ರೈತ ದಿನಾಚರಣೆ ಸರ್ಕಾರಿ ಕಾರ್ಯಕ್ರಮವಾಗಲಿ: ಉಮಾಶಂಕರ್ ಆಗ್ರಹ

| Published : Dec 24 2024, 12:50 AM IST

ಸಾರಾಂಶ

ರೈತರ ಬದುಕು ಹಸನಾಗಿಸುವ ಸಂಕಲ್ಪದೊಂದಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರವೇ ಇತರೆ ಜಯಂತಿಗಳ ಮಾದರಿಯಲ್ಲಿ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತ ದಿನವನ್ನಾಗಿ ಆಚರಣೆಗೆ ತಂದಿರುವುದು ಸ್ವಾಗತಾರ್ಹ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ರೈತ ಚೈತನ್ಯ ಕೇಂದ್ರದಲ್ಲಿ ಎಂಡಿಎನ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ರೈತರ ಬದುಕು ಹಸನಾಗಿಸುವ ಸಂಕಲ್ಪದೊಂದಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರವೇ ಇತರೆ ಜಯಂತಿಗಳ ಮಾದರಿಯಲ್ಲಿ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡ ನ.ಲಿ‌.ಕೃಷ್ಣ ಮಾತನಾಡಿ, 1981 ರಿಂದ ಕೇಂದ್ರ ಸರ್ಕಾರ ಮಾಜಿ ಪ್ರಧಾನಿಗಳಾದ ಚೌದರಿ ಚರಣ್ ಸಿಂಗ್ ರವರು ರೈತರ ಬದುಕಿನಲ್ಲಿ‌ ಸುಧಾರಣೆ ಸಾಲ ವಿಮೊಚಾನ ಕಾಯ್ದೆ ಸೇರಿ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಇಂತಹ ಕಾರ್ಯಗಳ ಸ್ಮರಣೆಗಾಗಿ ಇವರ ಜನ್ಮದಿನವನ್ನು ರೈತದಿನಾಚರಣೆ ಯನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ರೈತ ದಿನಾಚರಣೆಗಳು ಸಾಂಕೇತಿಕಗೊಳ್ಳದೆ ಕೃಷಿಯ ಉಳವು ಬೆಳವಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತನಾ ಸಭೆ ಗಳಾಗಬೇಕು. ಇದೇ ದಿನ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮ ದಿನವು ಆಗಿದ್ದು, ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರೈತ ಮುಖಂಡ ಕುದುರಗಂಡಿ ನಾಗರಾಜು, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಪಟೇಲ್ ಹರೀಶ್, ವಿ.ಎಚ್. ಶಿವಲಿಂಗಯ್ಯ, ಸ್ಟುಡಿಯೊ ಅನಿಲ್, ಬ್ಯಾಂಕ್ ಚಿಕ್ಕಣ್ಣ, ರೈತ ಮುಖಂಡ ಕೆ.ಟಿ.ಶಿವಕುಮಾರ್, ಹಿಂದುಳಿದ ವರ್ಗಗಳ ಅಧ್ಯಕ್ಷ ಶಶಿಕುಮಾರ್, ಗೊರವನಹಳ್ಳಿ ಪ್ರಸನ್ನ, ವಿ.ಎಂ.ರಮೇಶ್, ತುಂಬಕೆರೆ ಸಿದ್ದರಾಮ, ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೆಶಕ ಮಡೇನಹಳ್ಳಿ ಸಿದ್ದಲಿಂಗಸ್ವಾಮಿ ಸೇರಿ ಇತರರು ಇದ್ದರು.