ರಚನಾತ್ಮಕ ಕೆಲಸಗಳ ಮೂಲಕ ರೈತ ಚಳವಳಿ ಕಟ್ಟಬೇಕು: ದರ್ಶನ್ ಪುಟ್ಟಣ್ಣಯ್ಯ

| Published : Sep 04 2025, 01:00 AM IST

ರಚನಾತ್ಮಕ ಕೆಲಸಗಳ ಮೂಲಕ ರೈತ ಚಳವಳಿ ಕಟ್ಟಬೇಕು: ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ, ಆರೋಗ್ಯ, ಕೃಷಿ, ಯುವಜನತೆ, ಪ್ರವಾಸೋದ್ಯಮ, ಪರಿಸರ, ವಿಜ್ಞಾನ, ಹವಮಾನ ವೈಪರಿತ್ಯ, ಸರ್ಕಾರದ ಜವಾಬ್ದಾರಿಗಳು ಸೇರಿದಂತೆ 12 ಅಂಶಗಳನ್ನೊ ಒಳಗೊಂಡತೆ ಪುಟ್ಟಣ್ಣಯ್ಯ ಫೌಂಡೇಷನ್ ಹಾಗೂ ವಿವಿಧ ಸಂಸ್ಥೆಗಳ ಜತೆಗೂಡಿ ಸ್ವರಾಜ್ ಉತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಚನಾತ್ಮಕ ಕೆಲಸಗಳ ಮೂಲಕ ರೈತಸಂಘ ರೈತ ಚಳವಳಿಯನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬುಧವಾರ ನಡೆದ ರೈತಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 80ರ ದಶಕದಲ್ಲಿ ಇದ್ದಂತ ರೈತ ಸಂಘಟನೆಯನ್ನು ಮತ್ತೆ ಕಟ್ಟಬೇಕು ಎಂಬ ಕನಸು ಹೊತ್ತು ನಾನು ಕೆಲಸ ಮಾಡುತ್ತಿದ್ದೇನೆ. ನಾವೆಲ್ಲರೂ ರಚನಾತ್ಮಕ ಕೆಲಸಗಳು, ಹೋರಾಟ ಮಾಡಬೇಕು ಎಂದರು.

ಗ್ರಾಮೀಣ ಪ್ರದೇಶದ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿದರೆ ಮಾತ್ರ ಜನರು ರೈತಸಂಘದ ಕಡೆಗೆ ಒಲವು ತೋರುತ್ತಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸ್ವರಾಜ್ ಉತ್ಸವ ನಡೆಸುವ ಮೂಲಕ ಮುಂದಿನ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಸ್ವಾವಲಂಭನೆ ಮಾಡಬೇಕು ಉದ್ದೇಶ ಹೊಂದಿದ್ದೇವೆ ಎಂದರು.

ಶಿಕ್ಷಣ, ಆರೋಗ್ಯ, ಕೃಷಿ, ಯುವಜನತೆ, ಪ್ರವಾಸೋದ್ಯಮ, ಪರಿಸರ, ವಿಜ್ಞಾನ, ಹವಮಾನ ವೈಪರಿತ್ಯ, ಸರ್ಕಾರದ ಜವಾಬ್ದಾರಿಗಳು ಸೇರಿದಂತೆ 12 ಅಂಶಗಳನ್ನೊ ಒಳಗೊಂಡತೆ ಪುಟ್ಟಣ್ಣಯ್ಯ ಫೌಂಡೇಷನ್ ಹಾಗೂ ವಿವಿಧ ಸಂಸ್ಥೆಗಳ ಜತೆಗೂಡಿ ಸ್ವರಾಜ್ ಉತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜನರು ಹೇಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಿದೆ. ಇದು ಪಕ್ಷಾತೀತವಾಗಿ ಎಲ್ಲಾ ರೈತರಿಗೂ ಅನುಕೂಲವಾಗಲಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸರ್ಕಾರಗಳೇ ಎಲ್ಲಾ ಕೆಲಸ ಮಾಡಲು ಸಾಧ್ಯವಿಲ್ಲ. ಸರ್ಕಾರ ಸೌಲಭ್ಯಗಳು ಸಹ ಶೇ.80ರಷ್ಟು ಮಂದಿ ಜನರಿಗೆ ತಲುಪುತ್ತಿಲ್ಲ. ನಾವೆಲ್ಲರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬೇಕು. ರೈತರ ಆದಾಯ ಹೆಚ್ಚಿಸದೆ ಹೊರತು ದೇಶದ ಪ್ರಗತಿ ಎಂದಿಗೂ ಸಾಧ್ಯವಾಗುವುದಿಲ್ಲ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರು ಸಾಕಷ್ಟು ಮುಂದಾಲೋಚನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪ್ರಚಾರದ ಕೊರತೆ ಇದೆ. ಮೊದಲು ಪಟ್ಟಣದಲ್ಲಿ ರೈತಸಂಘದ ಕಚೇರಿ ಆರಂಭಿಸಿದರೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ನಡೆಯಲಿದೆ ಎಂದರು.

ಈ ವೇಳೆ ಸಂಶೋಧಕಿ ಕವಿತ ಕುರಗುಂಟೆ, ರೈತಸಂಘದ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯ್‌ಕುಮಾರ್, ತಾಲೂಕು ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.