ಭೂಮಿ ಅಳತೆಗೆ ರೈತರ ಸಹಕಾರ ಅಗತ್ಯ: ಶಾಸಕ ಹರೀಶ್

| Published : Sep 18 2024, 02:02 AM IST

ಭೂಮಿ ಅಳತೆಗೆ ರೈತರ ಸಹಕಾರ ಅಗತ್ಯ: ಶಾಸಕ ಹರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿಯ ಅಳತೆ ಮಾಡುವುದು ದೇಶದಲ್ಲಿ ಅತಿ ದೊಡ್ಡ ಸಮಸ್ಯೆಯಾಗಿದ್ದು, ರೈತರು ಈ ಕಾರಣಕ್ಕಾಗಿ ಬೇಸತ್ತಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹರಿಹರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಕುಣೆಬೆಳಕೆರೆ ಉಮಾಮಹೇಶ್ವರ ದೇವಾಲಯದಲ್ಲಿ ಪೋಡಿಮುಕ್ತ ಅಭಿಯಾನಕ್ಕೆ ಚಾಲನೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಭೂಮಿಯ ಅಳತೆ ಮಾಡುವುದು ದೇಶದಲ್ಲಿ ಅತಿ ದೊಡ್ಡ ಸಮಸ್ಯೆಯಾಗಿದ್ದು, ರೈತರು ಈ ಕಾರಣಕ್ಕಾಗಿ ಬೇಸತ್ತಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಕುಣೆಬೆಳಕೆರೆ ಗ್ರಾಮದ ಉಮಾಮಹೇಶ್ವರ ದೇವಾಲಯ ಆವರಣದಲ್ಲಿ ಹಮ್ಮಿಕೊಂಡ ಪೋಡಿಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರು ಅಂದಾಜಿನ ಮೇಲೆ ಉಳುಮೆ ಮಾಡುತ್ತಿದ್ದಾರೆ. ಕೆಲವರು ಯಾರದೋ ಜಮೀನನ್ನು ಇನ್ನಾರೋ ಉಳುಮೆ ಮಾಡುವರಿದ್ದಾರೆ. ಅಳತೆಗೆ ರೈತರು ಒಪ್ಪದೇ ವಾಗ್ವಾದ ನಡೆಸುವ ಪರಿಸ್ಥಿತಿ ಕಾಣುತ್ತಿದ್ದೇವೆ, ಜಮೀನು ಪಾಲು ವಿಭಾಗ, ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ, ಅಳತೆ ಹೊಂದಾಣಿಕೆಯಾಗದೇ ರೈತರು ಸಮಸ್ಯೆಗೆ ಸಿಲುಕಿದ್ದಾರೆ ಎಂದರು.

ಇದಕ್ಕೆಲ್ಲಾ ಅಧಿಕಾರಿಗಳೇ ಕಾರಣ ಎಂಬ ಮಾತುಕೇಳಿ ಬರುತ್ತಿದೆ. ಇವೆಲ್ಲಾ ಕಾರಣ ಅರಿತ ಸರ್ಕಾರ ಪೋಡಿ ಮುಕ್ತ ಅಭಿಯಾನ ಹಮ್ಮಿಕೊಂಡಿದೆ. ರೈತರ ಜಮೀನು ಸರಿಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಅಳತೆ ಪೋಡಿ ಕಾರ್ಯಕ್ಕೆ ಅಧಿಕಾರಿಗಳಿಗೆ ರೈತರು ಸತ್ಯವನ್ನು ತಿಳಿಸಬೇಕು. ಆಗ ಸಮಸ್ಯೆಗಳು ಕೊನೆಯಾಗಿ ರೈತರು ನೆಮ್ಮದಿ ಕಾಣಬಹುದು. ರೈತರು ಈ ವಿಷಯದಲ್ಲಿ ಸಹಕರಿಸದಿದ್ದರೆ ವರ್ಷವಾದರೂ ಸಮಸ್ಯೆ ಬಗೆಹರಿಯಲ್ಲ ಎಂದು ಹರೀಶ್ ರೈತರಿಗೆ ಅರಿವು ಮೂಡಿಸಿದರು.

ತಹಸೀಲ್ದಾರ್ ಗುರುಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಕಾರ ಬಂದು ಮತ್ತು ಪಹಣಿಗಳಲ್ಲಿ ಪ್ರತ್ಯೇಕ ಮಾಹಿತಿ ದಾಖಲಾದರೆ ಜಮೀನಿನ ವ್ಯವಹಾರ ನಡೆಸಲು ಕಷ್ಟವಾಗಲಿದೆ. ಪೋಡಿ ನಡೆಸಿದರೆ ವ್ಯವಹಾರ ಸುಲಭವಾಗುತ್ತದೆ. ಕಂದಾಯ ಇಲಾಖೆ ಮತ್ತು ಭೂ ಅಳತೆಗೆ ಪ್ರತ್ಯೇಕ ಇಲಾಖೆಗಳಿವೆ. ರೈತರು ಕಂದಾಯ ಇಲಾಖೆಗೆ ದೂರುವ ಬದಲು ಸರ್ವೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.

ಉಪ ತಹಸೀಲ್ದಾರ್ ರವಿ, ರಾಜಸ್ವ ನಿರೀಕ್ಷಕ ಆನಂದ್, ಭೂ ಅಳತೆ ಅಧೀಕ್ಷಕ ಕಲ್ಲೇಶ್, ಅಧಿಕಾರಿ ವಿಜಯ್‌ಪ್ರಕಾಶ್, ಅಳತೆಗಾರರಾದ ಇಬ್ರಾಹಿಂ, ದರ್ಶನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಗ್ರಾಮಸ್ಥರಾದ ಎಸ್.ಅಂಜಿನಪ್ಪ, ಎಂ,ಮಲ್ಲೇಶ್, ಶಂಭಣ್ಣ, ವಿಜಯಣ್ಣ, ಹಾಲಪ್ಪ, ಬಸವರಾಜಪ್ಪ, ಪಿಡಿಒ ತಿಪ್ಪೇಸ್ವಾಮಿ ಹಾಗೂ ಗ್ರಾಪಂ ಸದಸ್ಯರು, ಗ್ರಾಮದ ರೈತರು ಇದ್ದರು.

- - -

ಟಾಪ್‌ ಕೋಟ್‌

ಸರ್ಕಾರಿ ಭೂಮಿಗಳಿಗೆ ಬೇರೆ ಅಳತೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಕುಣೆಬೆಳಕೆರೆ ಗ್ರಾಮದ ೮೮ ಸರ್ವೆ ನಂಬರ್‌ಗಳಲ್ಲಿನ ಜಮೀನುಗಳನ್ನು ಅಳತೆ ಮಾಡಲಾಗುತ್ತದೆ. ಎರಡು ದಿನಗಳ ನಂತರ ನಂದಿತಾವರೆ, ಗುಳದಹಳ್ಳಿ, ಆದಾಪುರ ಗ್ರಾಮಗಳನ್ನು ಈ ಅಭಿಯಾನ ನಡೆಸಲಾಗುತ್ತದೆ

- ಬಿ.ಪಿ. ಹರೀಶ್‌, ಶಾಸಕ, ಹರಿಹರ ಕ್ಷೇತ್ರ

- - -

-೧೭ಎಂಬಿಆರ್೧:

ಮಲೇಬೆನ್ನೂರು ಸಮೀಪದ ಕುಣೆಬೆಳಕೆರೆಯಲ್ಲಿ ಶಾಸಕ ಹರೀಶ್ ಪೋಡಿಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದರು.