ಸಾರಾಂಶ
ಕನ್ನಡಪ್ರಭ ವಾರ್ತೆ ಹಟ್ಟಿಚಿನ್ನದಗಣಿನೀರಿನ ಸಮಸ್ಯೆಯಿಂದ ಬೆಳಗೆಳು ಹಾಳಾಗುತಲಿದ್ದು, ಕೃಷ್ಣಾ ಬಲದಂಡೆ ಕಾಲುವೆ ಹಾಗೂ ರಾಂಪೂರ್ ಏತ ನೀರಾವರಿ ಕಾಲುವೆಗಳಿಗೆ ವಾರಬಂಧಿ ಆಧಾರದ ಮೇಲೆ ಏ.20 ರ ವರೆಗೆ ನೀರು ಹರಿಸುವ ತನಕ ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಲಾಗದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಪುತ್ರಪ್ಪ ನಂದಿಹಾಳ ಎಚ್ಚರಿಸಿದರು.ಕೆಬಿಜೆಎನ್ಎಲ್ ವಿರುದ್ಧ ನೀರಿಗಾಗಿ ಆಗ್ರಹಿಸಿ ಬುಧವಾರ ಮಧ್ಯಾಹ್ನ ಜೇವರ್ಗಿ - ಚಾಮರಾಜನಗರ 150(ಎ)ಯ ಗುರುಗುಂಟಾ ಗ್ರಾಮದಲ್ಲಿ ನಡೆದ ಹೆದ್ದಾರಿ ಬಂದ್ ಉದ್ದೇಶಿಸಿ ಮಾತನಾಡಿದರು. ವಾರಾಬಂದಿ ನೀರಿಗಾಗಿ ಆಗ್ರಹಿಸಿ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದರೂ ಸಹಿತ ರೈತರ ಸಮಸ್ಯೆ ಕುರಿತು ದಪ್ಪ ಚರ್ಮದ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಹೀಗೇ ಮುಂದುವರೆದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜ್ ಗುಡಿಹಾಳ ಮಾತನಾಡಿ, ಕಾಲುವೆಗೆ ನೀರು ಹರಿಸುವುದು ನಿಲ್ಲಿಸಿದರೆ ಬೆಳೆ ಕೈಗೆ ಸಿಗದೆ ಅನ್ನದಾತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಏ.1 ರಿಂದ 10 ಹಾಗೂ 15 ರಿಂದ 20 ರವರೆಗೆ ನೀರು ಹರಿಸಲು ಕ್ರಮಕೈಗೊಳ್ಳಲೆಬೇಕು. ಇಲ್ಲವಾದರೆ ರೈತರು ರೊಚ್ಚಿಗೆದ್ದು ಉಗ್ರಹೋರಾಟಕ್ಕಿಳಿದರೆ ಇಲಾಖೆ ನೇರಹೊಣೆ ಹೋರಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ನೀರು ಹರಿಸಲು ಕ್ರಮಕೈಗೊಳ್ಳುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಲಾಗದು ಎಂದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ಪ್ರತಿಭಟಿಸುತ್ತಿದ್ದ ನೂರಾರು ರೈತರ ಹೋರಾಟ ಕುರಿತು ನಿಷ್ಕಾಳಜಿ ಮಾಡಿದ ಕೆಬಿಜೆಎನ್ಎಲ್ ಅಧಿಕಾರಿಗಳ ತಾತ್ಸಾರ ಮನೋಭಾವ ಕಂಡು ಏಕಾಏಕಿ 1 ಗಂಟೆಗೂ ಹೆಚ್ಚು ಹೆದ್ದಾರಿ ಬಂದ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಸುದ್ದಿ ತಿಳಿಯುತ್ತಿದ್ದಂತಯೆ ಹಟ್ಟಿ ಸಿಪಿಐ ಕೆ.ಹೊಸಕೇರಪ್ಪ ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಮನವೊಲಿಸಲು ದೌಡಾಯಿಸಿದರು. ಅಧಿಕಾರಿಗಳು ಬರುತ್ತಿದ್ದಂತೆಯೇ ಹೋರಾಟ ತೀವ್ರಗೊಳಿಸಿ ಅಧಿಕಾರಿಗಳ ವಿರುದ್ಧ ಘೋಷನೆ ಕೂಗಲಾಯಿತು. ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವದಾಗಿ ಹೇಳಿದ ನಂತರ ರಸ್ತಾರೋಖೋ ತೆರವುಗೊಳಿಸಲಾಯಿತು. ಈ ವೇಳೆ ತಾಲೂಕು ಅಧ್ಯಕ್ಷ ವೈ. ದುರ್ಗಾ ಪ್ರಸಾದ್, ಪ್ರಮುಖರಾದ ಬಸವರಾಜ್ ಅಂಗಡಿ, ರಾಮಣ್ಣ ಅಡಿಕೆ, ಲಾಲ್‌ಸಾಬ್ ಬೆಂಚಲದೊಡ್ಡಿ, ತಿಮ್ಮಣ್ಣ ದೊಡ್ಡಹೊಲ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.