ಲಿಂಕ್‌ ಕಾಮಗಾರಿ ವಿರುದ್ಧ ರೈತರ ಪ್ರತಿಭಟನೆ

| Published : Apr 23 2025, 12:36 AM IST

ಸಾರಾಂಶ

ತಾಲೂಕು ಕಂದಸಂದ್ರವ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ರೈತರು ಹಾಗೂ ಗ್ರಾಮಸ್ಥರು ತಡೆಯೊಡ್ಡಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕು ಕಂದಸಂದ್ರವ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ರೈತರು ಹಾಗೂ ಗ್ರಾಮಸ್ಥರು ತಡೆಯೊಡ್ಡಿದ ಘಟನೆ ನಡೆದಿದೆ. ಈ ಹಿಂದೆ ರೈತರು ಪ್ರತಿಭಟನೆ ಮಾಡಿದ್ದ ಕಾರಣ ಇಂದು ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಎಂಜಿನಿಯರ್ ಗಳು ಪೊಲೀಸ್ ಸಮೇತ ಕಾಮಗಾರಿ ಕೆಲಸ ಮಾಡಲು ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ರೈತರು ಗ್ರಾಮಸ್ಥರು ಕಾಮಗಾರಿ ನಡೆಸದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ವೇಳೆ ಮಾತನಾಡಿದ ರೈತ ಗಂಗಣ್ಣ ಮಾತನಾಡಿ ಕಾಮಗಾರಿ ಬಗ್ಗೆ ಕೆಲಸ ಮಾಡಬಾರದೆಂದು ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಈ ಜಾಗದಲ್ಲಿ ಕೆಲಸ ಮಾಡಬಾರದೆಂದು ತಡೆಯಾಜ್ಞೆ ಇದೆ. ಹೀಗಿರುವಾಗ ಪೊಲೀಸರನ್ನು ಮುಂದೆ ಬಿಟ್ಟು ಕಾಮಗಾರಿ ಕೆಲಸ ಮಾಡುತ್ತಿರುವುದು ಖಂಡನೀಯ. ಜಿಲ್ಲೆಯ ರೈತರಿಗೆ ದೊಡ್ಡ ಅನ್ಯಾಯವಾಗಿದೆ. ಅನ್ನ ನೀಡುವ ರೈತರ ಬಾಯಿಗೆ ಮಣ್ಣು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.