ಬೈರಮಂಗಲ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.
ರಾಮನಗರ:
ಬಿಡದಿ ಟೌನ್ ಶಿಪ್ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಗೆ ದರ ನಿಗದಿ ಪಡಿಸಿರುವುದನ್ನು ಖಂಡಿಸಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.ಬೈರಮಂಗಲ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು. ವೃತ್ತದಲ್ಲಿ ರೈತರು ಧರಣಿ ಕುಳಿತಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿತ್ತು.
ಜನಪರ ನೋಟ - ರೈತ ಪರ ಹೋರಾಟ - ನಮ್ಮ ನಡೆ ರೈತರ ಕಡೆ ಘೋಷಣೆ ಅಡಿಯಲ್ಲಿ ಬಿಜೆಪಿ ರೈತ ಮೋರ್ಚಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರೇಟರ್ ಬೆಂಗಳೂರು ಭೂ ಸ್ವಾಧೀನ ವಿರೋಧಿಸಿ ಬಿಡದಿಯ ಬಾಲಗಂಗಾಧರನಾಥ ವೃತ್ತದಿಂದ ಬೈರಮಂಗಲ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.ಈ ಯೋಜನೆಗೆ ಸರ್ಕಾರದ ದರ ನಿಗದಿ ಬೇಕಿಲ್ಲ, ಟೌನ್ ಶಿಪ್ ಗೆ ಭೂಮಿ ಕೊಡುವುದಿಲ್ಲ. ರೈತರ ಒಪ್ಪಿಗೆ ಇಲ್ಲದೇ ಜಿಲ್ಲಾಡಳಿತ ಭೂಮಿಗೆ ದರ ನಿಗದಿ ಮಾಡಿದೆ. ರೈತರನ್ನು ಕಡೆಗಣಿಸಿ ಜಿಲ್ಲಾಡಳಿತ ಭೂಸ್ವಾಧೀನ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಬಿಡದಿ ಟೌನ್ ಶಿಪ್ ಗೆ ಶೇ.80 ರಷ್ಟು ರೈತರ ವಿರೋಧ ಇದ್ದರೂ ಬಲವಂತವಾಗಿ ಭೂಮಿ ಕಸಿಯಲಾಗುತ್ತಿದೆ. ಇದು ರೈತ ವಿರೋಧಿ ಸರ್ಕಾರವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಬಾಲಕೃಷ್ಣ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ನಿರತ ರೈತರನ್ನು ಮನವೊಲಿಸಲು ಪೊಲೀಸರು ಹರಸಾಹಸ ಮಾಡಿದರು ಪ್ರಯೋಜನವಾಗಲಿಲ್ಲ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸಂಜೆಯಾಗುತ್ತಿದ್ದಂತೆ ಪ್ರತಿಭಟನೆಯಲ್ಲಿ ಶಾಲಾ ಕಾಲೇಜು ಮಕ್ಕಳು ಭಾಗವಹಿಸಿದ್ದರಿಂದ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಕೊನೆಗೆ ರೈತರು ರಸ್ತೆ ತಡೆ ಕೈಬಿಟ್ಟು ಮೆಣದ ಬತ್ತಿ ಹಿಡಿದು ಧರಣಿ ಕುಳಿತರು. 2ಕೆಆರ್ ಎಂಎನ್ 5.ಜೆಪಿಜಿ
ಬೈರಮಂಗಲ ವೃತ್ತದಲ್ಲಿ ರೈತರು ಮೆಣದ ಬತ್ತಿ ಹಿಡಿದು ಧರಣಿ ನಡೆಸಿದರು.