ಸಾರಾಂಶ
ಪಾಂಡವಪುರ: ಎಲ್‌ಬಿಎಲ್‌ಎಲ್ ನಾಲೆಗೆ ಸಮರ್ಪಕ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಹರವು ಗ್ರಾಮದ ರೈತರು ಶುಕ್ರವಾರ ಪಟ್ಟಣದ ವಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಮದ ಹೊರವಲಯದ ಎಲ್‌ಬಿಎಲ್‌ಎಲ್ ನಾಲೆ ಕಾಮಗಾರಿಯನ್ನು 13 ವರ್ಷಗಳ ಹಿಂದೆಯೇ ಮಾಡಿದ್ದಾರೆ. ಈ ಕಾಮಗಾರಿ ಅಸಮರ್ಪಕವಾಗಿದೆ. ಕೊನೆ ಭಾಗದ ರೈತರಿಗೆ ನಾಲೆ ನೀರು ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಸಿ ನಾಲೆ, ಸಿಡಿಎಸ್ ನಾಲೆಗೆ ನೀರು ಬಿಟ್ಟು ನಾಲ್ಕು ದಿನವಾದರೂ ಸಹ ನಮ್ಮ ಜಮೀನಿಗೆ ತಲುಪುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದಿರುವ ಬೆಳೆಯನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಎಇ, ಎಇಇ, ಎಸ್‌ಸಿಗಳಿಗೂ ಮನವಿ ಮಾಡಿದರೂ ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಶ್ರೀನಿವಾಸ್, ಗೋಪಾಲ, ನಟರಾಜು, ವಾಸು, ನಾಗಣ್ಣ, ಕುಮಾರ್, ರಮೇಶ್, ಆನಂದ್, ಸುರೇಶ್, ಜಗದೀಶ್, ಸತೀಶ, ಎಚ್.ಕೆ.ಜಗದೀಶ, ಎಚ್.ಕೆ.ಜ್ಞಾನೇಶ, ಲೋಕೇಶ್, ಪ್ರಭಾಕರ, ಶ್ರೀನಿವಾಸ್, ಮಹದೇವು, ನಂದೀಶ, ಗೋವಿಂದ್ ಸೇರಿದಂತೆ ಹಲವರು ಹಾಜರಿದ್ದರು.
)
;Resize=(128,128))
;Resize=(128,128))
;Resize=(128,128))