ಪ್ರವಾಸಿ ಮಂದಿರದಲ್ಲಿ ರೈತರ ಪ್ರತಿಭಟನೆ

| Published : Jan 21 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಬ್ಬಿಗೆ ಬೆಂಬಲ‌ ಬೆಲೆ, ಎಪಿಎಂಸಿಗಳಲ್ಲಿ ರೈತರ ಸಮಸ್ಯೆಗಳು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ರೈತಸಂಘ, ಹಸಿರುಸೇನೆ ಹಾಗೂ ಏಕೀಕರಣ ಸಮಿತಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಮನೆಮುಂದೆ ಧರಣಿ ಮಾಡಲು ನಿರ್ಧರಿಸಿದ್ದರು. ಆದರೆ, ಸಚಿವ ಶಿವಾನಂದ ಪಾಟೀಲರು ರೈತರೊಂದಿಗೆ ಸಭೆ ಮಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ನೂತನ ಪ್ರವಾಸಿ ಮಂದಿರದಲ್ಲೇ ಊಟ ತಯಾರಿಸಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಬ್ಬಿಗೆ ಬೆಂಬಲ‌ ಬೆಲೆ, ಎಪಿಎಂಸಿಗಳಲ್ಲಿ ರೈತರ ಸಮಸ್ಯೆಗಳು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ರೈತಸಂಘ, ಹಸಿರುಸೇನೆ ಹಾಗೂ ಏಕೀಕರಣ ಸಮಿತಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಮನೆಮುಂದೆ ಧರಣಿ ಮಾಡಲು ನಿರ್ಧರಿಸಿದ್ದರು. ಆದರೆ, ಸಚಿವ ಶಿವಾನಂದ ಪಾಟೀಲರು ರೈತರೊಂದಿಗೆ ಸಭೆ ಮಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ನೂತನ ಪ್ರವಾಸಿ ಮಂದಿರದಲ್ಲೇ ಊಟ ತಯಾರಿಸಿ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಪ್ರವಾಸಿ ಮಂದಿರದಲ್ಲಿ ಸಚಿವ ಶಿವಾನಂದ ಪಾಟೀಲರು ರೈತರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಸಭೆ ನಡೆಸಿದರು. ಈ ವೇಳೆ ಸಭೆಯಲ್ಲಿ ಸಚಿವರೆದುರು ತಮ್ಮ‌ ಬೇಡಿಕೆಗಳ‌ ಬಗ್ಗೆ ರೈತ ಮುಖಂಡರು ಚರ್ಚಿಸಿದರು. ರೈತರ ಸಮಸ್ಯೆಗಳನ್ನು ಆಲಿಸಿದ ಸಚಿವರು ಸಾಧ್ಯವಾದ ಮಟ್ಟಿಗೆ ಇಡೇರಿಸುವ ಭರವಸೆ ನೀಡಿದರು.

ಈ ವೇಳೆ ರೈತರ ಬೇಡಿಕೆಗಳು ಈಡೇರದಿದ್ದರೆ ಸಚಿವರ ಮನೆ ಎದರು ಅಹೋರಾತ್ರಿ ಧರಣಿ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು. ಅಲ್ಲದೇ, ಸಚಿವರ ಭರವಸೆ ಸಿಕ್ಕ ನಂತರ ರೈತರು ಹೋರಾಟ ಕೈಬಿಟ್ಟರು. ರೈತರ ಪ್ರತಿಭಟನೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿ, ತೂಕದಲ್ಲಿ ಆಗುತ್ತಿರುವ ಮೋಸ ತಡೆಯುವುದು, ತೊಗರಿ ಬೆಳೆಗೆ ಬೆಂಬಲ ಬೆಲೆ ಸೇರಿ ಹಲವು ವಿಚಾರಗಳ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದೇವೆ. ಅವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಹೋರಾಟಕ್ಕೆ ಮುಂದಾಗುತ್ತೇವೆ ರೈತ ಮುಖಂಡ ಸಂಗಮೇಶ ಸಗರ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ಮಹೇಶಗೌಡ ಸುಬೇದಾರ, ಶರಣಪ್ಪ ದೊಡ್ಡಮನಿ, ರಾಮನಗೌಡ ಪಾಟೀಲ, ಸೋಮು ವಿಜಯಪುರ, ಈರಪ್ಪ ಕುಳೇಕುಮಟಗಿ, ಮಾಳು ಪೂಜಾರ ಸೇರಿ ಹಲವರು ಇದ್ದರು.