ಕಾಲುವೆ ಸ್ವಚ್ಛತೆಗೆ 2025- 26ನೇ ಸಾಲಿನಲ್ಲಿ ಸರ್ಕಾರ ₹29 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಸರ್ಕಾರದಿಂದ ಬಂದ ಅನುದಾನವನ್ನು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕೊಳಚೆ ಕಾಲುವೆ ಸ್ವಚ್ಛ ಮಾಡದೇ ಹಣ ಲೂಟಿ ಮಾಡಿದ್ದಾರೆಂದು ರೈತರು ಗಂಭೀರವಾದ ಆರೋಪ ಮಾಡಿದರು.
ನರಗುಂದ: ಮಲಪ್ರಭಾ ಜಲಾಶಯದಿಂದ ನೀರು ಪೂರೈಕೆ ಮಾಡುವ ಕೊಳಚೆ ಕಾಲುವೆ ಸ್ವಚ್ಛ ಮಾಡುವ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರವಾಗಿದೆ ಎಂದು ಕೊಣ್ಣೂರು ಗ್ರಾಮದ ರೈತರು ಗುರುವಾರ ನೀರಾವರಿ ನಿಗಮದ ಅಧಿಕಾರಿ ಪಿ.ಇ. ನಾಗರಾಜ ಅವರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಮಾತನಾಡಿ, ತಾಲೂಕಿನ ಕೊಣ್ಣೂರು, ಬೆಳ್ಳೇರಿ, ವಾಸನ, ಬೂದಿಹಾಳ, ಕಪ್ಪಲಿ, ಕಲ್ಲಾಪುರ, ಶಿರೋಳ, ಅಸೂಟಿ, ಕರಮಡಿ, ಹೊಳೆಆಲೂರು ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಕೊಳಚೆ ಕಾಲುವೆ ನಮ್ಮ ತಾಲೂಕಿನಲ್ಲಿ 18 ಕಿಮೀ ಇದೆ. ಈ ಕಾಲುವೆ ಸ್ವಚ್ಛತೆಗೆ 2025- 26ನೇ ಸಾಲಿನಲ್ಲಿ ಸರ್ಕಾರ ₹29 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಸರ್ಕಾರದಿಂದ ಬಂದ ಅನುದಾನವನ್ನು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕೊಳಚೆ ಕಾಲುವೆ ಸ್ವಚ್ಛ ಮಾಡದೇ ಹಣ ಲೂಟಿ ಮಾಡಿದ್ದಾರೆಂದು ಗಂಭೀರವಾದ ಆರೋಪ ಮಾಡಿದರು.ಕೊಳಚೆ ಕಾಲುವೆಗೆ ಬಂದಿರುವ ಅನುದಾನದಲ್ಲಿ ಭ್ರಷ್ಟಾಚಾರವಾಗಿದೆ. ಆದ್ದರಿಂದ ಕಾಲುವೆ ಸ್ವಚ್ಛ ಮಾಡಿಸುತ್ತೇವೆಂದು ಒಪ್ಪಿಗೆ ಪತ್ರ ಬರೆದು ಕೊಡಬೇಕೆಂದು ಅಧಿಕಾರಿಯನ್ನು ಕಚೇರಿಯಲ್ಲಿ ಕೂಡಿ ಹಾಕಿದಾಗ ನೀರಾವರಿ ನಿಗಮದ ಅಧಿಕಾರಿ ಪಿ.ಇ. ನಾಗರಾಜ ಅವರು ರೈತರಿಗೆ ಜು. 6ರಿಂದ ಕಾಲುವೆ ಸ್ವಚ್ಛಗೊಳಿಸಲು ಪ್ರಾರಂಭಿಸುತ್ತೇವೆಂದು ಭರವಸೆ ಪತ್ರ ಬರೆದು ಕೊಟ್ಟ ನಂತರ ರೈತರು ತಮ್ಮ ಹೋರಾಟವನ್ನು ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ, ಶಂಕರಗೌಡ ಶಿರಿಯಪ್ಪಗೌಡ್ರ, ಆನಂದ ಹಿರೇಗೌಡ್ರ, ಶರಣಪ್ಪ ಕರಿಯಪ್ಪನವರ, ಎಚ್.ಎಸ್. ಸಾಲಿಗೌಡ್ರ, ಬಸಯ್ಯ ಚಿಕ್ಕಮಠ, ಶಿವನಗೌಡ ಯಲ್ಲಪ್ಪಗೌಡ್ರ, ಮೌನೇಶ ಪಟ್ಟಣಶೆಟ್ಟಿ, ಶಂಕರು ಹಿರೇಹೊಳಿ, ನೂರಂದಯ್ಯ ಹೊರಗಿನಮಠ ಮುಂತಾದವರು ಇದ್ದರು. ಪ್ರವಚನ ಸಮಿತಿ ಅಧ್ಯಕ್ಷರ ನೇಮಕಮುಂಡರಗಿ: ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗಲಿರುವ ಪ್ರವಚನ ಕಾರ್ಯಕ್ರಮಕ್ಕೆ ಪ್ರಸ್ತುತ ವರ್ಷದ ಪ್ರವಚನ ಸಮಿತಿ ಅಧ್ಯಕ್ಷರನ್ನಾಗಿ ಪತ್ರಕರ್ತ ಸಿ.ಕೆ. ಗಣಪ್ಪನವರ ಅವರನ್ನು ಆಯ್ಕೆ ಮಾಡಲಾಯಿತು ಎಂದು ಕೊಟ್ರೇಶ ಅಂಗಡಿ ತಿಳಿಸಿದರು.ಪಟ್ಟಣದ ತೋಂಟದಾರ್ಯ ಮಠದಲ್ಲಿ ಪೂರ್ವಭಾವಿ ಸಭೆಯಲ್ಲಿ ಪ್ರವಚನ ಕಮೀಟಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದರು. ಉಪಾಧ್ಯಕ್ಷರಾಗಿ ಬಸಯ್ಯ ಗಿಂಡಿಮಠ, ಕಾರ್ಯದರ್ಶಿಯಾಗಿ ಶರಣಪ್ಪ ಕುಬಸದ, ಸಹ ಕಾರ್ಯದರ್ಶಿಯಾಗಿ ಸುರೇಶ ಬಣಗಾರ, ಖಜಾಂಚಿಯಾಗಿ ಶಿವಕುಮಾರ ಬೆಟಗೇರಿ, ಸಹ ಖಜಾಂಚಿಯಾಗಿ ವಿಶ್ವನಾಥ ಉಳ್ಳಾಗಡ್ಡಿಯವರನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ ವೇದಿಕೆ ಸಮನ್ವಯ ಸಮಿತಿ ಸದಸ್ಯರನ್ನಾಗಿ ಎಸ್.ಎಸ್. ಗಡ್ಡದ ಅವರನ್ನು ಸಹ ಆಯ್ಕೆ ಮಾಡಲಾಯಿತು.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜು. 26ರಿಂದ ಆ.9ರ ವರೆಗೆ 15 ದಿನಗಳ ನಿತ್ಯ ಸಂಜೆ 7 ಗಂಟೆಯಿಂದ ಎಡೆಯೂರು ತೋಂಟದ ಸಿದ್ದಲಿಂಗೇಶ್ವರ ಚರಿತಾಮೃತ ಪ್ರವಚನ ಜರುಗಲಿದೆ ಎಂದರು.ಸಭೆಯಲ್ಲಿ ಈಶಣ್ಣ ಬೆಟಗೇರಿ, ಶಿವಯೋಗಿ ಕೊಪ್ಪಳ, ಪಾಲಾಕ್ಷಿ ಗಣದಿನ್ನಿ, ಗಿರೀಶಗೌಡ ಪಾಟೀಲ, ಪವನ್ ಚೋಪ್ರಾ, ಶಿವಕುಮಾರ ಬೆಟಗೇರಿ, ವಿ.ಎಸ್.ಗಟ್ಟಿ, ಬಸವರಾಜ ದೇಸಾಯಿ, ಕಾಶೀಗಾವಿ, ಸದಾಶಿವಯ್ಯ ಕಬ್ಬೂರಮಠ, ಅಡಿವೆಪ್ಪ ಛಲವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.