ಬೀರೂರುಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗೆ ನೀರಿಲ್ಲ ಹಾಗಾಗಿ ವಿದ್ಯುತ್ ನೀಡಲು ಇಲಾಖೆಗೆ ಸಾಧ್ಯವಾಗದಿರಬಹುದು ಆದರೆ ಮಳೆಗಾಲದಲ್ಲೂ ಸರಿಯಾಗಿ ವಿದ್ಯುತ್ ನೀಡದೆ ಅಧಿಕಾರಿಗಳು ರೈತರ ವಿರುದ್ಧ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಆಕ್ರೋಶ
ಕನ್ನಡಪ್ರಭ ವಾರ್ತೆ, ಬೀರೂರುಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗೆ ನೀರಿಲ್ಲ ಹಾಗಾಗಿ ವಿದ್ಯುತ್ ನೀಡಲು ಇಲಾಖೆಗೆ ಸಾಧ್ಯವಾಗದಿರಬಹುದು ಆದರೆ ಮಳೆಗಾಲದಲ್ಲೂ ಸರಿಯಾಗಿ ವಿದ್ಯುತ್ ನೀಡದೆ ಅಧಿಕಾರಿಗಳು ರೈತರ ವಿರುದ್ಧ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿಯ ಜನ ಸಂಪರ್ಕ ಸಭೆಯಲ್ಲಿ ರೈತರು ಮಾತನಾಡಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಾಮಾನ್ಯ. ಮಳೆಗಾಲದಲ್ಲಿ ರೈತರು ತೋಟ ಹಾಗೂ ಜಮೀನುಗಳ ಕೊಳವೆಬಾವಿ ಸ್ಥಗಿತಗೊಳಿಸುತ್ತಿದ್ದರೂ ವಿದ್ಯುತ್ ವ್ಯತ್ಯಕ್ಕೆ ಕಾರಣವೇನು? ಉಪವಿಭಾಗದ ಎಇ ಸ್ಥಳಕ್ಕೆ ಬಂದು ಪರಿಶೀಲಿಸಿ 3 ದಿನದಲ್ಲಿ ಸರಿ ಪಡಿಸಿ ಎಂದು ಆದೇಶ ಹೊರಡಿ ಸಿದ್ದರು. ಆದರೆ 3 ತಿಂಗಳು ಕಳೆದರೂ ಸಮಸ್ಯೆ ಬಹೆಹರಿದಿಲ್ಲ. ಜನಸಂಪರ್ಕ ಸಭೆಯ ಮಾಹಿತಿ ನೀಡಲ್ಲ. ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರಾ. ಆದರೆ ನಮ್ಮ ಗ್ರಾಮಗಳಿಗೆ ಪತ್ರಿಕೆ ಬರೋದಿಲ್ಲ. ಹೊಗರೇ ಹಳ್ಳಿ ರೈತರ ಸಮಸ್ಯೆಗಳಿಗೆ ಸಹಾಯಕ ಎಂಜಿನಿ ಯರ್ ಸ್ಪಂದಿಸುತ್ತಿಲ್ಲ. ಅವರನ್ನು ವರ್ಗಾವಣೆಗೊಳಿಸಬೇಕು ಎಂದು ರೈತ ಮನು ಒತ್ತಾಯಿಸಿದರು.ಎಮ್ಮೆದೊಡ್ಡಿ ಗ್ರಾಮದ ರೈತ ವಸಂತ್ ಕುಮಾರ್ ಮಾತನಾಡಿ ತೋಟದಲ್ಲಿ ಟಿಸಿ ಸುಟ್ಟು ೨೫ ದಿನಗಳಾಗಿವೆ. ಅರ್ಜಿ ಸಲ್ಲಿ ಸಿದ್ದು ಟಿಸಿ ನೀಡಲು ವಿಳಂಬವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂ ಎಇಇ ವೀಣಾ ಇಲ್ಲಿನ ಉಪ ಕೇಂದ್ರದಲ್ಲಿ ಬಫರ್ ಝೋನ್ ಅಡಿ ಯಾವುದೇ ಟಿಸಿಗಳಿಲ್ಲ. ರಿಪೇರಿ ಮಾಡಿಸಿಯೇ ಕೊಡಬೇಕು. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಗಮನ ಹರಿಸಲಾಗುವುದು ಎಂದರು.
ಮನು ಮಾತನಾಡಿ, ಹೊಗರೇಹಳ್ಳಿ ಭಾಗದಲ್ಲಿ ವಿದ್ಯುತ್ ತೀವ್ರ ಸಮಸ್ಯೆ ಉಂಟಾಗಿದೆ. ಸರ್ಕಾರ ರೈತರಿಗೆ ನಿಗದಿ ಮಾಡಿದ ೭ ಗಂಟೆಯಲ್ಲಿ 4-6 ಬಾರಿ ವಿದ್ಯುತ್ ವ್ಯತ್ಯಯವಾದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ರೈತರಿಗೆ ಸ್ಪಂದಿಸದ ಅಧಿಕಾರಿಯನ್ನು ವರ್ಗಾವಣೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅವರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು. ಬಹಳಷ್ಟು ಟಿಸಿಗಳು ಸುಟ್ಟು ಹೋಗಲು ಅನಧಿಕೃತ ಸಂಪರ್ಕಗಳು ಕಾರಣ. ಸ್ಥಳೀಯರೇ ಅವುಗಳನ್ನು ನಿಯಂತ್ರಣ ಮಾಡಬಹುದು ಎಂದರು.
ಪ್ರಭುಕುಮಾರ್ ಮಾತನಾಡಿ, ಗಿರಿಯಾಪುರ ಶಾಲೆ ಮುಂಭಾಗದ ವಿದ್ಯುತ್ ಯಾರು ಹೊಣೆ? ಲೈನ್ ಹಳೆಯದಾಗಿದ್ದು ಅದು ಹಲವು ಬಾರಿ ಹರಿದು ಹೋಗುತ್ತಿದೆ ೩ ತಿಂಗಳಿನಿಂದ ದೂರು ನೀಡಿದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಇದಕ್ಕೆ ಉತ್ತರಿಸಿದ ಎಇಇ ವೀಣಾ, ಗಿರಿಯಾಪುರದ ಶಾಲೆ ಬಳಿ ಸಮಸ್ಯೆ ಶೀರ್ಘ ಬಗೆಹರಿಸಲು ಗುತ್ತಿಗೆದಾರನಿಗೆ ಸೂಚಿಸಿದರು. ಬೀರೂರು-ಲಿಂಗದಹಳ್ಳಿಲೈನ್‌ನಿಂದ ಹೊಗರೇಹಳ್ಳಿಗೆ ಸಂಪರ್ಕ ಕಲ್ಪಿಸಿದ್ದು ಲೈನ್ ಸರಿಪಡಿ ಸಲು ಟೆಂಡರ್ ಆಗಿದೆ. ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಕಾಮಗಾರಿ ಸ್ಥಗಿತ ತೋಟದ ಲೈನ್‌ನಲ್ಲಿ ೫ ಕಂಬ ಅಳವಡಿಸಲು ಸೂಚನೆ ನೀಡಲಾಗಿದೆ. ೨ ಕಂಬಗಳನ್ನು ಅಳವಡಿಸಿ ಗುತ್ತಿಗೆ ದಾರ ಕಾಮಗಾರಿ ಸ್ಥಗಿತಗೊಳಿಸಿದ್ದಾನೆ. ಇದಕ್ಕೆ ಕಾರಣ ತಿಳಿಸಿ ಎಂದು ಟಿ.ಸಿ.ಷಡಾಕ್ಷರಿ ಹೇಳಿದರು.
ಕಡೂರು ಇಇ ರವಿಕಿರಣ್ ಹೊಗರೇಹಳ್ಳಿ ಭಾಗದಲ್ಲಿ ಶೀಘ್ರವೇ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ರೈತರ ಸಮಸ್ಯೆ ಸಹ ತಿಳಿದಿವೆ.ತಾಲೂಕಿನಲ್ಲಿ ಮಳೆ ಇಲ್ಲದೆ ಬರ ಕಾಡುತ್ತಿದ್ದು ನಿಮ್ಮಗಳ ಕಷ್ಟದ ಅರಿ ವಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ಸಭೆಯಲ್ಲಿ ಬೀರೂರು ಎಇಇ ವೀಣಾ, ಜೆಇ ಯತೀಶ್ ಮತ್ತು ಮೆಸ್ಕಾಂ ಸಿಬ್ಬಂದಿ, ಗ್ರಾಹಕರು ಇದ್ದರು.೬ ಬೀರೂರು೨
ಬೀರೂರಿನ ಮೆಸ್ಕಾಂ ಉಪವಿಭಾಗದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ ನಡೆಯಿತು. ಮಂಜುನಾಥ್, ರವಿಕಿರಣ್, ವೀಣಾ ಇದ್ದರು.