ಕೃಷಿ ತೋಟಗಾರಿಕೆ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ಕರೆಂಟ್ ನೀಡುತ್ತಿದ್ದು, ಇದರಿಂದ ಕಾಡುಪ್ರಾಣಿಗಳಿಂದ ಜೀವ ಭಯವಿದೆ. ರಾತ್ರಿ ಬದಲು ಹಗಲಿನ ವೇಳೆ ಕರೆಂಟ್ ನೀಡಬೇಕು ಎಂದು ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಜೆಸ್ಕಾಂ ಕಚೇರಿ ಎದುರು ರೈತರು ಸೋಮವಾರ ಪ್ರತಿಭಟಿಸಿದರು.

ಕುಕನೂರು: ಕೃಷಿ ತೋಟಗಾರಿಕೆ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ಕರೆಂಟ್ ನೀಡುತ್ತಿದ್ದು, ಇದರಿಂದ ಕಾಡುಪ್ರಾಣಿಗಳಿಂದ ಜೀವ ಭಯವಿದೆ. ರಾತ್ರಿ ಬದಲು ಹಗಲಿನ ವೇಳೆ ಕರೆಂಟ್ ನೀಡಬೇಕು ಎಂದು ತಾಲೂಕಿನ ಮಂಗಳೂರು ಗ್ರಾಮದ ಜೆಸ್ಕಾಂ ಕಚೇರಿ ಎದುರು ರೈತರು ಸೋಮವಾರ ಪ್ರತಿಭಟಿಸಿದರು.

ತಾಲೂಕಿನ ಮಂಗಳೂರು ಗ್ರಾಮದಲ್ಲಿರುವ ೧೧೦/೧೧ ಕೆವಿ ವಿದ್ಯುತ್ ಉಪ ಕೇಂದ್ರದ ಮುಂದೆ ಪ್ರತಿಭಟಿಸಿದ ರೈತರು, ರೈತರ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ ೫ ಗಂಟೆಗೆ ವಿದ್ಯುತ್ ಪೂರೈಸುತ್ತಿದ್ದು, ಆನಂತರ ವಿದ್ಯುತ್ ಸ್ಥಗಿತವಾಗುವುದರಿಂದ ನಮ್ಮ ಭಾಗದಲ್ಲಿ ಕರಡಿ ಹಾಗೂ ಕಾಡುಪ್ರಾಣಿಗಳ ಹಾವಳಿ ಇದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಾಗಲೆ ಕರಡಿ, ತೋಳ ಇತರ ಪ್ರಾಣಿಗಳು ರೈತರ ಮೇಲೆ ಸಮಸ್ಯೆಯನ್ನು ಮಾಡಿವೆ. ಕೂಡಲೆ ನಮ್ಮ ಬೇಡಿಕೆಯನ್ನು ಅಧಿಕಾರಿಗಳು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ್ರು ಕೋನನಗೌಡ್ರು, ಪ್ರಮುಖರಾದ ಸಣ್ಣಾಹನುಮಂತ ಸಣ್ಣಳ್ಳಿ, ಶಿವಾನಂದಪ್ಪ ಚಿಂಚರ್, ಮಾರುತಿ ಹಿರೇಹಳ್ಳಿ, ಶಂಕ್ರಪ್ಪ ಚಿಂಚರ್, ಗವಿಸಿದ್ದಪ್ಪ ಜಿನ್ನಾಪುರ, ಬಸವರಾಜ ಕೊರಮದಾರ, ಹನುಮಂತಪ್ಪ ಮಾಮನಿ, ಮುನಿಯಪ್ಪ ದನದಮನಿ, ಶಿವನಗೌಡ ದನದಮನಿ, ಅಂಬ್ರಪ್ಪ ಮದ್ಲೂರ್, ಗವಿಸಿದ್ದಪ್ಪ ಕನಗಣ್ಣನವರ್, ಮಲ್ಲಪ್ಪ ಕಲ್ಗುಡಿ, ಮಲ್ಲಪ್ಪ ಗೌಡ್ರು, ಗವಿಸಿದ್ದಪ್ಪ ಚಿಂಚರ್, ಮರಿಯಪ್ಪ ಹರಿಜನ, ಈರಪ್ಪ ಮಂಗಳೂರು, ವಿರೂಪಾಕ್ಷಿ ಹರಿಜನ, ಚೆನ್ನಪ್ಪ ಜಿನ್ನಾಪುರ್, ಷಣ್ಮುಖಪ್ಪ ದನದಮನಿ, ಹನುಮಂತಪ್ಪ ಡಗ್ಗಿ, ದ್ಯಾಮಣ್ಣ ದನದಮನಿ, ಶಿವು ಸಣ್ಣಹಳ್ಳಿ, ಹನುಮಂತಪ್ಪ ಚಿಂಚರ, ಶರಣಪ್ಪ ಮಾಲಿಗೌಡ್ರು ಇತರರು ಇದ್ದರು.