ರೈತರ ಮಕ್ಕಳು ಸ್ವಂತ ಉದ್ಯಮದಲ್ಲಿ ತೊಡಗಬೇಕು: ನಿಶ್ಚಲಾನಂದನಾಥ ಸ್ವಾಮೀಜಿ

| Published : Aug 26 2025, 01:04 AM IST

ಸಾರಾಂಶ

ಕನ್ನಡ ಭಾಷೆಯಲ್ಲಿ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಭಾವಚಿತ್ರಗಳು ಮತ್ತು ತಾಯಿ ಭುವನೇಶ್ವರಿಯ ಭಾವಚಿತ್ರ ಮಳಿಗೆಯಲ್ಲಿ ಹಾಕಿರುವುದು ಶ್ಲಾಘನೀಯ. ಹೋಬಳಿ ಕೇಂದ್ರದಲ್ಲಿ ಇಂತಹ ಮಳಿಗೆ ತೆರೆದಿರುವುರಿಂದ ರೈತರಿಗೆ ಮತ್ತು ಹಲಗೂರಿನ ನಾಗರೀಕರಿಗೆ ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ರೈತ ಮಕ್ಕಳು ಸ್ವಂತ ಉದ್ಯಮದಲ್ಲಿ ತೊಡಗಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸುವ ಧೈರ್ಯ ಮಾಡಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಕನ್ನಡ ಸಾಹಿತ್ಯ ಮೊಬೈಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿ, ಪ್ರಶಾಂತ್ ಅವರು ಕನ್ನಡ ನಾಡು, ನುಡಿ ಬಗ್ಗೆ ಅಭಿಮಾನ ವಿಶ್ವಾಸ ಇಟ್ಟುಕೊಂಡು ಕನ್ನಡ ಸಾಹಿತ್ಯ ಎಂಬ ಹೆಸರಿನಲ್ಲಿ ಮೊಬೈಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆ ತೆರೆದಿರುವುದು ಸಂತೋಷದ ವಿಷಯ. ಅವರಲ್ಲಿ ನಮ್ಮ ನಾಡು, ನುಡಿ ಬಗ್ಗೆ ಎಷ್ಟು ಅಭಿಮಾನವಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದರು.

ಕನ್ನಡ ಭಾಷೆಯಲ್ಲಿ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಭಾವಚಿತ್ರಗಳು ಮತ್ತು ತಾಯಿ ಭುವನೇಶ್ವರಿಯ ಭಾವಚಿತ್ರ ಮಳಿಗೆಯಲ್ಲಿ ಹಾಕಿರುವುದು ಶ್ಲಾಘನೀಯ. ಹೋಬಳಿ ಕೇಂದ್ರದಲ್ಲಿ ಇಂತಹ ಮಳಿಗೆ ತೆರೆದಿರುವುರಿಂದ ರೈತರಿಗೆ ಮತ್ತು ಹಲಗೂರಿನ ನಾಗರೀಕರಿಗೆ ಅನುಕೂಲವಾಗುತ್ತದೆ ಎಂದರು.

ಸಮಾಜದ ಎಲ್ಲಾ ಯುವಕರು, ರೈತ ಮಕ್ಕಳು ನಮಗೆ ಯಾವುದೇ ವೃತ್ತಿ ದೊರೆಯಲಿಲ್ಲ ಎಂದು ಚಿಂತಿಸದೆ ಧೈರ್ಯದಿಂದ ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ವಿ ಕಾಣಲು ಸಹಕಾರಿಯಾಗಲಿದೆ ಎಂದರು.

ಇದೇ ವೇಳೆ ಶ್ರೀಗಳಿಗೆ ದಿವ್ಯ ಪ್ರಶಾಂತ್ ದಂಪತಿ ಪಾದಪೂಜೆ ಮಾಡಿ ಅಭಿನಂದಿಸಿ, ಆಶೀರ್ವಾದ ಪಡೆದರು.

ಮಠದ ಜಗದ್ಗುರು ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ಲಿಂಗೈಕ್ಯರಾಗಿರುವುದರಿಂದ ಅವರ ಆ.31 ರಂದು ನಡೆಯುವ ಪುಣ್ಯಾರಾಧನೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಆತ್ಮಕ್ಕೆ ಶಾಂತಿ ಕೋರುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎನ್.ಕೆ.ಕುಮಾರ್ ಎ.ಟಿ.ಶ್ರೀನಿವಾಸ್, ಶಿವು, ನೇಗಿಲಯೋಗಿ ಕೃಷ್ಣೇಗೌಡ, ಶಿವಲಿಂಗು, ದಿವ್ಯ ಪ್ರಶಾಂತ್, ಪ್ರೇಮಮ್ಮ, ಶಿವಣ್ಣ, ಸಿದ್ದೇಗೌಡ, ರಾಮು, ಭಾಸ್ಕರ ಸೇರಿದಂತೆ ಇತರರು ಇದ್ದರು.