ರೈತರ ಸಮಸ್ಯೆ ಬಗೆಹರಿಸುವಂತೆ ರೈತರ ಒತ್ತಾಯ

| Published : Feb 28 2024, 02:31 AM IST

ಸಾರಾಂಶ

ನಿಡಗುಂದಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ವಿವಿಧ ರೈತ ಸಂಘನೆಗಳು, ಕನ್ನಡಪರ ಸಂಘನೆಗಳು ಹಾಗೂ ಅಟೋ ಮಾಲೀಕರ ಸಂಘ ಜಂಟಿಯಾಗಿ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ನಿಡಗುಂದಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ವಿವಿಧ ರೈತ ಸಂಘನೆಗಳು, ಕನ್ನಡಪರ ಸಂಘನೆಗಳು ಹಾಗೂ ಅಟೋ ಮಾಲೀಕರ ಸಂಘ ಜಂಟಿಯಾಗಿ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ರೈತರ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸುವುದನ್ನು ಬಿಟ್ಟು ರೈತರ ಮೇಲೆ ಅಶ್ರುವಾಯು ಸೆಲ್, ರಬ್ಬರ್ ಗುಂಡಿನ ದಾಳಿ ನಡೆಸುತ್ತಿರುವುದು ಸರಿಯಲ್ಲ. ಈ ದಾಳಿಯಲ್ಲಿ ಓರ್ವ ರೈತ ಪ್ರಾಣ ಬಿಟ್ಟಿದ್ದಾನೆ. ರೈತರ ಸಮಸ್ಯೆಗೆ ಸರ್ಕಾರ ಶೀಘ್ರ ಪರಿಹಾರ ನೀಡಬೇಕು. ರೈತರ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, ಡಾ: ಸ್ವಾಮಿನಾಥನ್ ಆಯೋಗ ವರದಿ ಅನುಷ್ಠಾನ, ರೈತರಿಗೆ ಮಾಸಿಕ ಪಿಂಚಣಿ, ಕೃಷಿ ಸಾಲಮನ್ನಾ ಹಾಗೂ ರೈತರ ಮೇಲಿನ ಪ್ರಕರಣ ವಾಪಸ್ ಪಡೆಯುವುದು ಸೇರಿದಂತೆ ಹಲವು ಬೇಡಿಕೆಗೆ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು. ರೈತರ ತಾಳ್ಮೆ ಪರೀಕ್ಷಿಸದೇ ಸಮಸ್ಯೆ ಪರಿಹಾರ ಮಾಡುವಂತೆ ಆಗ್ರಸಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜ ಆಲೂರ, ತಾಲೂಕಾಧ್ಯಕ್ಷ ಸೀತಪ್ಪ ಗಣಿ, ಸುಭಾಷ ಚೋಪಡೆ, ಶಶಿಕಾಂತ ದೇಸಾಯಿ, ಆನಂದ ಹಡಗಲಿ, ವೆಂಕಟೇಶ ವಡ್ಡರ, ಲಕ್ಷ್ಮಣಗೌಡ ಬಿರಾದರ, ಉಮೇಶ ಮನಗೂಳಿ, ಭಾವಸಾಬ ವಾಲಿಕಾರ, ಮಲ್ಲಪ್ಪ ಸಾಳೆ, ಗೋಪಾಲ ವಡ್ಡರ, ಪಾರವ್ವ ಲಮಾಣಿ, ಶಾಂತವ್ವ ಮಡಿವಾಳರ, ಮಲ್ಲಯ್ಯ ನಾಗೂರಮಠ, ವಿಠ್ಠಲ್ ಮಾದರ, ಮಂಜು ಬಂಡಿವಡ್ಡರ ಸೇರಿದಂತೆ ಇತರರಿದ್ದರು.