ಜಲಾಶಯದಿಂದ ನೀರು ಹರಿಸಲು ರೈತರ ಆಗ್ರಹ

| Published : Mar 31 2024, 02:08 AM IST

ಸಾರಾಂಶ

ತಾಲೂಕಿ‌ನ ಕಾಲುವೆಗಳಿಗೆ ನಾರಾಯಣಪುರ ಜಲಾಶಯದಿಂದ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ನಗರದ ತಹಸೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಸುರಪುರ: ತಾಲೂಕಿ‌ನ ಕಾಲುವೆಗಳಿಗೆ ನಾರಾಯಣಪುರ ಜಲಾಶಯದಿಂದ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ನಗರದ ತಹಸೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಸಮಿತಿ ಸುರಪುರ ಹಾಗೂ ಗುಲಬರ್ಗಾ ಜಿಲ್ಲಾ ವ್ಯಾಪ್ತಿಗೆ ಬರತಕ್ಕಂತ ಭೀಮಾನದಿಗೆ ನಾರಾಯಣಪೂರ ಎಡದಂಡೆ ಕಾಲುವೆಯಿಂದ ಭೀಮಾ ನದಿಗೆ 1 ಟಿಎಂಸಿ ನೀರು ಬಿಡಲಾಗಿದೆ. ಇದರಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.

ಮುಂದಿನ ಕೊನೆಯ ಭಾಗದ ಗ್ರಾಮಗಳಾದ ವಡಗೇರಾ, ಶಹಾಪುರ, ಯಾದಗಿರಿ, ಸುರಪುರ ತಾಲೂಕಿನಲ್ಲಿ ಒಳಪಡತಕ್ಕಂತ ಜನರು ಮತ್ತು ದನ-ಕರುಗಳಿಗೆ ಕುಡಿಯುವ ನೀರಿನ ಸಲುವಾಗಿ ನೀರನ್ನು ಬಿಡದೆ ಇದರಲ್ಲಿ ಕೂಡ ತಾರತಮ್ಯವೆಸಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾರಾಯಣಪುರ ಡ್ಯಾಂ ಯಾದಗಿರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವುದರಿಂದ ಇಲ್ಲಿಯೂ ರೈತರ ದನ-ಕರುಗಳಿಗೆ ನೀರು ಬಿಡದೆ ತಾರತಮ್ಯ ಮಾಡಿ ಬೇರೆ ಜಿಲ್ಲೆಗಳಿಗೆ ನೀರು ಕೊಟ್ಟು ಸಹಕರಿಸುತ್ತಿದ್ದಾರೆ. ಎಲ್ಲಾ ತಾಲೂಕುಗಳು ತಾಲೂಕಿನಲ್ಲಿ ಬರುವ ಎಲ್ಲಾ ಗ್ರಾಮಗಳ ದನ-ಕರುಗಳಿಗೆ ನೀರಿನ ಅವಶ್ಯಕತೆ ಇದೆ. ಇಲ್ಲಿಯೂ ಕೂಡ ನೀರಿನ ಅವಶ್ಯಕತೆ ಇದೆ. ಈಗಾಗಲೇ ಈ ವರ್ಷ ಸಂಪೂರ್ಣ ಬರಗಾಲವೆಂದೂ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಸರ್ಕಾರಕ್ಕೆ ಗೊತ್ತಿದ್ದರೂ ಕೂಡ ಇದರಲ್ಲಿ ತಾರತಮ್ಯವೆಸಗುವುದು ರೈತರಿಗೆ ಮಾಡಿದ ಅಪಮಾನ ಎಂದು ದೂರಿದರು.

ಈ ಹಿಂದೆ ಸಂಪೂರ್ಣ ಬರಗಲಾವೆಂದು ಘೋಷಣೆ ಮಾಡಿ ಸರ್ಕಾರಕ್ಕೆ ಪರಿಹಾರದ ಸಲುವಾಗಿ ವರದಿ ಕಳುಹಿಸಿರುವ ಯಾವೊಬ್ಬ ರೈತರಿಗೆ ಪರಿಹಾರ ಮುಟ್ಟಿಲ್ಲ. ಇದರಲ್ಲಿ ಕೂಡ ತಾರತಮ್ಯ ಮಾಡಿ ಯಾದಗಿರಿ ಜಿಲ್ಲೆಯಲ್ಲಿ ಬರತಕ್ಕಂತ ತಾಲೂಕುಗಳು ಸುರಪುರ, ಶಹಾಪೂರ, ಯಾದಗಿರಿ, ವಡಗೇರಾ, ಗುರುಮಠಕಲ್, ಹುಣಸಗಿ ಎರಡು ತಾಲೂಕುಗಳು ಸಂಪೂರ್ಣ ಬರಗಾಲವೆಂದೂ ಉಳಿದು ತಾಲೂಕುಗಳು ಅಲ್ಪ ಬರಗಾಲವೆಂದೂ ಘೋಷಣೆ ಮಾಡಿದ್ದು ಸರಿ ಇಲ್ಲ ಎಂದು ಒಕ್ಕೊರಲಿನಿಂದ ಖಂಡಿಸಿದರು.

ಸರ್ಕಾರದಿಂದ ರೈತರಿಗೆ ಸರ್ವೆ ನಂಬರಿಗೆ 2000 ರು. ಅಧಿಕಾರಿಗಳು ಹೇಳಿ ಅದು ಕೂಡ ಎಲ್ಲಾ ರೈತರಿಗೆ ಸರಿಯಾಗಿ ಮುಟ್ಟಿಲ್ಲ. ಈಗಾಗಲೇ 1-2 ದಿನದಲ್ಲಿ ಕೊನೆಯ ಭಾಗದ ರೈತರ ದನ-ಕರುಗಳಿಗೆ ನೀರು ಬಿಡದಿದ್ದರೆ ಉಗ್ರ ಹೋರಾಟ ರಸ್ತೆ ತಡೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ರಮೇಶ ದೊರೆ, ವೆಂಕಟೇಶ ಬೇಟೆಗಾರ, ಹಣಮಂತ್ರಾಯ ಚಂದಲಾಪೂರ, ವೆಂಕಟೇಶಗೌಡ ಕುಪಗಲ್, ಭೀಮಣ್ಣ ತಿಪ್ಪನಟಗಿ, ನಿಂಗನಗೌಡ ಗುಳಬಾಳ,