ದೊಡ್ಡಬಳ್ಳಾಪುರ: ದೇಶದಲ್ಲಿ ಹಾಲು ಉತ್ಪಾದನೆ ಮತ್ತು ವ್ಯಾಪಾರದ ಏಕಸ್ವಾಮ್ಯತೆಯನ್ನು ಸಾಧಿಸಲು ಹುನ್ನಾರ ನಡೆದಿರುವ ಅನುಮಾನವಿದ್ದು, ಸಹಕಾರ ಖಾತೆಯನ್ನೂ ಹೊಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಂಚಾಲ ಆರ್.ಚಂದ್ರ ತೇಜಸ್ವಿ ಆಗ್ರಹಿಸಿದರು
ದೊಡ್ಡಬಳ್ಳಾಪುರ: ದೇಶದಲ್ಲಿ ಹಾಲು ಉತ್ಪಾದನೆ ಮತ್ತು ವ್ಯಾಪಾರದ ಏಕಸ್ವಾಮ್ಯತೆಯನ್ನು ಸಾಧಿಸಲು ಹುನ್ನಾರ ನಡೆದಿರುವ ಅನುಮಾನವಿದ್ದು, ಸಹಕಾರ ಖಾತೆಯನ್ನೂ ಹೊಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಂಚಾಲ ಆರ್.ಚಂದ್ರ ತೇಜಸ್ವಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಾಲು ಉತ್ಪಾದಕರು ಮತ್ತು ಸಹಕಾರ ಸಂಘಗಳನ್ನು ರಕ್ಷಿಸಲು ಎಲ್ಲರೂ ಸಂಘಟಿತರಾಗುವ ಅಗತ್ಯವಿದೆ ಎಂದ ಅವರು, ಖಾಸಗಿ ಕಂಪನಿಗೆ ಹಾಲು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಕೂಡಲೇ ರಾಜೀನಾಮೆ ಕೊಡಬೇಕು. ಈ ಬಗ್ಗೆ ಪ್ರಧಾನಿ ಮಧ್ಯಪ್ರವೇಶ ಮಾಡಿ ಯಾವುದೇ ಕಾರಣಕ್ಕೂ ವಿದೇಶದ ಅಗ್ಗದ ಹಾಲನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಅವಕಾಶ ನೀಡಬಾರದು. ಹಾಲು ನೀಡುವ ಹಸು -ಕರುಗಳಿಗೆ ಜೀವವಿಮೆಯನ್ನು ಕಡ್ಡಾಯ ಮಾಡಬೇಕು. ವಿಮೆ ಕಂತಿನ ಹಣವನ್ನು ಸರಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.1 ರು.ಗೆ ಆನ್‌ಲೈನ್‌ನಲ್ಲಿ ಹಾಲು; ಅನುಮಾನ
ಇತ್ತೀಚೆಗೆ ಖಾಸಗಿ ಆನ್‌ಲೈನ್ ಕಂಪನಿ 1 ರುಪಾಯಿಗೆ 1 ಲೀಟರ್ ಹಾಲನ್ನು ಮಾರಾಟ ಮಾಡಿದೆ. ಸರಿಸುಮಾರು 16.5 ಲಕ್ಷ ಲೀಟರ್ ಹಾಲು ಮಾರಾಟ ಈ ಆನ್‌ಲೈನ್ ವೇದಿಕೆಯಲ್ಲಿ ನಡೆದಿದೆ. ಇದರಿಂದ ಬೆಂಗಳೂರು ಹಾಲು ಒಕ್ಕೂಟದ ಹಾಲು ಮಾರಾಟದಲ್ಲಿ 50 ಸಾವಿರ ಲೀಟರ್ ಕುಸಿತ ಕಂಡಿದೆ. ಈ ಬಗ್ಗೆ ತನಿಖೆಯಾಗಬೇಕಿದೆ ಎಂದರು.ಕರ್ನಾಟಕದಲ್ಲಿ ಒಟ್ಟು 16 ಸಹಕಾರ ಹಾಲು ಒಕ್ಕೂಟಗಳಿವೆ. ಲಕ್ಷಾಂತರ ಬಡ-ರೈತ ಕುಟುಂಬಗಳು ಹಾಲಿನ ಉತ್ಪಾದನೆಯಲ್ಲಿ ತೊಡಗಿವೆ. ಪ್ರತಿದಿನ ಒಂದು ಕೋಟಿಗೂ ಹೆಚ್ಚು ಲೀಟರ್ ಹಾಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಇತ್ತೀಚಿಗೆ ಅಮೆರಿಕ ಮತ್ತು ಭಾರತದ ನಡುವಿನ ಸುಂಕ ಒಪ್ಪಂದ ಮತ್ತು ಯೂರೋಪ್ ಯೂನಿಯನ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಹಾಲು ಉತ್ಪನ್ನಗಳನ್ನು ಭಾರತ ದೇಶದಲ್ಲಿ ಮುಕ್ತವಾಗಿ ಮಾರಾಟ ಮಾಡಲು ಒಪ್ಪಂದಗಳಾಗುತ್ತಿವೆ. ಹಾಲಿನ ಉತ್ಪನ್ನಗಳ ಆಮದಿಗೆ ಆವಕಾಶ ಮಾಡಿಕೊಟ್ಟಲ್ಲಿ ನಮ್ಮ ದೇಶದ ಹಾಲು ಉತ್ಪಾದಕರು ಸರ್ವನಾಶವಾಗುತ್ತಾರೆ ಎಂದರು.
ರಾಂಪುರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷೆ ಭಾಗ್ಯಮ್ಮ, ಸೊಣ್ಣೇನಹಳ್ಳಿ ಎಂಪಿಸಿಎಸ್ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಸದಾಶಿವಮೂರ್ತಿ, ಸಿ.ಎಚ್.ರಾಮಕೃಷ್ಣಯ್ಯ, ಕೆಂಪಣ್ಣ , ಪಿ.ಎ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.23ಕೆಡಿಬಿಪಿ5-
ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಆರ್.ಚಂದ್ರತೇಜಸ್ವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಂಪುರ ಡೇರಿ ಅಧ್ಯಕ್ಷೆ ಭಾಗ್ಯಮ್ಮ, ಸೊಣ್ಣೇನಹಳ್ಳಿ ಎಂಪಿಸಿಎಸ್ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಸದಾಶಿವಮೂರ್ತಿ ಇತರರಿದ್ದರು.