ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಸೋಂಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಗಳಲ್ಲಿ ಈಗಾಗಲೇ ಸಾವಿರಾರು ಎಕರೆ ಭೂಸ್ವಾಧೀನವಾಗಿದ್ದು, ಇನ್ನಾದರೂ ಕೈಗಾರಿಕೆಗಳ ಸ್ಥಾಪನೆಗೆ ರೈತರ ಫಲವತ್ತಾದ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು. ಯಾವುದೇ ಕಾರಣಕ್ಕೂ ನಾವು ಜಮೀನು ಕೊಡುವುದಿಲ್ಲ, ಜಮೀನನ್ನು ಪಡೆಯುವುದಾದರೆ ದುಪ್ಪಟ್ಟು ಪರಿಹಾರ ನೀಡಬೇಕು ಎಂದು ರೈತರು ಕೆಐಎಡಿಬಿ ಅಧಿಕಾರಿಗಳನ್ನು ಆಗ್ರಹಿಸಿದ್ದಲ್ಲದೆ ಹಲವು ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು.ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಏರ್ಪಡಿಸಿದ್ದ ಹನುಮಂತಪುರ, ಕೋಡಿಪಾಳ್ಯ, ಬಿದಲೂರು ಗ್ರಾಮಗಳ 387 ಎಕರೆ ಜಮೀನಿನ ಭೂದರ ನಿಗದಿ ಸಭೆಯಲ್ಲಿ ರೈತರು ಭಾಗವಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ಭೂಸ್ವಾಧೀನದಿಂದ ಜಮೀನನ್ನು ಕೈಬಿಡಿ:
ನಮ್ಮ ವಂಶಪಾರ್ಯಂಪರ್ಯವಾಗಿ ಬಂದ ಫಲವತ್ತಾದ ಭೂಮಿಯಲ್ಲಿ ಅಡಿಕೆ, ತೆಂಗು, ಬಾಳೆ ಸೇರಿದಂತೆ ಹತ್ತಾರು ಉತ್ತಮ ಫಸಲು ಬರುವ ಜಮೀನುಗಳಿದ್ದು, ಇದರಿಂದ ನಾವು ದುಡಿದು ಜೀವನ ಸಾಗಿಸುತ್ತಿದ್ದೇವೆ. ಆದರೆ ಕೆಐಎಡಿಬಿ ಯೂ ನಮ್ಮ ಫಲವತ್ತಾದ ಜಮೀನುಗಳನ್ನು ಭೂಸ್ವಾಧೀನದಿಂದಕ್ಕೆ ಬಿಟ್ಟು, ಬರಡುಭೂಮಿಗಳನ್ನು ಭೂಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳನ್ನು ನಿರ್ಮಿಸಿಕೊಳ್ಳಿ. ಅದನ್ನು ಬಿಟ್ಟು ರೈತರ ಫಲವತ್ತಾದ ಭೂಮಿಯನ್ನುಕಿತ್ತುಕೊಳ್ಳಬಾರದೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಎಕರೆಗೆ 3 ಕೋಟಿಗೆ ಆಗ್ರಹ:
ದಾಬಸ್‍ಪೇಟೆಯಲ್ಲಿ ಒಂದು ಸೈಟಿನ ಬೆಲೆ ಕನಿಷ್ಠ 50 ಲಕ್ಷದಿಂದ 65 ಲಕ್ಷದವರೆಗೆ ಇದೆ. ಕಳೆದ ಎರಡು ತಿಂಗಳ ಹಿಂದೆ ಪಕ್ಕದ ಗ್ರಾಮದ ಜಮೀನುಗಳಿಗೆ ಎಕರೆಗೆ 1.60ಕೋಟಿ ನಿಗದಿಪಡಿಸಿದ್ದೀರಾ? ಈ ಬಾರಿ ದುಪ್ಪಟ್ಟು ಪರಿಹಾರ ನೀಡಿದರೆ ಮಾತ್ರ ನಮ್ಮ ಜಮೀನಗಳನ್ನು ನೀಡುತ್ತೇವೆ. ನೀವು ಕೊಡುವ ಪರಿಹಾರಕ್ಕೆ ಮೂರು ಸೈಟ್ ಬರಲ್ಲ. ಹಾಗಾಗಿ ನಮ್ಮ ಜಮೀನಿಗೆ ಕನಿಷ್ಟ 3 ರಿಂದ 4 ಕೋಟಿಯನ್ನು ಪ್ರತಿ ಎಕರೆಗೆ ನೀಡಬೇಕು ಎಂದು ಆಗ್ರಹಿಸಿದರು.ಸಭೆಯಿಂದ ಹೊರ ನಡೆದ ರೈತರು:ಈ ಜಮೀನುಗಳನ್ನು ನಾವು ಕೊಡುವುದಿಲ್ಲ ಎಂದು ಹೈಕೋರ್ಟ್ ನಲ್ಲಿ ಧಾವೆ ಹಾಕಿ ಭೂಸ್ವಾಧೀನ ಪ್ರಕ್ರಿಯೆಗೆ ತಡೆಯಾಜ್ಞೆಯಿದ್ದರೂ ಭೂದರ ನಿಗದಿ ಸಭೆ ಆಯೋಜಿಸುತ್ತಿರುವುದು ಸರಿಯಲ್ಲ ಎಂದು ಕೆಲ ರೈತರು ಬಹಿಷ್ಕಾರ ಹಾಕಿ ಸಭೆಯಿಂದ ಹೊರನಡೆದರು.ಮೂರು ಗ್ರಾಮಗಳಿಗೂ ಒಂದೇ ಬೆಲೆ ನಿಗದಿಪಡಿಸಿ : ಕೋಡಿಪಾಳ್ಯ, ಹನುಮಂತಪುರ, ಬಿದಲೂರು ಗ್ರಾಮಗಳಿಗೆ ಒಂದೇ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿದರು ಆಗ ಎಲ್ಲ ಜಮೀನುಗಳಿಗೆ 2 ಕೋಟಿ ದರ ನಿಗದಿಪಡಿಸಿದಾಗ, ಕೆಲವು ರೈತರು ಸರ್ಕಾರದ ಎಸ್ ಆರ್ ಬೆಲೆ ಪ್ರಕಾರ ಪ್ರತಿ ಗ್ರಾಮಗಳಿಗೆ ಭೂದರ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಪರಿಹಾರದ ಬದಲು ಜಮೀನು:ಕೆಐಎಡಿಬಿ ವಿಶೇಷ ಅಭಿವೃದ್ಧಿ ಅಧಿಕಾರಿ ಲೀಲಾವತಿ ಮಾತನಾಡಿ, ಕೆಐಎಡಿಬಿ ಭೂಸ್ವಾಧೀನಪಡಿಸಿಕೊಂಡ ಜಮೀನು ಗಳಿಗೆ ರೈತರಿಗೆ ಭೂಪರಿಹಾರ ನೀಡುತ್ತದೆ. ಅಲ್ಲದೆ ರೈತರು ನಮಗೆ ಹಣ ಬೇಡವೆಂದರೆ ಪ್ರತಿ ಎಕರೆಗೆ ಕೆಐಎಡಿಬಿಯಿಂದ ಅಭಿವೃದ್ಧಿಪಡಿಸಿದ 10781 ಅಡಿ ಜಾಗವನ್ನು ರೈತರಿಗೆ ನೀಡಲಾಗುತ್ತದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದರು.
ಕಾನೂನು ಬದ್ದವಾಗಿ ಭೂದರ ನಿಗದಿ : ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ ಮಾತನಾಡಿ, ಈ ಹಿಂದೆಯೂ ಅಕ್ಕಪಕ್ಕದ ಗ್ರಾಮಗಳ ಭೂಮಿಯ ಸರ್ಕಾರಿ ಮೌಲ್ಯದ ಪ್ರಕಾರ ಒಂದು ಕೋಟಿ ಅರವತ್ತು ಲಕ್ಷ ನೀಡಿದ್ದು, ರೈತರಿಗೆ ಅನುಕೂಲವಾಗಲೆಂದು ಭೂದರ ನಿಗದಿ ಮಾಡಲಾಗಿದೆ. ಕಾನೂನು ಬದ್ಧವಾಗಿ ರೈತರ ಜಮೀನುಗಳಿಗೆ ದರ ನಿಗದಿಪಡಿಸಲಾಗಿದೆ. ರೈತರ ಅನ್ಯಾಯವಾಗುವುದಿಲ್ಲ. ಶೀಘ್ರದಲ್ಲೇ ಭೂಪರಿಹಾರ ನೀಡಲಾಗುತ್ತದೆ. ಸರಿಯಾದ ದಾಖಲೆ ನೀಡಿ ಭೂಪರಿಹಾರದ ಹಣ ಪಡೆದುಕೊಳ್ಳಬಹುದು ಎಂದರು.ನ್ಯಾಯಾಲಯದ ಆದೇಶದ ಪ್ರಕಾರ ಕ್ರಮ : ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಿಂದ 100 ಮೀಟರ್ ಒಳಗೆ ಭೂಸ್ವಾಧೀನವಾದ ಜಮೀನುಗಳಿಗೆ 4.35 ಕೋಟಿ ರೂಗಳನ್ನು ಭೂದರ ನಿಗದಿ ಮಾಡಲಾಗಿದ್ದು, ಭೂಸ್ವಾಧೀನಪಡಿಸಿಕೊಂಡಿರುವ 387 ಎಕರೆಯಲ್ಲಿ 116 ಎಕರೆಗೆ ರೈತರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಪರಿಣಾಮ ಬಿಟ್ಟು 271 ಎಕರೆಗೆ ಭೂದರ ನಿಗದಿಪಡಿಸಿದ್ದು, ಉಳಿದ ಜಮೀನುಗಳಿಗೆ ನ್ಯಾಯಾಲಯದ ಆದೇಶದ ಪ್ರಕಾರ ಕ್ರಮವಹಿಸುತ್ತೇವೆ ಎಂದರು.ಪೋಟೋ 1 : ದಾಬಸ್‍ಪೇಟೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಏರ್ಪಡಿಸಿದ್ದ ಹನುಮಂತಪುರ, ಕೋಡಿಪಾಳ್ಯ, ಬಿದಲೂರು ಗ್ರಾಮಗಳ 387-ಎಕರೆ ಜಮೀನಿನ ಭೂದರ ನಿಗದಿ ಸಭೆಯಲ್ಲಿ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.ಪೋಟೋ 2 : ಭೂದರ ನಿಗದಿ ಸಭೆಯಲ್ಲಿ ಖಾಲಿಯದ್ದ ಚೇರುಗಳು
;Resize=(128,128))
;Resize=(128,128))
;Resize=(128,128))