ರೈತರು ಮಕ್ಕಳಿಗೆ ವಿದ್ಯೆ ಕೊಡಿ: ಡಾ.ಸುಧಾಕರ್‌

| Published : Jan 29 2025, 01:32 AM IST

ಸಾರಾಂಶ

ದೇವನಹಳ್ಳಿ: ನಮ್ಮ ರೈತರು ಎಷ್ಟೇ ದುಡಿಯಲಿ ತಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದರೆ ಎಲ್ಲಿ ಜ್ಞಾನದ ಸಂಪತ್ತಿರುತ್ತೆ ಅಲ್ಲಿ ಬೇರೆ ಸಂಪತ್ತು ಹುಡುಕಿಕೊಂಡು ಬರಲಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ತಿಳಿಸಿದರು.

ದೇವನಹಳ್ಳಿ: ನಮ್ಮ ರೈತರು ಎಷ್ಟೇ ದುಡಿಯಲಿ ತಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದರೆ ಎಲ್ಲಿ ಜ್ಞಾನದ ಸಂಪತ್ತಿರುತ್ತೆ ಅಲ್ಲಿ ಬೇರೆ ಸಂಪತ್ತು ಹುಡುಕಿಕೊಂಡು ಬರಲಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ತಿಳಿಸಿದರು.

ತಾಲೂಕಿನ ಚಪ್ಪರಕಲ್‌ ಗೇಟ್‌ ಬಳಿಯ ಕೃಷ್ಣೋದಯ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ದೇವನಹಳ್ಳಿ ಶಿಬಿರ ವ್ಯಾಪ್ತಿಯ ಬಮೂಲ್‌ ಟ್ರಸ್ಟ್‌ ಸಹಯೋಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಚೆಕ್‌ ವಿತರಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ರೈತರ ಮಕ್ಕಳು ಜಗತ್ತಿನಲ್ಲೆ ನಡೆಯುವ ಹೊಸ ಆವಿಷ್ಕಾರಗಳಿಗೆ ಉತ್ತಮ ಪೈಪೋಟಿ ನೀಡಬೇಕು. ಜಗತ್ತಿನ ಆರ್ಥಿಕ ಮಹಾ ಶಕ್ತಿಗಳಲ್ಲಿ ನಮ್ಮ ದೇಶ ಐದನೇ ಸ್ಥಾನದಲ್ಲಿದೆ. ನಮ್ಮ ಯುವಜನತೆ ಮನಸ್ಸು ಮಾಡಿದರೆ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿಸಬಹುದು ಎಂದು ಹೇಳಿದರು. ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದರೆ ಲೀಟರ್‌ ಹಾಲಿಗೆ 7 ರು. ಪ್ರೋತ್ಸಾಹ ಧನ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ 700 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದಾರೆ. ಹೈನುಗಾರಿಕೆ ಕೂಡ ಕೈಗಾರಿಕೆ ಆಗಬೇಕು ಎಂದರು.

ದೊಡ್ಗಡಬಳ್ಳಾಪುರ ಬಮೂಲ್‌ ನಿರ್ದೇಶಕ ಬಿ.ಸಿ.ಆನಂದಕುಮಾರ್‌ ಮಾತನಾಡಿ, ರಾಜಕಾರಣಿಗಳ ಕೈಗೊಂಬೆಯಾಗಿ ಸಹಕಾರ ಸಂಘಗಳು ನಡೆಯುತ್ತಿವೆ. ಸರ್ಕಾರ ಮೊದಲು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ತೆಗೆಯಬೇಕು. ತೆರಿಗೆ ಕಟ್ಟುವವರು ಜನರಲ್‌ ಆಗಬೇಕು. ಉಳಿದೆಲ್ಲವರು ಒಂದೇ ಕೆಟಗರಿ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ. ಮುನೇಗೌಡ, ಬಮೂಲ್‌ ಅಧ್ಯಕ್ಷ ಎಚ್‌.ಪಿ.ರಾಜಕುಮಾರ್‌ ಮಾತನಾಡಿದರು. ಬಮೂಲ್‌ ಅಧಿಕಾರಿ ಶ್ರೀಧರಮೂರ್ತಿ, ಶಿಬಿರದ ಉಪ ವ್ಯವಸ್ಥಾಪಕ ಡಾ.ಎಸ್‌.ರಾಜೇಶ್‌ ಬಮೂಲ್‌ ನಿರ್ದೇಶಕ ಬಿ.ಶ್ರೀನಿವಾಸ್‌ ಇತರರಿದ್ದರು.

(ಫೋಟೊ ಕ್ಯಾಪ್ಷನ್‌)

ದೇವನಹಳ್ಳಿ ತಾಲೂಕು ಚಪ್ರಕಲ್‌ ಬಳಿ ಇರುವ ಕೃಷ್ಣೋದಯ ಕಲ್ಯಾಣ ಮಂದಿರದಲ್ಲಿ ನಡೆದ ಸಮಾರಂಬವನ್ನು ಸಂಸದ ಡಾ. ಸುಧಾಕರ್‌ ಉಧ್ಘಾಟಿಸಿದರು., ಬಮೂಲ್‌ ಅಧ್ಯಕ್ಷ ರಾಜಕುಮಾರ್‌ ಹಾಗೂ ಬಿ. ಶ್ರೀನಿವಾಸ್‌ ಇದ್ದಾರೆ

ಬಮೂಲ್‌ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಂಸದ ಡಾ. ಸುಧಾಕರ್‌ ಪ್ರತಿಭಾ ಪುರಸ್ಕಾರ ನೀಡಿದರು, ಬಿ. ಮುನೇಗೌಡ ಇದ್ದಾರೆ