ಸಾರಾಂಶ
ಕಂದಾಯ ಇಲಾಖೆ ಮಂಜೂರಾತಿಯ ಖಾತೆ, ಪಹಣಿ ಇದ್ದರೂ ಉಳಿಮೆ ಮಾಡಬೇಡಿ ಎಂದು ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ
ಕನ್ನಡಪ್ರಭವಾರ್ತೆ ಪಾವಗಡ
ಜಮೀನಿನ ಉಳಿಮೆಗೆ ಸಂಬಂಧಪಟ್ಟಂತೆ ಇಲ್ಲಿನ ಕಂದಾಯ ಇಲಾಖೆ ಮಂಜೂರಾತಿಯ ಖಾತೆ, ಪಹಣಿ ಇದ್ದರೂ ಉಳಿಮೆ ಮಾಡಬೇಡಿ ಎಂದು ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ಕರ್ನಾಟಕ ರಾಜ್ಯ ರೈತ,ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ದೊಡ್ಡಹಟ್ಟಿ ಪೂಜಾರಪ್ಪ ಆರೋಪಿಸಿದರು.ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ತಾಲೂಕಿನ ರೈತ ಸಮಸ್ಯೆಗೆ ನಿವಾರಣೆಗೆ ಒತ್ತಾಯಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಈ ವೇಳೆ ಅಧ್ಯಕ್ಷ ಪೂಜಾರಪ್ಪ ಮಾತನಾಡಿ ಬಗರುಹುಕಂ ಸಾಗುವಳಿ ನಿರತ ತಾ. ರೈತರ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು. ನಾಗಲಮಡಿಕೆ ಹೋಬಳಿ ಶ್ರೀರಂಗಪುರ ಸರ್ವೆ ನಂ, 105, 152, 53, 54, 55, 57, ಹಾಗೂ ನಿಡಗಲ್ ಹೋಬಳಿ ಜಂಗರಮ್ಮನಹಳ್ಳಿ ಸರ್ವೆ ನಂ 37,ಕೊತ್ತೂರು ಸರ್ವೆ ನಂ 80, ಹಾಗೂ ಆರ್.ಅಚ್ಚಮ್ಮನಹಳ್ಳಿ ಕ್ಯಾತಗಾನಚೆರ್ಲು ದಾರಿಗೆ ಸಂಬಂಧಪಟ್ಟ ಪಹಣಿ ಖಾತೆ ಇದ್ದರೂ ದಾರಿ ಬಿಡುತ್ತಿಲ್ಲ. 20ವರ್ಷಗಳಿಂದ ಜಮೀನು ಸಾಗುವಳಿ ಮಾಡುವ ರೈತರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದೌರ್ಜನ್ಯ ಎಸುಗುತ್ತಿದ್ದಾರೆ. ಬಡ ರೈತರ ಜಮೀನಿನಲ್ಲಿ ಮರಗಿಡಗಳಿಡುತ್ತಿದ್ದು ಸರ್ಕಾರ ಆದೇಶವಿದೆ. ಅರಣ್ಯ ಇಲಾಖೆ ಅಧಿಕಾರಿಗಳು ದರ್ಪ ತೋರಿಸಿ ರೈತರ ಜಮೀನು ಉಳಿಮೆ ತಡೆಯುತ್ತಿದ್ದಾರೆ.ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರ ಪಂಪುಸೆಟ್‌ಗಳಿಗೆ 25ಸಾವಿರುಗಳಿಗೆ ಈ ಹಿಂದಿನ ಸರ್ಕಾರ ಕಂಬ ವೈರು ಟ್ರಾನ್ಸ್‌ಪಾರ್ಮರ್ ಕೊಡುತ್ತಿದ್ದರು. ಆದರೆ ಈಗಿನ ಸರ್ಕಾರ ಅದನ್ನು ನಿಲ್ಲಿಸಿದ್ದು, ಈ ಸಂಬಂಧ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಹಾಗೂ ಟ್ರಾನ್ಸ್‌ಫಾರ್ಮರ್ ಆಳವಡಿಕೆಗೆ ಎರಡರಿಂದ ಮೂರು ಲಕ್ಷ ಹಣ ರೈತರಿಗೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ ಈ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಸಾಲಕ್ಕೆ ಸಂಬಂಧಿಸಿದಂತೆ ರಿಂಗ್ ಸಮಾಧಾನ ಯೋಜನೆ ಅಡಿಯಲ್ಲಿ ಹಣಕಟ್ಟಿದ್ದರೂ ಎಸ್‌ಬಿಐನಲ್ಲಿ ಸಾಲಮನ್ನಾ ಮಾಡುತ್ತಿಲ್ಲ. ಈ ಸಂಬಂಧ ಮೇಲಿನ ಬ್ಯಾಂಕ್ ವ್ಯವಸ್ಥಾಪಕ ನಿರ್ದಶಕರು ಮಾಹಿತಿ ಪಡೆದು ಕಾನೂನು ರೀತ್ಯಾ ಬಡ ರೈತರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.ಬೆಳೆವಿಮೆ ಹಣ ಸಿಕ್ಕಿಲ್ಲ ಎಂದು ರೈತರು ಪರದಾಡುತ್ತಿದ್ದು ಶೇಂಗಾ,ರಾಗಿ ಭತ್ತ ತೊಗರಿ ಅಡಿಕೆ ತಂಗು ಮತ್ತು ಇತರೆ ಬೆಳೆಗಳಿಗೆ ಬೆಳೆವಿಮೆ ಹಣ ತಕ್ಷಣ ಮಂಜೂರಾತಿ ಕಲ್ಪಿಸಬೇಕು. ತಾಲೂಕಿನ ಕಸಬಾ, ನಾಗಲಮಡಿಕೆ ನಿಡಗಲ್ ವೈ.ಎನ್. ಹೋಬಳಿಗೂ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ತಾ. ಕೆರೆಗಳು ಕೋಡಿ ಬಿದ್ದಿದ್ದು ಹಳ್ಳ ಕೊರೆದು ಜಮೀನುಗಳು ಹಾಳಾಗಿವೆ. ಸಿ.ಕೆ.ಪುರ,ಗುಂಡ್ಲಹಳ್ಳಿ ಇತರೆ ಕೆರೆಗಳಿಗಳ ದುರಸ್ತಿ ಕಾರ್ಯ ಸೇರಿದಂತೆ ಇತರೆ ಹಲವಾರು ರೈತರ ಸಮಸ್ಯೆ ನಿವಾರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ರೈತರಿಗೆ ವೇಳೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಕಾರ್ಯಧ್ಯಕ್ಷ ಅಬ್ಬನಿ ಶಿವಪ್ಪ, ಸಿದ್ದವೀರಪ್ಪ ಸೋಮಣ್ಣ ಪೂಜಾರಪ್ಪ ಪ್ರಧಾನ ಕಾರ್ಯದರ್ಶಿ ಯತಿಕುಮಾರ್ ಉಮಾದೇವಿ ಕರಿಬಸವಪ್ಪ ಮೂರ್ತಿ , ಅಣ್ಣಪ್ಪ, ನಡುಪನ್ನ, ನಲಿಗಾನಹಳ್ಳಿ ಮಂಜುನಾಥ್ ಚಿತ್ತಯ್ಯ ಗುಂಡ್ಲಹಳ್ಳಿ ರಮೇಶ್,ದಂಡುಪಾಳ್ಯ ರಾಮಾಂಜಿನಪ್ಪ ಬ್ಯಾಡನೂರು ಶಿವು ಗುಡಿಪಲ್ಲಪ್ಪ ಹನುಮಂತರಾಯಪ್ಪ ಇತರೆ ಆನೇಕ ಮಂದಿ ರೈತ ಸಂಘದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.