ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರೈತರರಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಿರುವ ರಾಗಿಯನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡುವ ಬದಲು ಬಡ ರೈತ ಕೂಲಿ ಕಾರ್ಮಿಕರ ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ಕುಟುಂಬಕ್ಕೆ 100 ಕೆ ಜಿ ರಾಗಿಯನ್ನು ವಿತರಣೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಅಹಾರ ಸಚಿವರಾದ ಕೆ.ಎಚ್. ಮುನಿಯಪ್ಪ ಅವರನ್ನು ಒತ್ತಾಯಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಬೆಂಬಲ ಯೋಜನೆಯ ಮೂಲಕ ರಾಗಿಯನ್ನು ಉತ್ತಮ ಬೆಲೆಗೆ ಖರೀದಿ ಮಾಡಿರುವುದರಿಂದ ಮೂರು ತಿಂಗಳು ಕಷ್ಟ ಪಟ್ಟು ಬೆಳೆದ ರಾಗಿ ಬೆಳೆಗಾರರಿಗೆ ಕೇಂದ್ರ ಸರ್ಕಾರ 4886 ರುಪಾಯಿ ಬೆಲೆ ನೀಡಿ ಖರೀದಿ ಮಾಡಿ ರೈತರಿಗೆ ಆರ್ಥಿಕ ಬೆಂಬಲವಾಗಿ ನಿಂತಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ. ಆದರೆ ಖರೀದಿ ಮಾಡಿರುವ ಲಕ್ಷ ಟನ್‌ಗಳ ರಾಗಿಯನ್ನು ಸರ್ಕಾರ ಭಾರತ ಆಹಾರ ನಿಗಮದ ಮೂಲಕ ಆಂಧ್ರ, ತೆಲಂಗಾಣ, ತಮಿಳುನಾಡಿಗೆ ರಾಜ್ಯದ ರಾಗಿಯನ್ನು ಮಾರಾಟ ಮಾಡಲು ಮುಂದಾಗಿರುವುದು ನ್ಯಾಯವೇ? ಎಂದು ಆಹಾರ ಸಚಿವರನ್ನು ಪ್ರಶ್ನೆ ಮಾಡಿದರು.ಹೊರರಾಜ್ಯದ ಅಧಿಕಾರಿಗಳ ತಂಡ ಕೋಲಾರ ಜಿಲ್ಲೆಯ ನಾನಾ ತಾಲೂಕುಗಳಿಗೆ ಭೇಟಿ ನೀಡಿ ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಪರಿಶೀಲನೆ ಮಾಡಿ ಗುಣಮಟ್ಟದ ಬಗ್ಗೆ ಖಾತ್ರಿ ಮಾಡಿಕೊಂಡು ಸರ್ಕಾಕ್ಕೆ ವರದಿ ನೀಡಿ ರಾಜ್ಯದ ರಾಗಿಯನ್ನು ಖರೀದಿ ಮಾಡಲು ಮುಂದಾಗಿದ್ದು ಯಾವುದೇ ಕಾರಣಕ್ಕೂ ಹೊರ ರಾಜ್ಯಗಳಿಗೆ ಮಾರಾಟ ಮಾಡದೆ ಸ್ಥಳೀಯ ರಾಗಿಯನ್ನು ಸ್ಥಳಿಯರಿಗೇ ನೀಡಿಬೇಕೆಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ, ಕೋಲಾರ ಜಿಲ್ಲೆಯ ರೈತರು ಬೆಳೆದಿರುವ ರಾಗಿ ಗುಣಮಟ್ಟ ಹೆಚ್ಚಾಗಿದ್ದು ಈ ರಾಗಿಯನ್ನು ಹೊರ ರಾಜ್ಯಕ್ಕೆ ಮಾರಿದರೆ ಇಲ್ಲಿನ ಜನಕ್ಕೆ ಸಮಸ್ಯೆಯಾಗುತ್ತದೆ. ಮತ್ತೆ ರಾಗಿ ಇರುವ ರಾಜ್ಯಗಳಿಂದ ಹೆಚ್ಚಿನ ಬೆಲೆಗೆ ಖರೀದಿ ಮಾಡಿ ಸರ್ಕಾರ ಅದರಲ್ಲೂ ಕೋಟಿ ಕೋಟಿ ಲೂಟಿ ಮಾಡುವ ದಂಧೆಯಾಗುತ್ತದೆ. ಯಾವುದೇ ಕಾರಣಕ್ಕೂ ಮಾನ್ಯ ಆಹಾರ ಸಚಿವರು ರಾಗಿಯ್ನನು ಹೊರ ರಾಜ್ಯಗಳಿಗೆ ಮಾರಾಟ ಮಾಡಬಾರೆಂದು ಆಗ್ರಹಿಸಿದರು.
ಸಂಘದ ತಾ.ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್ ಗೋವಿಂದಪ್ಪ ಮುನಿಕೃಷ್ಣ ವಿಶ್ವ ಮುನಿರಾಜು ಪುತ್ತೇರಿ ರಾಜು ಗಿರೀಶ್ ಮಂಗಸಂದ್ರ ತಿಮ್ಮಣ್ಣ, ಚಂದ್ರಪ್ಪ ಸುಪ್ರಿಂ ಚಲ ಇದ್ದರು.