ಕೃಷ್ಣಾ ಭಾಗದ ರೈತರಿಗೊಂದು ನ್ಯಾಯ, ಭೀಮಾನದಿ ಭಾಗದ ರೈತರಿಗೊಂದು ನ್ಯಾಯ ಎಂದು ತಾರತಮ್ಯ ಮಾಡಿದರೇ ಭೀಮಾ ಭಾಗದ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ.ಪ್ರತಿ ಟನ್ ಕಬ್ಬಿಗೆ 3600 ರೂ.ಗಳು ನೀಡಬೇಕು ಎಂದು ಆಗ್ರಹಿಸಿ ರೈತರು ಪ್ರಶಾಂತ ಲಾಳಸಂಗಿ ನೇತೃತ್ವದಲ್ಲಿ ಎಸಿ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ಕೃಷ್ಣಾ ಭಾಗದ ರೈತರಿಗೊಂದು ನ್ಯಾಯ, ಭೀಮಾನದಿ ಭಾಗದ ರೈತರಿಗೊಂದು ನ್ಯಾಯ ಎಂದು ತಾರತಮ್ಯ ಮಾಡಿದರೇ ಭೀಮಾ ಭಾಗದ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ.ಪ್ರತಿ ಟನ್ ಕಬ್ಬಿಗೆ 3600 ರೂ.ಗಳು ನೀಡಬೇಕು ಎಂದು ಆಗ್ರಹಿಸಿ ರೈತರು ಪ್ರಶಾಂತ ಲಾಳಸಂಗಿ ನೇತೃತ್ವದಲ್ಲಿ ಎಸಿ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.ಬರಗಾಲದಲ್ಲಿ ರೈತರು ತೀವೃ ತೊಂದರೆ ಅನುಭವಿಸುತ್ತಿದ್ದಾರೆ.ಭೀಮಾನದಿ ಭಾಗದ ಉಪ ವಿಭಾಗ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳ ಸಭೆ ಕಬ್ಬಿನ ದರ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ಕಾರ್ಖಾನೆಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುತ್ತದೆ. ಕಬ್ಬಿನ ಬೆಲೆಯಲ್ಲಿ ಕೃಷ್ಣಾ, ಭೀಮಾ ಎಂದು ತಾರತಮ್ಯ ಮಾಡಿದರೆ ರೈತರು ಸಹಿಸುವುದಿಲ್ಲ.ರೈತರಲ್ಲಿ ತಾರತಮ್ಯ ನೀತಿ ಅನುಸರಿಸಿದರೇ ರಾಷ್ಟ್ರೀಯ ಹೆದ್ದಾರಿ ಸೇರಿ ಜಿಲ್ಲೆಯ ಗ್ರಾಮೀಣ, ನಗರ ರಸ್ತೆಗಳು ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಕೃಷ್ಣಾ, ಭೀಮಾ ಭಾಗದ ರೈತರ ಕಬ್ಬಿಗೆ ಒಂದೇ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ,ರೈತ ಮುಖಂಡ ಬಾಳು ಮುಳಜಿ, ಪ್ರಶಾಂತ ಲಾಳಸಂಗಿ, ಅಪ್ಪು ಮಸಳಿ, ಶ್ರೀಶೈಲ ಮುಜಗಾರ, ಸುನೀಲ ಕೋಳಿ, ಮಾಳಪ್ಪ ಬಳಗಾರ, ಸಾಗರ ಪ್ರಧಾನಿ, ಮಾಯಪ್ಪ ರೂಗಿ, ಮಲ್ಲು ಬಳ್ಳಾರಿ ಇತರರು ಉಪಸ್ಥಿತರಿದ್ದರು.