ಸಾರಾಂಶ
ರೈತರು ನಮ್ಮ ದೇಶದ ಬೆನ್ನೆಲುಬು, ಅವರ ಶ್ರಮದಿಂದಲೇ ನಮ್ಮ ಜೀವನ ಸಾಗುತ್ತಿದೆ ಅವರು ಕೇವಲ ಆಹಾರ ಪೂರೈಕೆದಾರರಲ್ಲ ನಾಡಿನ ನಿಜವಾದ ಶಿಲ್ಪಿಗಳು ಎಂದು ಶ್ರೀ ಬಾಲಮಂಜುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು
ಕನ್ನಡಪ್ರಭ ವಾರ್ತೆ ತುಮಕೂರು
ರೈತರು ನಮ್ಮ ದೇಶದ ಬೆನ್ನೆಲುಬು, ಅವರ ಶ್ರಮದಿಂದಲೇ ನಮ್ಮ ಜೀವನ ಸಾಗುತ್ತಿದೆ ಅವರು ಕೇವಲ ಆಹಾರ ಪೂರೈಕೆದಾರರಲ್ಲ ನಾಡಿನ ನಿಜವಾದ ಶಿಲ್ಪಿಗಳು ಎಂದು ಶ್ರೀ ಬಾಲಮಂಜುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಕುಣಿಗಲ್ ತಾಲೂಕಿನ ಮಾದಪ್ಪನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೆಳೆ ಕ್ಷೇತ್ರೋತ್ಸವ ಹಾಗೂ ರೈತರ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಯವ ಕೃಷಿ ಅಳವಡಿಸಿಕೊಂಡು ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದ ಸ್ವಾಮೀಜಿ ನುಡಿದರು.
ಕೃಷಿ ವಿಶ್ವವಿದ್ಯಾಲಯ ಅಡಿಯಲ್ಲಿ ನೆಡೆಯುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಕೃಷಿ ವಿದ್ಯಾರ್ಥಿಗಳು ಕಳೆದ 3 ತಿಂಗಳು ಯಶಸ್ವಿಯಾಗಿ ತಮ್ಮ ಶಿಬಿರವನ್ನು ಪೂರ್ಣಗೊಳಿಸಿದ್ದಾರೆ. ಕೃಷಿನಾದ ಬೆಳೆ ಕ್ಷೇತ್ರೋತ್ಸವ ಮತ್ತು ರೈತರ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಈ ಕಾರ್ಯಾಕ್ರಮದಡಿ ವಿದ್ಯಾರ್ಥಿಗಳು ಗ್ರಾಮೀಣ ರೈತರಿಗೆ ಹೊಸ ತಂತ್ರಜ್ಞಾನ ಕೃಷಿ ಕ್ಷೇತ್ರದ ಆಧುನಿಕ ಮಾಹಿತಿಯನ್ನು ಹಂಚಿಕೊಂಡರು. ಈ ವೇಳೆ ಬೆಳೆ ಸಂಗ್ರಹಾಲಯ ಪ್ರದರ್ಶಿಸಲಾಯಿತು. ಇದು ವಿವಿಧ ಬೆಳೆಗಳ ವೈಜ್ಞಾನಿಕವಾಗಿ ಬೆಳೆಯುವ ವಿಧಾನ ಹೊಸ ತಳಿ ಪರಿಚಯ ಹಾಗೂ ಕೃಷಿ ಪ್ರಸ್ತುತ ಸವಾಲುಗಳಿಗೆ ಪರಿಹಾರಗಳನ್ನು ತಿಳಿಸಲಾಯಿತು.ಕಾರ್ಯಕ್ರಮದಲ್ಲಿ ಡಾ. ಟಿ.ಕೆ. ನಾಗರತ್ನ, ಡಾ. ಅನಿಲ್ ಕುಮಾರ್ ದಾಂಡೇಕರ, ಡಾ.ಎನ್.ಸುಮಿತ್ರಮ್ಮ, ಡಾ. ರೂಪ.ಬಿ.ಪಾಟೀಲ್, ನೂರ್ ಅಜಮ್, ಡಿ.ಹೊಸಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯರು, ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಧುಸೂದನ್, ಮಾದಪ್ಪನಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಹಕ್ರಮದಲ್ಲಿ ಪಾಲ್ಗೊಂಡಿದ್ದರು.