ಸಾರಾಂಶ
ಚಿಕ್ಕಮಗಳೂರು ತಾಲೂಕಿನ ದೇಗಲಾಪುರ ಗ್ರಾಮದಲ್ಲಿ ರೈತರು, ಯುವಕರು ಎತ್ತಿನ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪ್ಲೆಕ್ಸ್ ಕಟ್ಟಿ ಅದರ ಮುಂದೆ ಕೇಕ್ ಇಟ್ಟು ನಂತರ ಕತ್ತರಿಸಿ, ಬಳಿಕ ಪಟಾಕಿ ಸಿಡಿಸಿ ರೈತರು ಸಂತಸ ಪಟ್ಟರು.ಇದು, ಹೊಸ ವರ್ಷಾಚರಣೆಯಲ್ಲಿ ಕಂಡು ಬರುವ ಸಾಮಾನ್ಯ ಚಿತ್ರಣ.
ಆದರೆ, ಇಲ್ಲೊಂದು ಗ್ರಾಮದಲ್ಲಿ ಎತ್ತಿನ ಹುಟ್ಟುಹಬ್ಬವನ್ನು ಆಚರಿಸಿದ ಪರಿ ಇದು.ಚಿಕ್ಕಮಗಳೂರು ತಾಲೂಕಿನ ದೇಗಲಾಪುರ ಗ್ರಾಮದಲ್ಲಿ ರೈತರು, ಯುವಕರು ಎತ್ತಿನ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಇದಕ್ಕೆ ಕಾರಣ, ಈ ಎತ್ತಿನ ಹೆಸರು ದಾನಿಕರ, ಕಳೆದ ಮೂರು ವರ್ಷಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಳ್ಳುತ್ತಿದೆ. ಹಾಗಾಗಿ ಇದಕ್ಕೆ ಗ್ರಾಮಸ್ಥರು ಕರ್ನಾಟಕ ಛಾಂಪಿಯನ್ ಎಂಬ ಹೆಸರಿಟ್ಟಿದ್ದಾರೆ.ಅದರ ಕಾಲಿಗೆ ಪೆಟ್ಟಾಗಿದೆ. ಅದ್ದರಿಂದ ಪೋಟೋವಿನ ಪ್ಲೆಕ್ಸ್ ಮಾಡಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ಲೆಕ್ಸ್ ನಿಲ್ಲಿಸಿ ಕೇಕ್ ಇಟ್ಟು 9ನೇ ವರ್ಷದ ಹುಟ್ಟು ಹಬ್ಬ ಆಚರಿಸಿದರು. ಈ ಕೇಕ್‌ನ್ನು ಮಾಜಿ ಸಚಿವ ಸಿ.ಟಿ. ರವಿ ಅವರಿಂದ ಕತ್ತರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಕುಣಿದು ಕುಪ್ಪಳಿಸಿದರು. ಈ ಡ್ಯಾನ್ಸ್‌ನಲ್ಲಿ ಸಿ.ಟಿ. ರವಿ ಕೂಡ ಭಾಗಿಯಾಗಿದ್ದರು.
20 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ದೇಗಲಾಪುರ ಗ್ರಾಮದಲ್ಲಿ ನಡೆದ ಎತ್ತಿನ ಹುಟ್ಟು ಹಬ್ಬದಲ್ಲಿ ಮಾಜಿ ಸಚಿವ ಸಿ.ಟಿ. ರವಿ ಭಾಗವಹಿಸಿ ಕೇಕ್ ಕತ್ತರಿಸಿದರು.