ಡೈರಿ ಅವ್ಯವಹಾರ ಖಂಡಿಸಿ ರೈತರ ಪ್ರತಿಭಟನೆ

| Published : Jul 27 2025, 01:49 AM IST

ಡೈರಿ ಅವ್ಯವಹಾರ ಖಂಡಿಸಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಕುಂಡಿ: ನಂಜನಗೂಡು ತಾಲೂಕಿನ ತರಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಸಾಮೂಹಿಕ ನಾಯಕತ್ವ ಹಸಿರು ಸೇನೆಯ ರೈತ ಸಂಘದ ಮುಖಂಡರು ಡೇರಿ ಮುಂಭಾಗ ಪ್ರತಿಭಟಿಸಿದರು.

ಮಲ್ಕುಂಡಿ: ನಂಜನಗೂಡು ತಾಲೂಕಿನ ತರಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಸಾಮೂಹಿಕ ನಾಯಕತ್ವ ಹಸಿರು ಸೇನೆಯ ರೈತ ಸಂಘದ ಮುಖಂಡರು ಡೇರಿ ಮುಂಭಾಗ ಪ್ರತಿಭಟಿಸಿದರು.

ಗ್ರಾಮದ ಮುಖಂಡ ಕೆ.ಟಿ. ನಟರಾಜ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯು ಹಾಲು ಉತ್ಪಾದಕರಿಗೆ ಯಾವುದೇ ಬೋನಸ್ ನೀಡದೆ ಸುಮಾರು ಎರಡು ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ, 20 ವರ್ಷದಿಂದ ಯಾವುದೇ ಲೆಕ್ಕ ಪತ್ರಗಳನ್ನು ನೀಡದೆ ಹಾಲು ಉತ್ಪಾದಕರಿಗೆ ವಂಚನೆ ಮಾಡಲಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಒಕ್ಕೂಟಕ್ಕೆ ತನಿಖೆಗಾಗಿ ಮನವಿ ಮಾಡಿದರು.

ಏನು ಪ್ರಯೋಜನವಾಗಿಲ್ಲ ಅಧಿಕಾರಿಗಳೆ ಸಮಿಲಾಗಿರಬಹುದು ಎಂದು ರೈತರು ಆರೋಪಿಸಿದ್ದಾರೆ, ಭ್ರಷ್ಟಾಚಾರ ಮಾಡಿರುವ ಕಾರ್ಯನಿರ್ವಾಹಣಾಧಿಕಾರಿಯನ್ನು ಅಮಾನತು ಮಾಡಿ, ಅವರ ಬಗ್ಗೆ ಯಾವುದೇ ತನಿಖೆ ನಡೆಸದೆ ಮತ್ತೆ ಅವರನ್ನು ಕಾರ್ಯನಿರ್ವಹಿಸಿ ಎಂದು ಒಕ್ಕೂಟದ ಅಧಿಕಾರಿಗಳು ಆದೇಶ ನೀಡಲಾಗಿದೆ ಎನ್ನಲಾಗಿದೆ. ಇದರ ಬಗ್ಗೆ ಒಕ್ಕೂಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳಬೇಕು ಎಂದು ಒತ್ತಾಯಿಸಿದರು.

ಸಾಮೂಹಿಕ ನಾಯಕತ್ವದ ಹಸಿರು ಸೇನೆಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ಮಾತನಾಡಿ, ಗ್ರಾಮದಲ್ಲಿ ರೈತರು ಕಷ್ಟಪಟ್ಟು ಹಸುಗಳನ್ನು ಸಾಕಿ ಅವರ ಜೀವನಕ್ಕಾಗಿ ಹಾಲನ್ನು ಶೇಖರಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ರೈತರ ಹಣ ಲೂಟಿ ಮಾಡುವುದು ಸರಿಯಲ್ಲ ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ ಎರಡು ಕೋಟಿ ಗುಳುಂ ಮಾಡಿರುವ ಆಡಳಿತ ಮಂಡಳಿಯನ್ನು ತಕ್ಷಣ ವಜಾಗೊಳಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬಸವರಾಜ್, ಶಿವಪ್ಪ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ, ಬಸವರಾಜಪ್ಪ, ಚನ್ನಪಾಜಿನಾಯಕ, ಶಿವಕುಮಾರ್, ಬಸವರಾಜ್, ಗಿರೀಶ್, ಮಹೇಶ್, ಹರೀಶ್, ಕುಮಾರ್, ಚಾಮರಾಜು, ನಂಜುಂಡ, ನಾಗರಾಜು ರೈತರು ಇದ್ದರು.

-----------

ಹಾಲು ಉತ್ಪಾದಕರ ಸಂಘದಲ್ಲಿ ಯಾವುದೇ ಭ್ರಷ್ಟಚಾರ ನಡೆದಿಲ್ಲ, ಒಕ್ಕೂಟದಲ್ಲಿ ತನಿಖೆ ನಡೆದು ಯಾವುದೇ ಭ್ರಷ್ಟಚಾರ ನಡೆದಿಲ್ಲ ಎಂದು ಮತ್ತೆ ನನಗೆ ಕಾರ್ಯನಿರ್ವಹಿಸಲು ಆದೇಶ ಪತ್ರ ನೀಡಲಾಗಿದೆ.

- ಮಹೇಶ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.