಮಿಸಿ ಪರಿಣಿತ ವೈದ್ಯರ ತಂಡದೊಂದಿಗೆ ಆರೋಗ್ಯ ಶಿಬಿರ ನಡೆಸಿರುವುದು ಶ್ಲಾಘನೀಯವಾಗಿದೆ ಎಂದರು.

ಸದ್ಭಾವನಅ ಸಂಸ್ಥೆ ಅಧ್ಯಕ್ಷ ಸುಬ್ರಮಣ್ಯ ರಾಯ್ಕರ್ ಮಾತನಾಡಿ, ನಮ್ಮ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಕೆಲಸ ಮಾಡುತ್ತದೆ. ಶಿಕ್ಷಣ, ಆರೋಗ್ಯ, ಸಂಸ್ಕಾರ ಮತ್ತು ಸ್ವಚ್ಚತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನಮ್ಮ ಸಂಸ್ಥೆ ನಿರಂತರ ಕೆಲಸ ಮಾಡುತ್ತದೆ. ಗ್ರಾಪಂ ಮತ್ತು ವೈದ್ಯರ ಸಹಕಾರದಿಂದ ಈ ಗ್ರಾಮದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ದಂತ ವೈದ್ಯ ಡಾ. ಶಿವಕುಮಾರ ಮಾಲೀಪಾಟೀಲ್, ಡಾ. ಸತೀಶ ರಾಯ್ಕರ್, ನೇತ್ರ ತಜ್ಞ ಡಾ. ಮಹಾಂತೇಶ ಪಟ್ಟಣಶೆಟ್ಟಿ, ಸ್ತ್ರೀರೋಗ ತಜ್ಞೆ ಡಾ. ಪ್ರಭಾ ರಾಯ್ಕರ್, ಚರ್ಮರೋಗ ತಜ್ಞ ಡಾ. ಭರತ್ ಮೇಕಾ, ಹುಬ್ಬಳ್ಳಿ ವೈದ್ಯ ಡಾ. ಮನೋಜ್ ಭಟ್, ಡಾ. ಅಬೀದ್ ಹುಸೇನ್, ಡಾ. ಪ್ರಶಾಂತ ದೇಸಾಯಿ, ಚಿಕ್ಕಬೆಣಕಲ್ ಗ್ರಾಪಂ ಅಧ್ಯಕ್ಷ ಶಿವಮೂರ್ತಿ ಯಾದವ, ಸದಸ್ಯರಾದ ಶಿವಾನಂದಗೌಡ ಪೊಲೀಸ್ ಪಾಟೀಲ್, ಬುಡ್ಡಪ್ಪ ಅಂಗಡಿ, ಬೆಟದಪ್ಪ, ಯಮನೂರಸಾಬ್ ಜಂತಕಲ್, ಉಮಾದೇವಿ, ಶಾಲಾ ಮುಖ್ಯೋಪಾಧ್ಯಾಯ ಕಾಳೇಶ, ಶಾಲಾ ಸಿಬ್ಬಂದಿ ವರ್ಗ ಸೇರಿದಂತೆ ಮತ್ತಿತರರಿದ್ದರು.